ಅಕ್ಷಯ್ ಕುಮಾರ್ ಜೊತೆ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ ಅರ್ಷದ್ ವಾರ್ಸಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಚಿತ್ರದಲ್ಲಿ ಅರ್ಷದ್ ವಾರ್ಸಿ ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಚಿತ್ರತಂಡ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ.

ಆಕ್ಷನ್ ಕಾಮಿಡಿ ಚಿತ್ರದಲ್ಲಿ ಅರ್ಷದ್ ವಾರ್ಸಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅಂದ್ಹಾಗೆ, ಅರ್ಷದ್ ವಾರ್ಸಿ ಅವರು 'ಮುನ್ನ ಭಾಯ್' ಹಾಗೂ 'ಗೋಲ್ ಮಾಲ್' ಚಿತ್ರದ ಸರಣಿಗಳಲ್ಲಿ ನಾಯಕನಟನ ಸ್ನೇಹಿತನ ಪಾತ್ರದಲ್ಲಿ ಮಿಂಚಿದ್ದರು.

ಕೃತಿ ಸನನ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಿರ್ದೇಶಕಿ ಆಗಬೇಕೆಂಬ ಕನಸು ಕಾಣುತ್ತಿರುವ ಪತ್ರಕರ್ತೆ ಪಾತ್ರದಲ್ಲಿ ಕೃತಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಗ್ಯಾಂಗ್‌ಸ್ಟರ್ ಪಾತ್ರ ಹಾಗೂ ಅರ್ಷದ್ ವಾರ್ಸಿ ಅಕ್ಷಯ್ ಸ್ನೇಹಿತನ ಪಾತ್ರದಲ್ಲಿ ಮಿಂಚಲಿದ್ದಾರೆ.

Akshay Kumar and Arshad Warsi teamed Up for Bachchan Pandey

ಸಾಜೀದ್ ನದಿಯಾದ್‌ವಾಲ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಷಯ್ ಕುಮಾರ್, ಕೃತಿ ಸನನ್, ಅರ್ಷದ್ ವಾರ್ಸಿಜೊತೆ ಮತ್ತೊಬ್ಬ ನಟಿ ಆಗಮನ ಆಗಲಿದೆ. ಸದ್ಯಕ್ಕೆ ಆ ನಟಿ ಯಾರು ಎನ್ನುವುದು ಗೌಪ್ಯವಾಗಿ ಉಳಿದಿದೆ.

ಅಂದ್ಹಾಗೆ, ಜನವರಿ ತಿಂಗಳಿನಿಂದ ಬಚ್ಚನ್ ಪಾಂಡೆ ಶೂಟಿಂಗ್ ಆರಂಭಿಸಿ ಮಾರ್ಚ್ ವರೆಗೂ ನಿರಂತರವಾಗಿ ಕೆಲಸ ಮಾಡಲಿದೆಯಂತೆ. ಅಕ್ಷಯ್ ಕುಮಾರ್, ಕೃತಿ ಸನನ್, ನಿರ್ದೇಶಕ ಫರ್ಹಾದ್ ಸಂಜಿ ಸೇರಿದಂತೆ ಇಡೀ ಚಿತ್ರತಂಡ 60 ದಿನಗಳ ಶೂಟಿಂಗ್‌ಗಾಗಿ ರಾಜಸ್ಥಾನದ ಜೈಸಲ್ಮೇರ್ ಗೆ ಹೋಗಲಿದ್ದಾರೆ,

More from Filmibeat

English summary
Bollywood actor Akshay Kumar and Arshad Warsi teamed for the first time for action-comedy Bachchan Pandey. Costars Kriti Sanon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X