For Quick Alerts
  ALLOW NOTIFICATIONS  
  For Daily Alerts

  ಅತ್ರಂಗಿ ರೇ ಚಿತ್ರೀಕರಣ ಮುಕ್ತಾಯ: ಧನುಶ್‌ಗೆ ಧನ್ಯವಾದ, ಅಕ್ಷಯ್‌ಗೆ ಕ್ಷಮೆ ಕೇಳಿದ ಸಾರಾ

  |

  ಆನಂದ್ ಎಲ್ ರೈ ನಿರ್ದೇಶನದಲ್ಲಿ ತಯಾರಾಗಿರುವ ಅತ್ರಂಗಿ ರೇ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಬಹುನಿರೀಕ್ಷೆಯ ಸಿನಿಮಾದ ಶೂಟಿಂಗ್ ಅಂತ್ಯವಾದ ಹಿನ್ನೆಲೆ ನಟ ಅಕ್ಷಯ್ ಕುಮಾರ್ ಮತ್ತು ನಟಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

  ಧನುಶ್ ಮತ್ತು ಅಕ್ಷಯ್ ಕುಮಾರ್ ಇಬ್ಬರು ಈ ಚಿತ್ರದಲ್ಲಿ ನಾಯಕರಾಗಿದ್ದು, ಸಾರಾ ಅಲಿ ಖಾನ್ ನಾಯಕಿಯಾಗಿದ್ದಾರೆ. ಇಬ್ಬರು ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಂಡು ಅನುಭವದ ಬಗ್ಗೆ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

  ಈ ವೇಳೆ ಧನುಶ್ ಅವರಿಗೆ ಧನ್ಯವಾದ ತಿಳಿಸಿದರೆ, ಅಕ್ಷಯ್ ಕುಮಾರ್‌ಗೆ ಕ್ಷಮೆ ಕೇಳಿದ್ದಾರೆ. ''ನನಗೆ ಈ ಚಿತ್ರ ವಿಶೇಷವಾಗಿ ಈ ಪಾತ್ರ ನಿರ್ವಹಿಸಲು ಅವಕಾಶವನ್ನು ನೀಡಿದಕ್ಕೆ ತುಂಬಾ ಧನ್ಯವಾದಗಳು ಆನಂದ್ ಎಲ್ ರೈ ಸರ್. ಅದಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ, ಬೆಂಬಲ, ಅತ್ಯುತ್ತಮ ಭಾರತದ ದರ್ಶನ, ರುಚಿಕರವಾದ ಊಟ, ಸೂಫಿ ಶುಂಠಿ, ಅತ್ಯುತ್ತಮ ತಂಡದೊಂದಿಗೆ ಮರೆಯಲಾಗದ ವರ್ಷಕ್ಕೆ ಧನ್ಯವಾದಗಳು'' ಎಂದು ಸಾರಾ ಸಂತಸ ಹಂಚಿಕೊಂಡಿದ್ದಾರೆ.

  ''ನಿಮ್ಮ ಪ್ರೇರೇಪಿಸುವ, ಸ್ಪೂರ್ತಿದಾಯಕ ವ್ಯಕ್ತಿತ್ವಕ್ಕೆ ಧನ್ಯವಾದಗಳು ಧನುಶ್. ನಿಮ್ಮ ಅದ್ಭುತ ಸಂಗೀತ, ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತದ ಆಹಾರವನ್ನು ನನಗೆ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು'' ಎಂದು ಸಾರಾ ಖುಷಿಯಾಗಿದ್ದಾರೆ.

  ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಅಮೆಜಾನ್: ಅಯೋಧ್ಯೆಗೆ ಹೊರಟ ಅಕ್ಷಯ್ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಅಮೆಜಾನ್: ಅಯೋಧ್ಯೆಗೆ ಹೊರಟ ಅಕ್ಷಯ್

  ''ನಮ್ಮ ಸೆಟ್‌ನಲ್ಲಿ ತುಂಬಾ ಪ್ರೀತಿ, ನಗು, ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು ಅಕ್ಷಯ್ ಕುಮಾರ್ ಸರ್. ನಮ್ಮ ಎಲ್ಲಾ ವೇಷಭೂಷಣಗಳಲ್ಲಿನ ಫೋಟೋಗಳಿಗಾಗಿ ನಿಮ್ಮನ್ನು ಹಿಂಬಾಲಿಸಿದ್ದಕ್ಕಾಗಿ ಕ್ಷಮಿಸಿ ಸರ್'' ಎಂದು ಸಾರಾ ಅಲಿ ಖಾನ್ ಇನ್ಸ್ಟಾದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

  ''ಇದು ಕೊನೆಯ ದಿನದ ಚಿತ್ರೀಕರಣ. ಆನಂದ್ ಎಲ್ ರೈ ನೀವು ಮಾಡಿರುವ ಮ್ಯಾಜಿಕ್ ನೋಡಲು ಕಾಯುತ್ತಿದ್ದೇವೆ. ಇಂತಹ ಅದ್ಭುತ ಚಿತ್ರದಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದ ಸಾರಾ ಅಲಿ ಖಾನ್, ಧನುಶ್ ಧನ್ಯವಾದಗಳು'' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ನೇಪಾಳದಲ್ಲಿ ಹೆಚ್ಚಾಯ್ತು KGF 2 ಹವಾ | Yash | Filmibeat Kannada

  ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಆಗಸ್ಟ್ 6 ರಂದು ಬಿಡುಗಡೆಯಾಗಲಿದೆ.

  English summary
  Bollywood Actor Akshay Kumar and Sara ali khan wrap up shooting for Atrangi Re.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X