ಸಿಕ್ಸರ್ ಮೇಲೆ ಸಿಕ್ಸರ್ ಹೊಡಿತ್ತಿದ್ದಾರೆ ಅಕ್ಷಯ್ ಕುಮಾರ್
''ಯಶಸ್ಸು ಪಡೆದವರು ವಿಭಿನ್ನ ಕೆಲಸವನ್ನೇನ್ನು ಮಾಡುವುದಿಲ್ಲ... ಅವರು ಮಾಡುವ ಕೆಲಸವನ್ನು ವಿಭಿನ್ನವಾಗಿ ಮಾಡುತ್ತಾರೆ.'' ಎನ್ನುವ ಮಾತಿದೆ. ಅದೇ ರೀತಿ ಬಾಲಿವುಡ್ ನಟನೊಬ್ಬ ಈಗ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಯಶಸ್ಸು ಪಡೆಯುತ್ತಿದ್ದಾರೆ.
ಯಾವುದೇ ನಟ ಆಗಿರಬಹುದು ಅವರಿಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇರುತ್ತದೆ. ಕೆಲವರಿಗೆ ಆ ಅವಕಾಶ ಸಿಕ್ಕರೆ, ಕೆಲವರಿಗೆ ಸಿಗುವುದಿಲ್ಲ. ಆದರೆ, ಕೆಲವೇ ಕೆಲವರೂ ನಟರು ಮಾತ್ರ ಬಂದ ಅವಕಾಶವನ್ನು ಅಷ್ಟೇ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅಕ್ಷಯ ಕುಮಾರ್ ಆ ಸಾಲಿಗೆ ಸೇರುವ ನಟ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದಾರೆ. ಸತತವಾಗಿ ವಿಭಿನ್ನ ರೀತಿಯ ಸಿನಿಮಾ ಮಾಡುತ್ತಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಿದರೂ, ಆ ಎಲ್ಲ ಚಿತ್ರಗಳಲ್ಲಿ ಬೇರೆ ಬೇರೆ ವೇಷ ಧರಿಸಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಅಕ್ಷಯ್ ಕುಮಾರ್ ಸದ್ಯ ನಟಿಸುತ್ತಿರುವ ಸಿನಿಮಾಗಳು, ಆಯ್ಕೆ ಮಾಡುತ್ತಿರುವ ಪಾತ್ರಗಳು ಅವರ ಘನತೆಯನ್ನು ಹೆಚ್ಚು ಮಾಡುತ್ತಿದೆ. ಸಾಮಾಜಿಕ ಸಂದೇಶ, ದೇಶಭಕ್ತಿ ಹೀಗೆ ಅಕ್ಷಯ್ ಒಂದರ ನಂತರ ಒಂದರೆ ಅದ್ಭುತ ಸಿನಿಮಾ ನೀಡುತ್ತಿದ್ದಾರೆ. ಮುಂದೆ ಓದಿ...

ವಿಭಿನ್ನ ಸಿನಿಮಾಗಳ ಪರ್ವ ಶುರು
ಅಕ್ಷಯ್ ಕುಮಾರ್ ಬೆಸ್ಟ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿಭಿನ್ನ ಸಿನಿಮಾಗಳ ಪರ್ವ ಶುರು ಆಗಿದ್ದು, 'ಸ್ಪೆಷಲ್ 26' ಸಿನಿಮಾದಿಂದ. ಈ ಚಿತ್ರಕ್ಕೆ ಮುಂಚೆಯೂ ಅವರು ಕೆಲ ವಿಭಿನ್ನ ಸಿನಿಮಾ ಮಾಡಿರಬಹುದು. ಆದರೆ, 'ಸ್ಪೆಷಲ್ 26' ಬಳಿಕ 'ಬೇಬಿ', 'ಹಾಲಿ ಡೇ' ಹೀಗೆ ಅಕ್ಷಯ್ ಕುಮಾರ್ ಒಳಗಿನ ರಿಯಲ್ ಕಲಾವಿದ ಹೊರ ಬರಲು ಶುರು ಆದ.

ಹೆಸರು ಕೊಟ್ಟ 'ಏರ್ ಲಿಫ್ಟ್', ಪ್ರಶಸ್ತಿ ನೀಡಿದ 'ರುಸ್ತುಂ'
'ಏರ್ ಲಿಫ್ಟ್' ಹಾಗೂ ರುಸ್ತುಂ' ಅಕ್ಷಯ್ ಕುಮಾರ್ ಕೆರಿಯರ್ ನ ಬೆಸ್ಟ್ ಸಿನಿಮಾಗಳು. 'ಏರ್ ಲಿಫ್ಟ್' ನಲ್ಲಿ ದೇಶಭಕ್ತಿ ತೋರಿದ್ದ ಅಕ್ಷಯ್ 'ರುಸ್ತುಂ' ನಲ್ಲಿ ಕ್ರೈಮ್ ಥ್ರಿಲ್ಲರ್ ಕಥೆ ಹೇಳಿದ್ದರು. ಈ ಎರಡೂ ಸಿನಿಮಾದಲ್ಲಿ ಅವರ ನಟನೆ ಅದ್ಭುತವಾಗಿತ್ತು. ಅದೇ ಕಾರಣಕ್ಕೆ 'ರುಸ್ತುಂ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಅಕ್ಷಯ್ ಪಡೆದರು.

