ಬಡ ದಂಪತಿಯ ಸ್ಲಂ ಮನೆಗೆ ಮಗಳ ಜೊತೆ ಹೋದ ಅಕ್ಷಯ್ ಕುಮಾರ್
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಟಾಪ್ 10 ಪಟ್ಟಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಅಕ್ಷಯ್ ಕುಮಾರ್. ಬಾಲಿವುಡ್ ನ ಬಹುಬೇಡಿಕೆಯ ನಟ. ಸದ್ಯ ಅಕ್ಷಯ್ ಕುಮಾರ್ ನಟನೆಯ ಹೌಸ್ ಫುಲ್ 4 ಸಿನಿಮಾ ಬಿಡುಗಡೆಯಾಗಿ ಭರ್ಜರಿ ಬಿಸಿನೆಸ್ ಮಾಡ್ತಿದೆ.
ಇಂತಹ ಶ್ರೀಮಂತ ನಟ ನಟ ಅಕ್ಷಯ್ ಕುಮಾರ್ ತಮ್ಮ ಮಗಳನ್ನ ಕರೆದುಕೊಂಡು, ಸ್ಲಂನಲ್ಲಿ ವಾಸವಾಗಿರುವ ಬಡದಂಪತಿಯ ಮನೆಗೆ ಭೇಟಿ ನೀಡಿದ್ದಾರೆ.
ಬೆಳಿಗ್ಗೆ ಮಗಳು ನಿತಾರ ಜೊತೆಯಲ್ಲಿ ವಾಕಿಂಗ್ ಹೋಗಿದ್ದಾರೆ. ಈ ವೇಳೆ ಮಗಳಿಗೆ ಬಾಯಾರಿಕೆ ಆಗಿದೆ. ನೀರು ಬೇಕು ಎಂದು ಕೇಳಿದ್ದಾರೆ. ಆಗ, ಪಕ್ಕದಲ್ಲಿದ್ದ ಸ್ಲಂಗೆ ಭೇಟಿ ಕೊಟ್ಟ ಅಕ್ಷಯ್ ಕುಮಾರ್, ಬಡ ವೃದ್ದ ದಂಪತಿ ವಾಸವಾಗಿದ್ದ ಮನೆಗೆ ಹೋಗಿದ್ದಾರೆ.
ಅಕ್ಷಯ್ ಕುಮಾರ್ ಅವರನ್ನ ಖುಷಿಯಿಂದ ಬರಮಾಡಿಕೊಂಡು ಆ ಬಡದಂಪತಿ, ಕುಡಿಯಲು ನೀರು ಕೊಟ್ಟು, ಜೊತೆಗೆ ಬೆಲ್ಲ ಮತ್ತು ರೊಟ್ಟಿ ನೀಡಿ ಸತ್ಕರಿಸಿದ್ದಾರೆ. ಇದರಿಂದ ಅಕ್ಷಯ್ ಕುಮಾರ್ ತೀವ್ರ ಸಂತಸವಾಗಿದ್ದಾರೆ.

ಬಳಿಕ ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಕ್ಷಯ್, ''ಮಗಳಿಗೆ ಇಂದು ಒಂದೊಳ್ಳೆ ಜೀವನದ ಪಾಠ ಸಿಕ್ಕಿದೆ. ಆ ಬಡ ದಂಪತಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ'' ಎಂದಿದ್ದಾರೆ.
ಅಕ್ಷಯ್ ಕುಮಾರ್ ಅವರ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಷ್ಟೆ ದೊಡ್ಡ ನಟರಾದರೂ, ಜನಸಾಮನ್ಯರ ಬದುಕಿನೊಂದಿಗೆ ಬೆರೆಯುವುದು ನಿಜವಾದ ಮನುಷ್ಯನ ಸ್ವಭಾವ ಎಂದು ಸಂತಸ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











