twitter
    For Quick Alerts
    ALLOW NOTIFICATIONS  
    For Daily Alerts

    ಪತ್ನಿ ಟ್ವಿಂಕಲ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

    |

    ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ದಾಂಪತ್ಯ ಬಾಲಿವುಡ್‌ನ ಹ್ಯಾಪಿ ದಾಂಪತ್ಯಗಳಲ್ಲಿ ಒಂದು. ಬಾಲಿವುಡ್‌ ನ ಕ್ಯೂಟ್‌ ಕಪಲ್‌ ಅಕ್ಷಯ್-ಟ್ವಿಂಕಲ್.

    Recommended Video

    ತೋಟದ ಮನೆಯಲ್ಲಿ ಪತ್ನಿಯ ಕೈ ಹಿಡಿದು ಹೆಜ್ಜೆ ಹಾಕಿದ ನಿಖಿಲ್ ಕುಮಾರಸ್ವಾಮಿ |Nikhil Kumaraswamy|FILMIBEAT KANNADA

    ಆದರೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್‌ ಖನ್ನಾ ಅಕ್ಷಯ್ ಕುಮಾರ್ ಮೇಲೆ ಸಿಟ್ಟಾಗಿದ್ದಾರೆ. ಟ್ವಿಂಕಲ್ ಅವರಿಗೆ ಬಹಿರಂಗವಾಗಿ ಕ್ಷಮಾಪಣೆ ಕೇಳಿದ್ದಾರೆ ಅಕ್ಷಯ್ ಕುಮಾರ್.

    ನಟಿ ಕಾಜೋಲ್‌ಗೆ ಮೊದಲು ಕ್ರಶ್ ಆಗಿದ್ದು ಅಕ್ಷಯ್ ಕುಮಾರ್ ಮೇಲೆನಟಿ ಕಾಜೋಲ್‌ಗೆ ಮೊದಲು ಕ್ರಶ್ ಆಗಿದ್ದು ಅಕ್ಷಯ್ ಕುಮಾರ್ ಮೇಲೆ

    ನಿಜ, ಟ್ವಿಟ್ಟರ್‌ನಲ್ಲಿ ಅಕ್ಷಯ್ ಕುಮಾರ್ ಅವರು ಪತ್ನಿ ಟ್ವಿಂಕಲ್‌ ಗೆ ಕ್ಷಮಾಪಣೆ ಕೇಳಿದ್ದಾರೆ. ಆದರೆ ಈ ಕ್ಷಮೆ ಕೇಳಿಕ ತೀರಾ ಗಂಭೀರವೇನೂ ಅಲ್ಲ. ಅಕ್ಷಯ್ ಕುಮಾರ್ ತಮಾಷೆಯಾಗಿಯೇ ಪತ್ನಿಯ ಕ್ಷಮೆ ಕೋರಿದ್ದಾರೆ. ವಿವರಗಳು ಮುಂದೆ ಓದಿ...

    ಪ್ಯಾಡ್‌ಮ್ಯಾನ್ ಸಿನಿಮಾ ಕುರಿತು ಟ್ವೀಟ್

    ಪ್ಯಾಡ್‌ಮ್ಯಾನ್ ಸಿನಿಮಾ ಕುರಿತು ಟ್ವೀಟ್

    ಅಕ್ಷಯ್ ಕುಮಾರ್ ತಮ್ಮ ಪ್ಯಾಡ್‌ಮ್ಯಾನ್ ಸಿನಿಮಾ ಕುರಿತಂತೆ ಇಂದು ಟ್ವೀಟ್ ಮಾಡಿದ್ದರು. ಇಂದಿಗೆ ಪ್ಯಾಡ್‌ಮ್ಯಾನ್ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಯಿತು. ಅದರ ಸಂಬಂಧ ಅಕ್ಷಯ್ ಕುಮಾರ್ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದರು.

