For Quick Alerts
  ALLOW NOTIFICATIONS  
  For Daily Alerts

  'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್

  |

  ಹೇರಾ ಫೆರಿ, ಫಿರ್ ಹೇರಾ ಫೆರಿ, ಗರಂ ಮಸಾಲ, ವೆಲ್‌ಕಮ್, ಭೂಲ್ ಭುಲಯ್ಯ, ಮತ್ತು ಓ ಮೈ ಗಾಡ್ ಅಂತಹ ಚಿತ್ರಗಳ ಮೂಲಕ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಿರುವ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಜೋಡಿ ಮತ್ತೊಮ್ಮೆ ಒಟ್ಟಿಗೆ ಬರ್ತಿದೆ.

  ಕಳೆದ ಕೆಲವು ವರ್ಷಗಳಿಂದ ಹೇರಾ ಫೆರಿ 3 ಸಿನಿಮಾದ ಮೂಲಕ ಇವರಿಬ್ಬರ ಜೋಡಿ ಮತ್ತೆ ಬರ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಅಧಿಕೃತವಾಗಿ ಪ್ರಕಟಣೆಯಾಗಿರಲಿಲ್ಲ. ಇದೀಗ, ಓ ಮೈ ಗಾಡ್ ಮುಂದುವರಿದ ಭಾಗಕ್ಕಾಗಿ ಅಕ್ಷಯ್ ಮತ್ತು ಪರೇಶ್ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಈ ಕುರಿತು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದ್ದು, ಓ ಮೈ ಗಾಡ್ ಸೀಕ್ವೆಲ್ ಸಿದ್ಧವಾಗಲಿದೆ. ಸದ್ಯದಲ್ಲೇ ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ವರದಿ ಮಾಡಿದೆ.

  ಜಪಾನ್‌ನಲ್ಲಿ 'ಮಿಷನ್ ಮಂಗಲ್' ರಿಲೀಸ್: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಜಪಾನ್‌ನಲ್ಲಿ 'ಮಿಷನ್ ಮಂಗಲ್' ರಿಲೀಸ್: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ

  2012ರ ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗವನ್ನು ಅಶ್ವಿನಿ ವರ್ಧೆ ಮತ್ತು ಅಕ್ಷಯ್ ಕುಮಾರ್ ಜಂಟಿಯಾಗಿ ನಿರ್ಮಿಸಲು ಯೋಜಿಸಿದ್ದಾರಂತೆ. ಕಳೆದ ಆರು ತಿಂಗಳಿಂದ ಓ ಮೈ ಗಾಡ್ ಸ್ಕ್ರಿಪ್ಟ್ ಕೆಲಸದಲ್ಲಿ ಸ್ವತಃ ಅಕ್ಷಯ್ ಕುಮಾರ್ ತೊಡಗಿಕೊಂಡಿದ್ದಾರೆ.

  ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

  ಬೇರೆ ಸಿನಿಮಾಗಳ ಶೂಟಿಂಗ್ ನಡುವೆಯೂ ಅಶ್ವಿನಿ ವರ್ಧೆ ಜೊತೆ ಸಂಪರ್ಕದಲ್ಲಿದ್ದರು. ಸ್ಕ್ರಿಪ್ಟ್ ಕೆಲಸ ಮಾಡಿದ್ದರು. ಈಗ ಸ್ಕ್ರಿಪ್ಟ್ ಅಂತಿಮ ಕೆಲಸ ಮುಗಿದಿದೆ. ಚಿತ್ರದ ಪೂರ್ವ ತಯಾರಿ ಕೆಲಸ ನಡೆಯುತ್ತಿದ್ದು, ಸಮ್ಮರ್‌ವೊತ್ತಿಗೆ ಸಿನಿಮಾ ಶುರುವಾಗಬಹುದು ಎಂದು ಹೇಳಲಾಗಿದೆ.

  ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

  ನಿರ್ದೇಶಕರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. 2012ರಲ್ಲಿ ತೆರೆಕಂಡಿದ್ದ ಓ ಮೈ ಗಾಡ್ ಚಿತ್ರವನ್ನು ಉಮೇಶ್ ಶುಕ್ಲಾ ನಿರ್ದೇಶಿಸಿದ್ದರು. ನಂತರ ಈ ಚಿತ್ರ ತೆಲುಗಿನಲ್ಲಿ ಗೋಪಾಲ ಗೋಪಾಲ ಹಾಗೂ ಕನ್ನಡದಲ್ಲಿ ಮುಕುಂದಾ ಮುರಾರಿ ಹೆಸರಿನಲ್ಲಿ ರೀಮೇಕ್ ಆಗಿತ್ತು.

  English summary
  Bollywood actor Akshay Kumar and Paresh Rawal teams up for Oh My God 2. Shoot begins April 2021. official announcement very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X