ಪತ್ನಿ ಟ್ವಿಂಕಲ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ದಾಂಪತ್ಯ ಬಾಲಿವುಡ್‌ನ ಹ್ಯಾಪಿ ದಾಂಪತ್ಯಗಳಲ್ಲಿ ಒಂದು. ಬಾಲಿವುಡ್ ನ ಕ್ಯೂಟ್ ಕಪಲ್ ಅಕ್ಷಯ್-ಟ್ವಿಂಕಲ್.
Recommended Video
ಆದರೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಮೇಲೆ ಸಿಟ್ಟಾಗಿದ್ದಾರೆ. ಟ್ವಿಂಕಲ್ ಅವರಿಗೆ ಬಹಿರಂಗವಾಗಿ ಕ್ಷಮಾಪಣೆ ಕೇಳಿದ್ದಾರೆ ಅಕ್ಷಯ್ ಕುಮಾರ್.
ನಿಜ, ಟ್ವಿಟ್ಟರ್‌ನಲ್ಲಿ ಅಕ್ಷಯ್ ಕುಮಾರ್ ಅವರು ಪತ್ನಿ ಟ್ವಿಂಕಲ್ ಗೆ ಕ್ಷಮಾಪಣೆ ಕೇಳಿದ್ದಾರೆ. ಆದರೆ ಈ ಕ್ಷಮೆ ಕೇಳಿಕ ತೀರಾ ಗಂಭೀರವೇನೂ ಅಲ್ಲ. ಅಕ್ಷಯ್ ಕುಮಾರ್ ತಮಾಷೆಯಾಗಿಯೇ ಪತ್ನಿಯ ಕ್ಷಮೆ ಕೋರಿದ್ದಾರೆ. ವಿವರಗಳು ಮುಂದೆ ಓದಿ...

ಪ್ಯಾಡ್‌ಮ್ಯಾನ್ ಸಿನಿಮಾ ಕುರಿತು ಟ್ವೀಟ್
ಅಕ್ಷಯ್ ಕುಮಾರ್ ತಮ್ಮ ಪ್ಯಾಡ್‌ಮ್ಯಾನ್ ಸಿನಿಮಾ ಕುರಿತಂತೆ ಇಂದು ಟ್ವೀಟ್ ಮಾಡಿದ್ದರು. ಇಂದಿಗೆ ಪ್ಯಾಡ್‌ಮ್ಯಾನ್ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಯಿತು. ಅದರ ಸಂಬಂಧ ಅಕ್ಷಯ್ ಕುಮಾರ್ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದರು.

ಟ್ವೀಟ್‌ನಲ್ಲಿ ತಪ್ಪೊಂದು ಎಸಗಿದ ಅಕ್ಷಯ್
ಆದರೆ ಟ್ವೀಟ್‌ನಲ್ಲಿ ಅಕ್ಷಯ್ ತಪ್ಪೊಂದನ್ನು ಎಸಗಿದ್ದರು. ಚಿತ್ರದ ನಾಯಕಿಯರಾದ ರಾಧಿಕಾ ಆಪ್ಟೆ ಮತ್ತು ಸೋನಮ್ ಕಪೂರ್ ಅವರನ್ನು ಮಾತ್ರವೇ ಅವರು ಟ್ಯಾಗ್ ಮಾಡಿದ್ದರು. ಸಿನಿಮಾದ ನಿರ್ಮಾಪಕಿ, ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಟ್ಯಾಗ್ ಮಾಡಿರಲಿಲ್ಲ.

'ಮುಂದಿನ ಸಿನಿಮಾಕ್ಕೆ ಅಕ್ಷಯ್ ಇಲ್ಲ'
ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಂಕಲ್ ಖನ್ನಾ, 'ನನ್ನ ನಿರ್ಮಾಣದ ಮುಂದಿನ ಸಿನಿಮಾಕ್ಕೆ ನಿನ್ನನ್ನು ಹಾಕಿಕೊಳ್ಳುವುದಿಲ್ಲ' ಎಂದು ಟ್ವೀಟ್ ಮಾಡಿ ಹುಸಿ ಸಿಟ್ಟು ಪ್ರದರ್ಶಿಸಿದರು.

ಎಚ್ಚೆತ್ತುಕೊಂಡ ಅಕ್ಷಯ್ ಕುಮಾರ್
ತಕ್ಷಣವೇ ಎಚ್ಚೆತ್ತುಕೊಂಡ ಅಕ್ಷಯ್ ಕುಮಾರ್, 'ದಯವಿಟ್ಟು ನನ್ನ ಹೊಟ್ಟೆಯ ಮೇಲೆ ಹೊಡೆಯಬೇಡಿ, ಚಿತ್ರತಂಡದವರನ್ನು ಟ್ಯಾಗ್ ಮಾಡಲು ಮರೆತೆ. ನಿರ್ಮಾಪಕಿ ನನ್ನನ್ನು ಕ್ಷಮಿಸಿ ಎಂದಿದ್ದಾರೆ, ಜೊತೆಗೆ ನಿರ್ದೇಶಕ ಆರ್ ಬಾಲ್ಕಿ ಮತ್ತು ನಿಜ ಜೀವನದ ಪ್ಯಾಡ್‌ಮ್ಯಾನ್ ಅರುಣಾಚಲಂ ಮುರುಗನಾಥಂ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.


Click it and Unblock the Notifications










