ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆ ಕೋರಿದ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ಕ್ಷಮೆ ಕೇಳಿದ್ದಾರೆ. ಹಿಂದೊಮ್ಮೆ ತಾವು ಯಾವುದೇ ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದ ಅಕ್ಷಯ್ ಕುಮಾರ್, ಇತ್ತೀಚೆಗೆ ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಹಿರಂಗ ಕ್ಷಮೆ ಕೇಳಿದ್ದಾರೆ.

ನಟ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಈಗಾಗಲೇ ವಿಮಲ್ ಮಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸುತ್ತಿದ್ದು, ಅದೇ ಜಾಹೀರಾತಿಗೆ ಈಗ ಅಕ್ಷಯ್ ಕುಮಾರ್ ಸಹ ಎಂಟ್ರಿ ಕೊಟ್ಟಿದ್ದರು. ಅವರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂಡಲೇ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಕ್ಷಮೆ ಕೇಳಿರುವ ನಟ ಅಕ್ಷಯ್ ಕುಮಾರ್, ''ನಾನು ನನ್ನ ಅಭಿಮಾನಿಗಳು ಹಾಗೂ ನನ್ನ ಹಿತೈಷಿಗಳಿಗೆ ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲ ದಿನಗಳಿಂದ ನೀವುಗಳು ನೀಡಿರುವ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಉತ್ಪನ್ನದ ಪ್ರಚಾರ ಮಾಡಿಲ್ಲ, ಮಾಡುವುದೂ ಇಲ್ಲ. ವಿಮಲ್ ಇಲಾಯ್ಚಿ ಜೊತೆಗಿನ ನನ್ನ ಒಪ್ಪಂದದ ಬಗ್ಗೆ ಅಭಿಮಾನಿಗಳ ಅಸಮಾಧಾನಕ್ಕೆ ನಾನು ಮನ್ನಣೆ ನೀಡುತ್ತೇನೆ. ಹಾಗಾಗಿ ಒಪ್ಪಂದದಿಂದ ನಾನು ಹಿಂದೆ ಸರಿಯುತ್ತಿದ್ದೇನೆ'' ಎಂದಿದ್ದಾರೆ.

Akshay Kumar Apologies To Fans For Doing Vimal Advertisement

''ಆ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ನನಗೆ ಬಂದ ಸಂಭಾವನೆಯ ಪೂರ್ಣ ಹಣವನ್ನು ಯಾವುದಾದರೂ ಸಮಾಜ ಮುಖಿ ವಿನಿಯೋಗಿಸಲಿದ್ದೇನೆ. ನಾನು ನಟಿಸಿರುವ ಜಾಹೀರಾತು ಮುಂದೆಯೂ ಪ್ರಸಾರವಾಗಬಹುದು, ಕಾರಣ ಅದು ಒಪ್ಪಂದಕ್ಕೆ ಒಳಪಟ್ಟಿದೆ. ಆದರೆ ನಾನು ಭರವಸೆ ನೀಡುತ್ತೇನೆ, ಮುಂದಿನ ದಿನಗಳಲ್ಲಿ ಯಾವುದೇ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳುವ ಮುಂಚೆ ಹೆಚ್ಚು ಜಾಗೃತೆಯಾಗಿರಲಿದ್ದೇನೆ. ನಿಮ್ಮ ಪ್ರೀತಿ ಹಾಗೂ ಆಶೀರ್ವಾದವನ್ನು ಮುಂದೆಯೂ ಕೇಳುತ್ತಿರುತ್ತೇನೆ'' ಎಂದು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಸಲಿಗೆ ಅಕ್ಷಯ್, ಅಜಯ್ ದೇವಗನ್, ಶಾರುಖ್ ಖಾನ್ ಒಟ್ಟಾಗಿ ನಟಿಸಿರುವ ಜಾಹೀರಾತಿರುವುದು ವಿಮಲ್ ಇಲಾಯ್ಚಿಯದ್ದು, ಆದರೆ ಅದೇ ವಿಮಲ್ ಸಂಸ್ಥೆ ಗುಟ್ಕಾ ಸಹ ತಯಾರಿಸುತ್ತದೆಯಾದ್ದರಿಂದ ನೆಟ್ಟಿಗರು ಆ ಜಾಹೀರಾತಿನ ವಿರುದ್ಧ ಹಾಗೂ ಜಾಹೀರಾತಿನಲ್ಲಿ ನಟಿಸುತ್ತಿರುವ ನಟರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಮಲ್ ಜಾಹೀರಾತಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಟ ಅಜಯ್ ದೇವಗನ್ ಸಹ ಇದೇ ವಿಷಯವಾಗಿ ಮಾತನಾಡಿದ್ದು, 'ನಾನು ಇಲಾಯ್ಚಿಯ ಜಾಹೀರಾತಿನಲ್ಲಿ ನಟಿಸುತ್ತಿದ್ದೇನೆಯೇ ವಿನಃ ಗುಟ್ಕಾ ಜಾಹೀರಾತಿನಲ್ಲಿ ಅಲ್ಲ. ಯಾವುದಾದರೂ ಉತ್ಪನ್ನದಿಂದ ದೊಡ್ಡ ಹಾನಿಯಾಗುತ್ತದೆ ಎಂದಾದರೆ ಆ ವಸ್ತುವನ್ನು ಮಾರಾಟವೇ ಮಾಡಬಾರದು ಬ್ಯಾನ್ ಮಾಡಬೇಕು. ಅದನ್ನು ಮಾರಾಟಕ್ಕೆ ಬಿಟ್ಟು ನಂತರ ಅದರ ಪ್ರಚಾರ ಬೇಡ ಎನ್ನುವುದು ಸರಿಯಲ್ಲ'' ಎಂದಿದ್ದಾರೆ.

ಅಕ್ಷಯ್ ಕುಮಾರ್, ಅಜಯ್ ದೇವಗನ್, ಶಾರುಖ್ ಖಾನ್ ಮಾತ್ರವೇ ಅಲ್ಲದೆ, ಅಮಿತಾಬ್ ಬಚ್ಚನ್, ರಣ್ವೀರ್ ಸಿಂಗ್, ಹೃತಿಕ್ ರೋಷನ್, ಟೈಗರ್ ಶ್ರಾಫ್, ಸೈಫ್ ಅಲಿ ಖಾನ್, ಮಹೇಶ್ ಬಾಬು ಇನ್ನೂ ಹಲವು ನಟರು ಪಾನ್ ಮಸಾಲಾದ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಪಾನ್ ಮಸಾಲಾ ಸಂಸ್ಥೆಗಳು ಈ ನಟರಿಗೆ ಭಾರಿ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ನೀಡುತ್ತದೆ.

More from Filmibeat

English summary
Actor Akshay Kumar apologies to fans for acting in Vimal pan masala advertisement. Ajay Devagan, Shah Rukh Khan were also in that ad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X