ಮುಂಬೈನಲ್ಲಿ 'ರಾಮ್ ಸೇತು' ಚಿತ್ರೀಕರಣ ಆರಂಭಿಸಿದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ 'ರಾಮ್ ಸೇತು' ಸಿನಿಮಾದ ಚಿತ್ರೀಕರಣ ಇಂದಿನಿಂದ (ಮಾರ್ಚ್ 30) ಮುಂಬೈನಲ್ಲಿ ಆರಂಭವಾಗಿದೆ.

'ರಾಮ್ ಸೇತು' ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಫಸ್ಟ್ ಲುಕ್ ಫೋಟೋವನ್ನು ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ.

''ಬಹಳ ವಿಶೇಷವಾದ ಸಿನಿಮಾದ ಜರ್ನಿ ಇಂದಿನಿಂದ ಆರಂಭವಾಗಿದೆ. ಚಿತ್ರೀಕರಣ ಮುಂಬೈನಲ್ಲಿ ಶುರುವಾಗಿದೆ. ಪುರಾತತ್ವ ಶಾಸ್ತ್ರಜ್ಞ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಲುಕ್ ಹೇಗಿದೆ ಎಂದು ನಿಮ್ಮಿಂದ ತಿಳಿಯಲು ಬಯಸುತ್ತೇನೆ'' ಎಂದು ಅಕ್ಷಯ್ ಪೋಸ್ಟ್ ಹಾಕಿದ್ದಾರೆ.

Akshay Kumar Begins Shooting For Ram Setu Movie In Mumbai

ಸ್ವತಃ ಅಕ್ಷಯ್ ಕುಮಾರ್ ಹೇಳಿದಂತೆ ರಾಮ್ ಸೇತು ಸಿನಿಮಾದಲ್ಲಿ ಪುರಾತತ್ವ ಶಾಸ್ತ್ರಜ್ಞ ಪಾತ್ರ ನಿರ್ವಹಿಸುತ್ತಿದ್ದಾರೆ. ಜಾಕ್ವಲಿನ್ ಫರ್ನಾಂಡೀಸ್ ಮತ್ತು ನುಸ್ರುತ್ ಭರುಚ್ಚಾ ಚಿತ್ರದ ನಾಯಕಿಯಾಗಿದ್ದಾರೆ.

ಮಾರ್ಚ್ 18 ರಂದು ಅಯೋಧ್ಯೆಯಲ್ಲಿ ರಾಮ್ ಸೇತು ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ಅಕ್ಷಯ್ ಕುಮಾರ್ ಸೇರಿದಂತೆ ಚಿತ್ರತಂಡ ಪಾಲ್ಗೊಂಡಿತ್ತು. ಈ ವೇಳೆ ಮುಹೂರ್ತದ ಫೋಟೋ ಹಂಚಿಕೊಂಡಿದ್ದ ಅಕ್ಷಯ್ ಕುಮಾರ್ ''ಶ್ರೀರಾಮನ ಆಶೀರ್ವಾದಿಂದ ರಾಮ್ ಸೇತು ಸಿನಿಮಾ ಆರಂಭವಾಗಿದೆ. ಜೈ ಶ್ರೀರಾಮ್'' ಎಂದಿದ್ದರು.

ಅಭಿಷೇಕ್ ಶರ್ಮಾ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅರುಣಾ ಭಾಟಿಯಾ, ವಿಕ್ರಮ್ ಮಲ್ಹೋತ್ರಾ ಜೊತೆ ಸೇರಿ ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Recommended Video

ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada

More from Filmibeat

English summary
Bollywood actor Akshay Kumar Begins Shooting For Ram Setu Movie In Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X