ಸ್ವಚ್ಛ ಭಾರತಕ್ಕಾಗಿ 'ಟಾಯ್ಲೇಟ್ ಏಕ್ ಪ್ರೇಮ್ ಕಥಾ'
ಒಂದು ಕಡೆ 4ಜಿ 5ಜಿ ಯುಗ ಅಂತ ಮಾತನಾಡುತ್ತಿದ್ದರೆ, ಮತ್ತೊಂದು ಕಡೆ ಭಾರತದಲ್ಲಿ ಈಗಲೂ ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯ ಇಲ್ಲ. ಈ ವಿಷಯವನ್ನು 'ಟಾಯ್ಲೇಟ್ ಏಕ್ ಪ್ರೇಮ್ ಕಥಾ' ಸಿನಿಮಾದಲ್ಲಿ ಅಕ್ಷಯ್ ಹೇಳಿದರು. ಶೌಚಾಲಯ ಬಳಕೆ ಮಾಡುವಂತೆ ಸಂದೇಶ ನೀಡಿದರು. ಈ ಸಿನಿಮಾ 18 ಕೋಟಿಯಲ್ಲಿ ನಿರ್ಮಾಣ ಆಗಿ, 300 ಕೋಟಿ ಗಳಿಕೆ ಮಾಡಿದೆ.

'ಪ್ಯಾಡ್ ಮ್ಯಾನ್' ಮೂಲಕ ಮಹಿಳೆಯರಿಗೆ ಸಂದೇಶ
ಮಹಿಳೆಯರು ಋತುಸ್ರಾವದ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಯನ್ನು ಹೇಳಿದ್ದ ಸಿನಿಮಾ 'ಪ್ಯಾಡ್ ಮ್ಯಾನ್'. ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡಬೇಕು ಎನ್ನುವ ಉದ್ದೇಶದಿಂದ ತಾನೇ ಯಂತ್ರವನ್ನು ಕಂಡು ಹಿಡಿದ ತಮಿಳುನಾಡಿನ ಮುರುಗನಾಥನ್ ಅವರ ಸಾಹಸ ಕಥೆ ಈ ಚಿತ್ರದಲ್ಲಿತ್ತು. 'ಪ್ಯಾಡ್ ಮ್ಯಾನ್' ಆಗಿದ್ದ ಅಕ್ಷಯ್ ಭಾರತೀಯರ ಪಾಲಿಗೆ ಸೂಪರ್ ಮ್ಯಾನ್ ಆದರು.

ದೇಶಭಕ್ತಿಗೆ 'ಗೋಲ್ಡ್'
ಹಾಕಿ ಆಟದ ಹಿನ್ನಲೆಯ ಸಿನಿಮಾವಾಗಿದ್ದ 'ಗೋಲ್ಡ್' ಅಕ್ಷಯ್ ಕುಮಾರ್ ರನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ನೈಜ ಫಟನೆಯ ಸಿನಿಮಾ ಇದಾಗಿದ್ದು, ಹಾಕಿ ಕೋಚ್ ಆಗಿ ಸಿನಿಮಾದಲ್ಲಿ ಅಕ್ಷಯ್ ನಟಿಸಿದ್ದರು. ಸೌದಿ ಅರೇಬೀಯಾದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಸಿನಿಮಾ ಇದಾಗಿದೆ.

'2.O' ಹಾಗೂ 'ಕೇಸರಿ' ಪಾತ್ರಗಳು
'2.O' ಸಿನಿಮಾದಲ್ಲಿ ರಜನಿಕಾಂತ್ ಹೀರೋ ಆಗಿದ್ದರೂ, ಅಕ್ಷಯ್ ಕುಮಾರ್ ಪಾತ್ರ ಗಮನ ಸೆಳೆದಿತ್ತು. ಪಕ್ಷಿರಂಜನ್ ಪಾತ್ರಕ್ಕೆ ಅವರು ಮಾಡಿಕೊಂಡಿದ್ದ ತಯಾರಿ, ಅವರ ಲುಕ್ ಅಚ್ಚರಿ ಮೂಡಿಸಿತ್ತು. ಇತ್ತೀಚಿಗಷ್ಟೆ ಬಿಡುಗಡೆಯಾದ 'ಕೇಸರಿ' ಸಿನಿಮಾದ ನಟನೆ ಕೂಡ ಅವರ ಪ್ರತಿಭೆಯನ್ನು ಸಾರಿ ಸಾರಿ ಹೇಳುತ್ತಿದೆ.

ಅಕ್ಷಯ್ ಎಂಬ ಮಹಾನ್ ಕಲಾವಿದ
ಇಂತಹ ಸುಂದರ ಸಿನಿಮಾಗಳನ್ನು ಅಕ್ಷಯ್ ಕುಮಾರ್ ಅವರೇ ಹುಡುಕಿಕೊಂಡು ಹೋಗುತ್ತಿದ್ದಾರೋ ಅಥವಾ ಅಂತ ಸಿನಿಮಾಗಳೇ ಅವರನ್ನು ಹುಡುಕಿಕೊಂಡು ಬರುತ್ತದೆಯೋ ತಿಳಿದಿಲ್ಲ. ಆದರೆ, ಅಕ್ಷಯ್ ಕುಮಾರ್ ಪ್ರತಿ ಸಿನಿಮಾದಿಂದ ಸಿನಿಮಾಗೆ ಬೆಳೆಯುತ್ತಿದ್ದಾರೆ. ಅವರ ನಟನ ಸಾಮರ್ಥ್ಯವನ್ನು ಸಿನಿಮಾದಿಂದ ಸಿನಿಮಾಗೆ ಹೆಚ್ಚಾಗುತ್ತಿದೆ.


Click it and Unblock the Notifications