    ಟ್ವೀಟ್‌ನಲ್ಲಿ ತಪ್ಪೊಂದು ಎಸಗಿದ ಅಕ್ಷಯ್

    ಟ್ವೀಟ್‌ನಲ್ಲಿ ತಪ್ಪೊಂದು ಎಸಗಿದ ಅಕ್ಷಯ್

    ಆದರೆ ಟ್ವೀಟ್‌ನಲ್ಲಿ ಅಕ್ಷಯ್ ತಪ್ಪೊಂದನ್ನು ಎಸಗಿದ್ದರು. ಚಿತ್ರದ ನಾಯಕಿಯರಾದ ರಾಧಿಕಾ ಆಪ್ಟೆ ಮತ್ತು ಸೋನಮ್ ಕಪೂರ್ ಅವರನ್ನು ಮಾತ್ರವೇ ಅವರು ಟ್ಯಾಗ್ ಮಾಡಿದ್ದರು. ಸಿನಿಮಾದ ನಿರ್ಮಾಪಕಿ, ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಟ್ಯಾಗ್ ಮಾಡಿರಲಿಲ್ಲ.

    ಕೊರೊನಾ ಸಂಕಷ್ಟಕ್ಕೆ 25 ಕೋಟಿ ಕೊಟ್ಟಿದ್ದಕ್ಕೆ ಅಕ್ಷಯ್ ಕುಮಾರ್ ವಿರುದ್ಧ ಗರಂ ಆದ ಶತೃಘ್ನ ಸಿನ್ಹಾಕೊರೊನಾ ಸಂಕಷ್ಟಕ್ಕೆ 25 ಕೋಟಿ ಕೊಟ್ಟಿದ್ದಕ್ಕೆ ಅಕ್ಷಯ್ ಕುಮಾರ್ ವಿರುದ್ಧ ಗರಂ ಆದ ಶತೃಘ್ನ ಸಿನ್ಹಾ

    'ಮುಂದಿನ ಸಿನಿಮಾಕ್ಕೆ ಅಕ್ಷಯ್ ಇಲ್ಲ'

    'ಮುಂದಿನ ಸಿನಿಮಾಕ್ಕೆ ಅಕ್ಷಯ್ ಇಲ್ಲ'

    ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಂಕಲ್ ಖನ್ನಾ, 'ನನ್ನ ನಿರ್ಮಾಣದ ಮುಂದಿನ ಸಿನಿಮಾಕ್ಕೆ ನಿನ್ನನ್ನು ಹಾಕಿಕೊಳ್ಳುವುದಿಲ್ಲ' ಎಂದು ಟ್ವೀಟ್‌ ಮಾಡಿ ಹುಸಿ ಸಿಟ್ಟು ಪ್ರದರ್ಶಿಸಿದರು.

    ಲಾಕ್ ಡೌನ್ ನಡುವೆಯೂ ಅಕ್ಷಯ್ ಕುಮಾರ್ ಚಿತ್ರೀಕರಣ: ಫೋಟೋ ವೈರಲ್ಲಾಕ್ ಡೌನ್ ನಡುವೆಯೂ ಅಕ್ಷಯ್ ಕುಮಾರ್ ಚಿತ್ರೀಕರಣ: ಫೋಟೋ ವೈರಲ್

    ಎಚ್ಚೆತ್ತುಕೊಂಡ ಅಕ್ಷಯ್ ಕುಮಾರ್

    ಎಚ್ಚೆತ್ತುಕೊಂಡ ಅಕ್ಷಯ್ ಕುಮಾರ್

    ತಕ್ಷಣವೇ ಎಚ್ಚೆತ್ತುಕೊಂಡ ಅಕ್ಷಯ್ ಕುಮಾರ್, 'ದಯವಿಟ್ಟು ನನ್ನ ಹೊಟ್ಟೆಯ ಮೇಲೆ ಹೊಡೆಯಬೇಡಿ, ಚಿತ್ರತಂಡದವರನ್ನು ಟ್ಯಾಗ್ ಮಾಡಲು ಮರೆತೆ. ನಿರ್ಮಾಪಕಿ ನನ್ನನ್ನು ಕ್ಷಮಿಸಿ ಎಂದಿದ್ದಾರೆ, ಜೊತೆಗೆ ನಿರ್ದೇಶಕ ಆರ್ ಬಾಲ್ಕಿ ಮತ್ತು ನಿಜ ಜೀವನದ ಪ್ಯಾಡ್‌ಮ್ಯಾನ್ ಅರುಣಾಚಲಂ ಮುರುಗನಾಥಂ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

    ಅಕ್ಷಯ್ ಕುಮಾರ್ ಹೊಸ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟಅಕ್ಷಯ್ ಕುಮಾರ್ ಹೊಸ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟ

    English summary
    Actor Akshay Kumar apologies to wife Twinkle Khanna for not tagging her in a tweet regarding Padman movie.
    Thursday, May 28, 2020, 23:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X