For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್‌ ಕುಮಾರ್‌ಗೆ ಮೋಹಕ ಫೋಸ್ ನೀಡಿದ ಕೃತಿ ಸೆನನ್

  |

  ವಿಶ್ವದಲ್ಲಿಯೇ ಅತಿ ಹೆಚ್ಚು ವಾರ್ಷಿಕ ಸಂಭಾವನೆ ಗಳಿಸುವ ನಟರಲ್ಲಿ ಅಕ್ಷಯ್ ಕುಮಾರ್ ಸಹ ಒಬ್ಬರು. ಒಂದು ದಿನದಲ್ಲಿ ಎರಡು ಮೂರು ಶೆಡ್ಯೂಲ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಿಸುವುದೂ ಸಹ ಇದೆ.

  ಅಕ್ಷಯ್ ಕುಮಾರ್ ರ ಚಿತ್ರೀಕರಣ ಪ್ರಾರಂಭವಾಗುವುದು ಬೆಳಿಗ್ಗೆ 5 ಅಥವಾ ಆರು ಗಂಟೆಗೆ. ಬೆಳಿಗ್ಗಿನಿಂದ ಸಂಜೆಯವರೆಗೂ ಕೆಲಸ ಮಾಡುತ್ತಲೇ ಇರುತ್ತಾರೆ ಅಕ್ಷಯ್. ಆದರೂ ಬಹಳ ಚೈತನ್ಯಪೂರ್ಣವಾಗಿರುತ್ತಾರೆ.

  ಸೆಟ್‌ನಲ್ಲಿ ಸಹ ನಟರೊಂದಿಗೆ, ನಟಿಯರೊಂದಿಗೆ ತಮಾಷೆ ಮಾಡುತ್ತಾ ಜಾಲಿಯಾಗಿರುತ್ತಾರೆ ಅಕ್ಷಯ್. ಚಿತ್ರರಂಗದಲ್ಲಿ ಹಿರಿಯರು-ಕಿರಿಯರು ಎಲ್ಲರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ ಅಕ್ಷಯ್.

  ಇದೀಗ ಚಿತ್ರೀಕರಣದಲ್ಲಿ ನಟಿ ಕೃತಿ ಸೆನನ್ ಗಾಗಿ ಛಾಯಾಗ್ರಾಹಕರಾಗಿ ಬದಲಾಗಿದ್ದಾರೆ ಅಕ್ಷಯ್ ಕಪೂರ್. ಹೌದು, ನಟಿ ಕೃತಿ ಸೆನನ್ ರ ಸುಂದರವಾದ ಚಿತ್ರವನ್ನು ಅಕ್ಷಯ್ ಕುಮಾರ್ ತೆಗೆದಿದ್ದಾರೆ.

  ಬಚ್ಚನ್ ಪಾಂಡೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಅಕ್ಷಯ್ ಕುಮಾರ್ ಹಾಗೂ ಕೃತಿ ಸೆನನ್. ಈ ಸಮಯದಲ್ಲಿ ಕೃತಿ ಸೆನನ್ ರ ಬಹು ಸುಂದರವಾದ ಚಿತ್ರ ತೆಗೆದಿದ್ದಾರೆ ಅಕ್ಷಯ್. ಒಬ್ಬ ವೃತ್ತಿಪರ ಛಾಯಾಗ್ರಾಹಕ ತೆಗೆಯುವಂತೆಯೇ ನೆರಳು-ಬೆಳಕಿನ ಸಂಯೋಜನೆಯಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ.

  ಕೃತಿ ಸೆನನ್ ಸಹ ಬಹು ಮೋಹಕವಾಗಿ ಅಕ್ಷಯ್ ಕುಮಾರ್ ಕ್ಯಾಮೆರಾಗೆ ಫೋಸು ನೀಡಿದ್ದಾರೆ. ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೃತಿ ಸೆನನ್, ಅಕ್ಷಯ್ ಕುಮಾರ್ ಛಾಯಾಗ್ರಾಹಕರಾಗಿ ಬದಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

  ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada

  ಹಲವಾರು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿಯಾಗಿದ್ದಾರೆ. ಸೂರ್ಯವಂಶಿ ಬಿಡುಗಡೆ ಆಗಬೇಕಿದೆ. ಬಚ್ಚನ್ ಪಾಂಡೆ, ರಾಮ್ ಸೇತು, ಬೆಲ್ ಬಾಟಮ್, ಅತರಂಗಿ ರೇ, ಮಹಿಲಾ ಮಂಡಳಿ, ರೌಡಿ ರಾತೋಢ್ 2, ರಕ್ಷಾ ಬಂಧನ್, ಬಚ್ಚನ್ ಪಾಂಡೆ ಇನ್ನೂ ಕೆಲವು ಸಿನಿಮಾಗಳು ಅಕ್ಷಯ್ ಕುಮಾರ್ ಕೈಯಲ್ಲಿವೆ.

  English summary
  Actor Akshay Kumar clicked stunning photo of actress Kriti Sanon in Bachan Pande movie set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X