ಅಕ್ಷಯ್ ಕುಮಾರ್ ತೊಟ್ಟ 'ಬೆಲ್ ಬಾಟಂ' ಕನ್ನಡದಲ್ವಂತೆ

ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಿದ್ದ 'ಬೆಲ್ ಬಾಟಂ' ಸಿನಿಮಾ ಸಾಕಷ್ಟು ಭಾಷೆಗಳಿಗೆ ರಿಮೇಕ್ ಆಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಕನ್ನಡಾಭಿಮಾನಿಗಳ ಮನಗೆದ್ದು ಶತದಿನೋತ್ಸವವನ್ನು ಪೂರೈಸಿ ಪರಭಾಷೆಯಲ್ಲೂ ರಾರಾಜಿಸಲು ಸಿದ್ಧವಾಗಿರುವ 'ಬೆಲ್ ಬಾಟಂ' ಅನ್ನು ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ತೊಟ್ಟಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.

ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಂ' ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. 'ಬೆಲ್ ಬಾಟಂ' ಸಿನಿಮಾ ಟೈಟಲ್ ನೋಡಿ ಎಲ್ಲರು ಕನ್ನಡ 'ಬೆಲ್ ಬಾಟಂ' ಅಂತ ಅಂದುಕೊಂಡಿದ್ದರು. ಅಕ್ಷಯ್ ಕುಮಾರ್ ಫಸ್ಟ್ ಲುಕ್ ಶೇರ್ ಮಾಡುತ್ತಿದ್ದಂತೆ ಇದು ಕನ್ನಡದ 'ಬೆಲ್ ಬಾಟಂ' ಸಿನಿಮಾದ ರಿಮೇಕ್ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭಿಸಿತು.

"80ರ ದಶಕಕ್ಕೆ ಹಿಂತಿರುಗಲು ಸಿದ್ಧರಾಗಿ" ಎಂದು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ಕನ್ನಡದ ಸಿನಿಮಾ ಎಂದು ವೈರಲ್ ಆಗುತ್ತಿದ್ದಂತೆ ಅಭಿಮಾನಿಯೊಬ್ಬ ಅಕ್ಷಯ್ ಕುಮಾರ್ ಗೆ "ಇದು ಕನ್ನಡ ಸಿನಿಮಾದ ರಿಮೇಕ್?" ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

Akshay Kumar Clarified About Bell Bottom Is Not Remake Of Kannada Film

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ "ಬೆಲ್ ಬಾಟಂ ಯಾವುದೆ ಸಿನಿಮಾದ ರಿಮೇಕ್ ಅಲ್ಲ. ನೈಜ ಘಟನೆ ಆಧಾರಿತ ಸಿನಿಮಾ" ಎಂದು ಪ್ರತಿಕ್ರಿಯೆ ನೀಡಿ ಕನ್ನಡದ ರಿಮೇಕ್ ಎಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕನ್ನಡದ ಸಿನಿಮಾವೊಂದು ಬಾಲಿವುಡ್ ನಲ್ಲಿಯೂ ಮಿಂಚಲಿದೆ ಎನ್ನುವ ಕನ್ನಡಿಗರ ಆಸೆ ನಿರಾಸೆಯಾಗಿದೆ. ಆದರು ಈಗಾಗಲೆ ಹಿಂದಿಗೆ ರಿಮೇಕ್ ರೈಟ್ಸ್ ಮಾರಾಟವಾಗಿದೆ. ಹಾಗಾಗಿ ಕನ್ನಡದ 'ಬೆಲ್ ಬಾಟಂ' ಯಾರು ಧರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

More from Filmibeat

English summary
Bollywood actor Akshay Kumar tweet about Bell Bottom film. He is clarified about Bell Bottom is not remake of Kannada film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X