ಕಡೆಗೂ ಕಠಿಣ ನಿರ್ಧಾರ ಕೈಗೊಂಡ ಅಕ್ಷಯ್.! ಬಾಲಿವುಡ್ ನಲ್ಲೀಗ ಒಳ್ಳೆ ಬೆಳವಣಿಗೆ.!

ಅದ್ಯಾವ ಸಮಯದಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಗುಡುಗಿದರೋ, ದೌರ್ಜನ್ಯಕ್ಕೆ ಒಳಗಾದ ಸ್ತ್ರೀಯರೆಲ್ಲರೂ ದನಿಯೆತ್ತಲು ಆರಂಭಿಸಿದರು. ಭಾರತದಲ್ಲೂ #ಮೀಟೂ ಅಭಿಯಾನ ಶುರುವಾಯ್ತು.

#ಮೀಟೂ ಮೂಲಕ ಚಿತ್ರರಂಗದ ಖ್ಯಾತನಾಮರ ಕಾಮ ಪುರಾಣ ಬಟಾ ಬಯಲಾಗುತ್ತಿದೆ. ಎಲ್ಲರ ಮುಂದೆ ಸಭ್ಯರಂತೆ ಪೋಸ್ ಕೊಡುತ್ತಿದ್ದ ನಿರ್ಮಾಪಕ/ನಿರ್ದೇಶಕ/ನಟರುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಗ್ನ ಸತ್ಯ ಬಹಿರಂಗ ಆಗುತ್ತಿದೆ.

#ಮೀಟೂ ಅಭಿಯಾನದಿಂದಾಗಿ ವಿಕಾಸ್ ಬಾಹ್ಲ್, ಸುಭಾಷ್ ಘಾಯ್, ಸಾಜಿದ್ ಖಾನ್ ಸೇರಿದಂತೆ ಹಲವರ ವಿರುದ್ಧ ಆರೋಪಗಳ ಸುರಿಮಳೆಯಾಗಿದೆ. ಹೀಗಾಗಿ, ವಿಕಾಸ್ ಬಾಹ್ಲ್ ಜೊತೆಗೆ ಕೆಲಸ ಮಾಡಲ್ಲ ಎಂದು ಹೃತಿಕ್ ರೋಷನ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ.

ಇನ್ನೂ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸುಭಾಷ್ ಕಪೂರ್ ನಿರ್ದೇಶನದ ಚಿತ್ರದಲ್ಲಿ ನಟಿಸಲ್ಲ ಎಂದು ಆಮೀರ್ ಖಾನ್ ಶಪಥ ಮಾಡಿದ್ದಾರೆ. ಇದೀಗ ಖತರೋಂಕೆ ಖಿಲಾಡಿ ಅಕ್ಷಯ್ ಕುಮಾರ್ ಸರದಿ.

ಸಾಜಿದ್ ಖಾನ್ ನಿಜವಾದ ಬಣ್ಣವನ್ನ ಮೂವರು ಮಹಿಳೆಯರು ಬಯಲು ಮಾಡಿದ್ಮೇಲೆ, ನಟ ಅಕ್ಷಯ್ ಕುಮಾರ್ 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ 'ಹೌಸ್ ಫುಲ್-4' ಚಿತ್ರದಲ್ಲಿ ನಾನಾ ಪಾಟೇಕರ್ ಕೂಡ ಇದ್ದಾರೆ ಅನ್ನೋದು ನಿಮ್ಮ ಗಮನದಲ್ಲಿರಲಿ. ಮುಂದೆ ಓದಿರಿ...

ಟ್ವೀಟ್ ಮಾಡಿದ ಅಕ್ಷಯ್ ಕುಮಾರ್

''ನಿನ್ನೆ ರಾತ್ರಿಯಷ್ಟೇ ನಾನು ಭಾರತಕ್ಕೆ ವಾಪಸ್ ಮರಳಿದೆ. ಎಲ್ಲ ಸುದ್ದಿಗಳನ್ನು ಓದಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ತನಿಖೆ ಆಗುವವರೆಗೂ 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡುವಂತೆ ನಾನು ನಿರ್ಮಾಪಕರ ಬಳಿ ಮನವಿ ಮಾಡಿದ್ದೇನೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ತಪ್ಪಿತಸ್ಥರ ಜೊತೆಗೆ ನಾನು ಕೆಲಸ ಮಾಡುವುದಿಲ್ಲ. ನೊಂದವರಿಗೆ ನ್ಯಾಯ ಸಿಗಲೇಬೇಕು'' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇಬ್ಬರ ವಿರುದ್ಧ ಆರೋಪ.!

ಇಬ್ಬರ ವಿರುದ್ಧ ಆರೋಪ.!

'ಹೌಸ್ ಫುಲ್-4' ಚಿತ್ರದಲ್ಲಿ ನಾನಾ ಪಾಟೇಕರ್ ನಟಿಸುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಸಾಜಿದ್ ಖಾನ್. ಈ ಇಬ್ಬರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿವೆ. ಹೀಗಾಗಿ, ತನಿಖೆ ನಡೆದು ಸತ್ಯ ಹೊರಗೆ ಬರುವವರೆಗೂ ಶೂಟಿಂಗ್ ಮಾಡದಿರಲು ಅಕ್ಷಯ್ ಕುಮಾರ್ ತೀರ್ಮಾನ ಮಾಡಿದ್ದಾರೆ.

ಇದೇ ಮೊದಲ ಬಾರಿ.!

ಇದೇ ಮೊದಲ ಬಾರಿ.!

ಅಕ್ಷಯ್ ಕುಮಾರ್ ಅತ್ಯಂತ ಶಿಸ್ತಿನ ನಟ. 28 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಎಂದೂ ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲ. ಮೀಟೂ ಅಭಿಯಾನದಿಂದಾಗಿ ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಚಿತ್ರೀಕರಣವನ್ನ ನಿಲ್ಲಿಸಿದ್ದಾರೆ.

ನಿರ್ದೇಶನದಿಂದ ಕೆಳಕ್ಕೆ ಇಳಿದ ಸಾಜಿದ್ ಖಾನ್

ನಟ ಅಕ್ಷಯ್ ಕುಮಾರ್ ಶೂಟಿಂಗ್ ಕ್ಯಾನ್ಸಲ್ ಮಾಡಿದ್ಮೇಲೆ, ನೈತಿಕ ಹೊಣೆ ಹೊತ್ತ ನಿರ್ದೇಶಕ ಸಾಜಿದ್ ಖಾನ್ 'ಹೌಸ್ ಫುಲ್-4' ಡೈರೆಕ್ಟರ್ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಅಲ್ಲಿಗೆ, ಇದು ಮೀಟೂ ಅಭಿಯಾನಕ್ಕೆ ಸಿಗುತ್ತಿರುವ ಮತ್ತೊಂದು ಜಯ.

More from Filmibeat

English summary
Bollywood Actor Akshay Kumar cancels shoot of Housefull 4 after #MeToo allegations against Director Sajid Khan and Actor Nana Patekar. Take a look at Akshay Kumar's tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X