ಲಾಕ್ ಡೌನ್ ನಡುವೆಯೂ ಅಕ್ಷಯ್ ಕುಮಾರ್ ಚಿತ್ರೀಕರಣ: ಫೋಟೋ ವೈರಲ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಲಾಕ್ ಡೌನ್ ನಡುವೆಯೂ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಸುಮಾರು ಎರಡು ತಿಂಗಳಿಂದ ಮನೆಯಲ್ಲಿಯೇ ಇದ್ದ ಅಕ್ಷಯ್ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಕ್ಷಯ್ ಮತ್ತು ನಿರ್ದೇಶಕ ಬಾಲ್ಕಿ ಹಾಗೂ ಇಡೀ ತಂಡ ಚಿತ್ರೀಕರಣ ಮಾಡುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

ಅಕ್ಷಯ್ ಕುಮಾರ್ ಲಾಕ್ ಡೌನ್ ನಡುವೆ ಶೂಟಿಂಗ್ , ಚಿತ್ರಗಳು ವೈರಲ್ | Akshay Kumar

ಸಂಪೂರ್ಣ ಮುನ್ನೆಚ್ಚರಿಕೆಯ ಕ್ರಮಗಳ ಜೊತೆಗೆ ಅಕ್ಷಯ್ ಮತ್ತು ತಂಡ ಚಿತ್ರೀಕರಣ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು, ಕೆಲವೇ ಕೆಲವು ಕ್ರ್ಯೂಗಳೊಂದಿಗೆ ಅಕ್ಷಯ್ ಕುಮಾರ್ ಮುಂಬೈನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.

ಅಂದ್ಹಾಗೆ ಅಕ್ಷಯ್ ಕುಮಾರ್ ಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ಯಾ? ಎಂದು ಯೋಚಿಸಬೇಡಿ. ಅಕ್ಷಯ್ ಕುಮಾರ್ ಶೂಟಿಂಗ್ ಮಾಡುತ್ತಿರುವುದು ಜಾಹಿರಾತಿಗಾಗಿ. ಸರ್ಕಾರದ ಜಾಹಿರಾತು ಚಿತ್ರೀಕರಣದಲ್ಲಿ ಅಕ್ಷಯ್ ಮತ್ತು ಬಾಲ್ಕಿ ಭಾಗಿಯಾಗಿದ್ದಾರೆ.

Akshay Kumar And Balki Shoot For Coronavirus Awareness Ad

ಲಾಕ್ ಡೌನ್ ನಂತರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಜಾಹಿರಾತು ಇದಾಗಿದೆ. ಲಾಕ್ ಡೌನ್ ನಂತರ ಯಾವೆಲ್ಲ ಮುನ್ನೆಚ್ಚರಿಗೆ ಕೈಗೊಳ್ಳಬೇಕು, ಸುರಕ್ಷತೆ ಮತ್ತು ಜವಾಬ್ದಾರಿಗಳ ಬಗ್ಗೆ ಆರೋಗ್ಯ ಸಚಿವಾಲಯದ ಜಾಹಿರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.

Akshay Kumar And Balki Shoot For Coronavirus Awareness Ad

ಸಾಮಾಜಿಕ ಅಂತರ, ಸ್ವಚ್ಛತೆ, ಸೋಂಕು ನಿವಾರಕ ಪರದೆ, ಮಾಸ್ಕ್ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಕೆಲಸ ಮಾಡುತ್ತಿರುವುದಾಗಿ ನಿರ್ದೇಶಕ ಬಾಲ್ಕಿ ತಿಳಿಸಿದ್ದಾರೆ. ಇನ್ನೂ ಸುಮಾರು ಎರಡು ತಿಂಗಳಿಂದ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿದ್ದು, ಮತ್ತೆ ಯಾವಾಗ ಪ್ರಾರಂಭವಾಗುತ್ತೆ ಎನ್ನುವುದು ಲಾಕ್ ಡೌನ್ ತೆರವುಗೊಳಿಸಿದ ನಂತರ ಗೊತ್ತಾಲಿದೆ.

More from Filmibeat

English summary
Bollywood Actor Akshay Kumar and Balki shoot for coronavirus awareness ad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X