For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್-ರೋಹಿತ್ ಶೆಟ್ಟಿ ನಡುವೆ ಮಾರಾಮಾರಿ: ಜಗಳ ಬಿಡಿಸಿದ ಪೊಲೀಸರು.!

  |

  ಒಂದು ಗಾಸಿಪ್ ಕಿವಿಗೆ ಬಿದ್ದ ಕೂಡಲೆ ಸಿನಿಮಾದವರು ಅದೆಲ್ಲ ಶುದ್ಧ ಸುಳ್ಳು ಎನ್ನಬಹುದು.. ಸತ್ಯ ಏನು ಎಂಬುದರ ಬಗ್ಗೆ ಸ್ಪಷ್ಟನೆ ಕೊಡಬಹುದು.. ಇದ್ಯಾವುದೂ ಬೇಡ ಅಂದ್ರೆ ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗದಿರಬಹುದು. ಆದ್ರೆ, ಇದೆಲ್ಲವನ್ನೂ ಸೈಡ್ ಗೆ ತಳ್ಳಿ.. ಗಾಳಿಸುದ್ದಿ ಹಬ್ಬಿಸಿದವರಿಗೆ ಬಿಸಿ ಮುಟ್ಟಿಸಲು ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ನಕಲಿ ಜಗಳ ಮಾಡಿಕೊಂಡಿದ್ದಾರೆ.

  ಹೌದು, 'ಅಕ್ಷಯ್ ಕುಮಾರ್-ರೋಹಿತ್ ಶೆಟ್ಟಿ ನಡುವೆ ಮಾರಾಮಾರಿ: ಜಗಳ ಬಿಡಿಸಿದ ಪೊಲೀಸರು.!' ಎಂಬ ಶೀರ್ಷಿಕೆ ಓದಿದ ಕೂಡಲೆ ಇದೇನಪ್ಪಾ ಅಂತ ನೀವು ಗಾಬರಿ ಆಗಿದ್ರೆ, ಸ್ವಲ್ಪ ತಡೆಯಿರಿ.. ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ನಡುವೆ ಆಗಿರುವುದು ಕಾಮಿಡಿ ಜಗಳ ಅಷ್ಟೇ.!

  ಆಮೀರ್ ಖಾನ್ ಗಾಗಿ ಅಕ್ಷಯ್ ಕುಮಾರ್ ಹೀಗೆ ಮಾಡಿದ್ರಾ.?ಆಮೀರ್ ಖಾನ್ ಗಾಗಿ ಅಕ್ಷಯ್ ಕುಮಾರ್ ಹೀಗೆ ಮಾಡಿದ್ರಾ.?

  ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಸದ್ಯ 'ಸೂರ್ಯವಂಶಿ' ಎಂಬ ಚಿತ್ರ ತಯಾರಾಗುತ್ತಿದೆ. 'ಸೂರ್ಯವಂಶಿ' ಚಿತ್ರದ ಸೆಟ್ ನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ನಟ ಅಕ್ಷಯ್ ಕುಮಾರ್ ನಡುವೆ ಗಲಾಟೆ ನಡೆದಿದೆ... ಕೈಕೈ ಮಿಲಾಯಿಸಿದ ಇವರಬ್ಬರ ಜಗಳವನ್ನ ಕರಣ್ ಜೋಹರ್ ಬಿಡಿಸಿದ್ದಾರಂತೆ ಎಂಬ ಅಂತೆ-ಕಂತೆ ಇತ್ತೀಚೆಗಷ್ಟೇ ಬಾಲಿವುಡ್ ಅಂಗಳದಲ್ಲಿ ಹಬ್ಬಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ಕೊಡಲು ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ಫೇಕ್ ಗುದ್ದಾಟ ನಡೆಸಿದ್ದಾರೆ. ಆ ವಿಡಿಯೋವನ್ನ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ಅಕ್ಷಯ್ ಕುಮಾರ್ ತೊಟ್ಟ 'ಬೆಲ್ ಬಾಟಂ' ಕನ್ನಡದಲ್ವಂತೆಅಕ್ಷಯ್ ಕುಮಾರ್ ತೊಟ್ಟ 'ಬೆಲ್ ಬಾಟಂ' ಕನ್ನಡದಲ್ವಂತೆ

  ವಿಡಿಯೋದಲ್ಲಿ ರೂಮರ್ ಬಗ್ಗೆ ಕತ್ರಿನಾ ಕೈಫ್ ಮೊದಲು ಮಾತನಾಡಿದರೆ, ಬಳಿಕ ರೋಹಿತ್ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಜಗಳ ಮಾಡುತ್ತಾರೆ. ಇಬ್ಬರ ಜಗಳ ಬಿಡಿಸಲು ಪೊಲೀಸರು ಮಧ್ಯ ಪ್ರವೇಶ ಮಾಡುತ್ತಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ಕಾಲನ್ನ ಹೀಗೂ ಎಳೆಯಬಹುದು ಅಂತ ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.

  ಅಂದ್ಹಾಗೆ, 'ಸೂರ್ಯವಂಶಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಕತ್ರಿನಾ ಕೈಫ್ ನಾಯಕಿ.

  English summary
  Bollywood Actor Akshay Kumar and Rohit Shetty's fake fight in Suryavamshi movie set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X