For Quick Alerts
  ALLOW NOTIFICATIONS  
  For Daily Alerts

  ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್

  |

  ಫೋರ್ಬ್ಸ್ ನಿಯತಕಾಲಿಕೆ 2019ರ ಸಾಲಿನ ಭಾರತೀಯ 100 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ 100 ಜನ ಸೆಲೆಬ್ರಿಟಿ ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಿಂದಿಕ್ಕಿ ಎರಡನೆ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಚ್ಚರಿ ಅಂದರೆ ವರ್ಷದ ಪಟ್ಟಿಯಲ್ಲಿ ಕ್ರಿಕೆಟಿಗ ವಿರಾಟ್ ಕೋಹ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 12 ವರ್ಷಗಳಲ್ಲಿಯೆ ಇದೆ ಮೊದಲ ಬಾರಿಗೆ ಬಾಲಿವುಡ್ ನಟರನ್ನು ಹಿಂದಿಕ್ಕಿ ಕ್ರಿಕೆಟಿಗನೊಬ್ಬ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

  ಸದಾ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ನಟ ಸಲ್ಮಾನ್ ಖಾನ್ ಈ ಬಾರಿ ಮೂರನೆ ಸ್ಥಾನಕ್ಕೆ ಕುಸಿದಿದ್ದಾರೆ. ಸಲ್ಮಾನ್ ಖಾನ್ ಹಿಂದಿಕ್ಕಿ ಅಕ್ಷಯ್ ಕುಮಾರ್ ಈ ಬಾರಿ ಎರಡನೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂದ್ಹಾಗೆ ಅಕ್ಷಯ್ ಕುಮಾರ್ ವಾರ್ಷಿಕ ಆದಾಯ 2019ರಲ್ಲಿ 293.25 ಕೋಟಿ ಗಳಿಕೆಯಿದೆ. ಇನ್ನು ಸಲ್ಮಾನ್ ಖಾನ್ ವಾರ್ಷಿಕ ಆದಾಯ 229.25 ಕೋಟಿ ಇದೆ.

  ಈ ವರ್ಷ ಟ್ವಿಟ್ಟರ್ ನಲ್ಲಿ ಬಳಕೆಯಾದ ಹೆಚ್ಚು ಹ್ಯಾಂಡಲ್ ಈ ನಟರದ್ದುಈ ವರ್ಷ ಟ್ವಿಟ್ಟರ್ ನಲ್ಲಿ ಬಳಕೆಯಾದ ಹೆಚ್ಚು ಹ್ಯಾಂಡಲ್ ಈ ನಟರದ್ದು

  ನಾಲ್ಕನೆ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಇದ್ದಾರೆ. ವಾರ್ಷಿಕ ಆದಾಯ 239.25 ಕೋಟಿ ಇದೆ. ವಿಶೇಷ ಅಂದರೆ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಬಾರಿಗೆ ಇಬ್ಬರು ಭಾರತೀಯ ಮಹಿಳಾ ಸೆಲೆಬ್ರಿಟಿ ಟಾಪ್ 10 ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. 8ನೇ ಸ್ಥಾನದಲ್ಲಿ ನಟಿ ಅಲಿಯಾ ಭಟ್ ಮತ್ತು 10ನೇ ಸ್ಥಾನದಲ್ಲಿ ನಟಿ ದೀಪಿಕಾ ಪಡುಕೋಣೆ ಪಡೆದಿಕೊಂಡಿದ್ದಾರೆ.

  ಶಾರುಖ್ ಖಾನ್ 124.38 ಕೋಟಿ ಗಳಿಕೆ ಮೂಲಕ 6ನೇ ಸ್ಥಾನದಲ್ಲಿ ಇದ್ದಾರೆ. 118.2 ಕೋಟಿ ಗಳಿಕೆಯ ಮೂಲಕ ರಣ್ವೀರ್ ಸಿಂಗ್ 7ನೇ ಸ್ಥಾನದಲ್ಲಿ ಇದ್ದಾರೆ. ಅಂದ್ಹಾಗೆ ಫೋರ್ಬ್ಸ್ ನಿಯತಕಾಲಿಕೆ ರ್ಯಾಂಕ್ ಅನ್ನು ಕೇವಲ ಆದಾಯದ ಆಧಾರದ ಮಾತ್ರ ನಿರ್ಧಾರ ಮಾಡಿಲ್ಲ. ಆಧಾಯ ಜೊತೆಗೆ ಸೆಲೆಬ್ರಿಟಿಗಳ ಖ್ಯಾತಿ ಕೂಡ ಲೆಕ್ಕಹಾಕಲಾಗುತ್ತಂತೆ. ಹಾಗಾಗಿ ಆದಾಯ ಮಾತ್ರ ಇಲ್ಲಿ ಪರಿಗಣಿಸಿಲ್ಲ. ಹಾಗಾಗಿ ಕಡಿಮೆ ಆದಾಯ ಇದ್ದವರು ಟಾಪ್ ರ್ಯಾಂಕ್ ನಲ್ಲಿ ಸ್ಥಾನ ಪಡೆದಿದ್ದಾರೆ.

  English summary
  Forbes India celebrity 100 list 2019 out. Akshay Kumar beats Salman Khan in Forbes 2019 list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X