For Quick Alerts
  ALLOW NOTIFICATIONS  
  For Daily Alerts

  'ಪಬ್ಜಿ' ಹೋದ್ರೇನಂತೆ, 'ಫೌಜಿ' ಇದೆ ಅಂತಿದ್ದಾರೆ ನಟ ಅಕ್ಷಯ್ ಕುಮಾರ್

  |

  ಕೇಂದ್ರ ಸರ್ಕಾರ ಚೀನಾ ಮೂಲದ ಆಪ್ ಮತ್ತು ಗೇಮ್ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿ ಚೀನಾಗೆ ಬಿಸಿ ಮುಟ್ಟಿಸಿದೆ. ಈಗಾಗಲೇ ಸಾಕಷ್ಟು ಆಪ್ ಗಳನ್ನು ಬ್ಯಾನ್ ಮಾಡಿದ್ದ ಸರ್ಕಾರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಪಬ್ಜಿ ಗೇಮ್ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಿ, ಪಬ್ಜಿ ಪ್ರೀಯರಿಗೆ ಶಾಕ್ ನೀಡಿದೆ. ಪಬ್ಜಿ ಬ್ಯಾನ್ ಆದ ಬೇಸರದಲ್ಲಿದ್ದ ಆಟಗಾರರಿಗೆ ನಟ ಅಕ್ಷಯ್ ಕುಮಾರ್ ಸಂತಸದ ಸುದ್ದಿ ನೀಡಿದ್ದಾರೆ.

  ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada

  ಪಬ್ಜಿ ಬ್ಯಾನ್ ಆದ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಫೌಜಿ ಎನ್ನುವ ಭಾರತದ ಹೊಸ ಗೇಮ್ ಅಪ್ಲಿಕೇಶನ್ ಘೋಷಣೆ ಮಾಡಿದ್ದಾರೆ. ವಿಶೇಷ ಅಂದರೆ ಇದು ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್ ಅಭಿಯಾನಕ್ಕೆ ಬೆಂಬಲಿಸಿ ಮತ್ತು ಅದರಿಂದ ಪ್ರೇರೇಪಿತಗೊಂಡು ಈ ಫೌಜಿ ಗೇಮ್ ಅಪ್ಲಿಕೇಶನ್ ಅನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.

  ಬಂಡೀಪುರ ಅಭಯಾರಣ್ಯದಲ್ಲಿ ಅಕ್ಷಯ್ ಸಾಹಸ: ಖಿಲಾಡಿಗೆ ಆನೆ ಲದ್ದಿ ಚಹಾ ಕುಡಿಸಿದ ಬೇರ್ ಗ್ರಿಲ್ಸ್

  ಭಾರತ್ ಕೇ ವೀರ್ ಟ್ರಸ್ಟ್ ಗೆ ಸಹಾಯ

  ಭಾರತ್ ಕೇ ವೀರ್ ಟ್ರಸ್ಟ್ ಗೆ ಸಹಾಯ

  ಇನ್ನೂ ಈ ಗೇಮ್ ನಿಂದ ಬರುವ ಆದಾಯದ ಶೇ 20ರಷ್ಟು 'ಭಾರತ್ ಕೇ ವೀರ್' ಟ್ರಸ್ಟ್ ಗೆ ನೀಡಲಾಗುವುದು. ಫಿಯರ್ ಲೆಸ್ ಅಂಡ್ ಯುನೈಟೆಡ್ ಗಾರ್ಡ್ಸ್ ಎಂಬ ಹೆಸರಿನ ಈ ಗೇಮಿಂಗ್ ಆಪ್ ಹಲವು ವಿಶೇಷತೆಗಳಿಂದ ಕೂಡಿದೆ. ಸೈನಿಕರ ತ್ಯಾಗ ಬಲಿದಾನದ ಬಗ್ಗೆ ಈ ಗೇಮ್ ನಲ್ಲಿ ತಿಳಿಸಲಾಗಿದೆಯಂತೆ.

  ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್ ಹೇಳಿದ್ದೇನು?

  ಅಕ್ಷಯ್ ಕುಮಾರ್ ಹೇಳಿದ್ದೇನು?

  ಈ ಗೇಮ್ ಅನ್ನು ಘೋಷಣೆ ಮಾಡಿ ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. "ಪಿಎಂ ನರೇಂದ್ರ ಮೋದಿ ಅವರ ಆತ್ಮ ನಿರ್ಭಾರ್ ಆಂದೋಲನವನ್ನು ಬೆಂಬಲಿಸಿ, ಈ ಗೇಮ್ ಅನ್ನು ಪ್ರಸ್ತುತಪಡಿಸಲು ಹೆಮ್ಮೆಯಾಗುತ್ತೆ. ಫಿಯರ್ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್ ಫೌಜಿ, ಮನರಂಜನೆಯ ಜೊತೆಗೆ ನಮ್ಮ ಸೈನಿಕರ ತ್ಯಾಗ, ಬಲಿದಾನದ ಬಗ್ಗೆಯು ಕಲಿಯುತ್ತಾರೆ" ಎಂದು ಬರೆದುಕೊಂಡಿದ್ದಾರೆ.

  ನೆಟ್ಟಿಗರ ಮೆಚ್ಚುಗೆ

  ನೆಟ್ಟಿಗರ ಮೆಚ್ಚುಗೆ

  ಅಕ್ಷಯ್ ಕುಮಾರ್ ಪೋಸ್ಟ್ ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಫೌಜಿ ಗೇಮ್ ಬಗ್ಗೆ ಸಾಕಷ್ಟು ಕುತೂಹಲರಾಗಿದ್ದಾರೆ. ಪಬ್ಜಿ ಸೇರಿದ್ದಂತೆ ಕೇಂದ್ರ ಸರ್ಕಾರ ಈಗಾಗಲೇ 118 ಆಪ್ ಗಳನ್ನು ಬ್ಯಾನ್ ಮಾಡಿದೆ. ಪಬ್ಜಿ ಬ್ಯಾನ್ ಆಗುತ್ತಿದ್ದಂತೆ ನಿರಾಸೆಯಾಗಿದ್ದ ಆಟಗಾರರಿಗೆ ಫೌಜಿ ಗೇಮ್ ಅನೌನ್ಸ್ ಮಾಡಿರುವುದು ಖುಷಿ ನೀಡಿದೆ.

  ಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕ

  ಬೆಂಗಳೂರು ಮೂಲದ ಸಂಸ್ಥೆ ಸಿದ್ಧಪಡಿಸಿದ ಗೇಮ್

  ಬೆಂಗಳೂರು ಮೂಲದ ಸಂಸ್ಥೆ ಸಿದ್ಧಪಡಿಸಿದ ಗೇಮ್

  ಬೆಂಗಳೂರು ಮೂಲದ ಎನ್ ಕೋರ್ ಸಂಸ್ಥೆ ಈ ಗೇಮ್ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದೆ. ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ ಈ ಗೇಮ್ ಎಲ್ಲರಿಗೂ ಲಭ್ಯವಾಗಲಿದೆ. ಆಟದ ಮೊದಲ ಹಂತದಲ್ಲಿ ಗಾಲ್ವಾನ್ ವ್ಯಾಲಿಯನ್ನು ಅಧರಿಸಿದೆಯಂತೆ.

  English summary
  Actor Akshay Kumar Announces new game application FAUJI after ban PUBG.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X