'ಸೂರರೈ ಪೊಟ್ರು' ಹಿಂದಿಗೆ ರಿಮೇಕ್: ಸ್ಟಾರ್ ನಟನ ಹೆಸರು ಫೈನಲ್?

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ರಿಲೀಸ್ ಆಗಿ ಬಹುದೊಡ್ಡ ಯಶಸ್ಸು ಕಂಡ ಸೂರರೈ ಪೊಟ್ರು ಸಿನಿಮಾ ಈಗ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಚಿತ್ರಮಂದಿರಗಳು ಮುಚ್ಚಿದ ಸಮಯದಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿದ್ದ ಈ ಚಿತ್ರ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿತ್ತು. ನಟ ಸೂರ್ಯ ನಟಿಸಿದ್ದ ಈ ಚಿತ್ರ ಈಗ ಬಿಟೌನ್‌ನಲ್ಲಿ ತಯಾರಾಗುವುದು ಬಹುತೇಕ ಖಚಿತವಾಗಿದೆ.

ಮೂಲ ತಮಿಳು ಭಾಷೆಯಲ್ಲಿ ತಯಾರಾಗಿದ್ದ 'ಸೂರರೈ ಪೊಟ್ರು' ಸಿನಿಮಾ ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಡಬ್ ಆಗಿ ಪ್ರದರ್ಶನ ಕಂಡಿದೆ. ಹಾಗಿದ್ದರೂ ಹಿಂದಿಯಲ್ಲಿ ಅಧಿಕೃತವಾಗಿ ರಿಮೇಕ್ ಮಾಡಲು ನಿರ್ಮಾಪಕರು ಆಸಕ್ತಿ ತೋರಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ 'ಉಡಾನ್' ಎಂಬ ಹೆಸರಿನಲ್ಲಿ ಹಿಂದಿಗೆ ಡಬ್ ಆಗಿತ್ತು. ಡಬ್ಬಿಂಗ್ ವರ್ಷನ್‌ಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ಲೆಕ್ಕಾಚಾರದಲ್ಲಿ ಈಗ ಚಿತ್ರವನ್ನು ರಿಮೇಕ್ ಮಾಡಲು ನಿರ್ಧರಿಸಿದ್ದಾರೆ.

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಕಥೆಯನ್ನು ಆಧರಿಸಿ ತಯಾರಾಗಿದ್ದ ಈ ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶಿಸಿದ್ದರು. ಸೂರ್ಯ ನಟನೆ ಮತ್ತು ಸುಧಾ ನಿರ್ದೇಶನ ಎರಡು ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಚಿತ್ರ ಎನಿಸಿಕೊಂಡಿದೆ. ಮುಂದೆ ಓದಿ...

ನಿರ್ಮಾಪಕ ಓಕೆ, ಚರ್ಚೆಯ ಹಂತದಲ್ಲಿ ಸಿನಿಮಾ

ನಿರ್ಮಾಪಕ ಓಕೆ, ಚರ್ಚೆಯ ಹಂತದಲ್ಲಿ ಸಿನಿಮಾ

ಸೂರರೈ ಪೊಟ್ರು ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಬೇಕು ಎನ್ನುವ ಆಸೆಯೊಂದಿಗೆ ಕೆಲವು ನಿರ್ಮಾಪಕರು ಮುಂದೆ ಬಂದಿದ್ದಾರೆ. ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆ ಮಾತ್ರ ಆಗಿದೆ. ಸೌತ್‌ನಲ್ಲಿ ಹಿಟ್ ಬಾರಿಸಿದ ಈ ಚಿತ್ರವನ್ನು ಹಿಂದಿಗೆ ಮಾಡ್ತೇವೆ ಎಂದು ಆಸಕ್ತಿ ತೋರಿರುವ ನಿರ್ಮಾಪಕರು ಉಳಿದ ಯಾವುದನ್ನು ಅಂತಿಮ ಮಾಡಿಲ್ಲ ಎಂಬ ಮಾಹಿತಿ ಇದೆ. ಆದರೆ, ರಿಮೇಕ್ ಮಾಡುವುದು ಮಾತ್ರ ಖಾತ್ರಿಯಾಗಿದೆ.

ಮುಂಚೂಣಿಗೆ ಬಂದ ಅಕ್ಷಯ್ ಕುಮಾರ್?

ಮುಂಚೂಣಿಗೆ ಬಂದ ಅಕ್ಷಯ್ ಕುಮಾರ್?

ತಮಿಳಿನಲ್ಲಿ ಸೂರ್ಯ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಯಾರು ಮಾಡಬಹುದು ಎನ್ನುವುದು ಅಧಿಕೃತವಾಗಿಲ್ಲ. ಆದರೆ, ಸೂರರೈ ಪೊಟ್ರು ಅಂತಹ ಸ್ಕ್ರಿಪ್ಟ್‌ಗೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆ ಅಕ್ಷಯ್ ಕುಮಾರ್ ಹೆಸರು ಈ ಪ್ರಾಜೆಕ್ಟ್‌ನಲ್ಲಿ ತಳುಕು ಹಾಕಿಕೊಂಡಿದೆ. ಸ್ವತಃ ಚಿತ್ರತಂಡದಿಂದ ಸ್ಪಷ್ಟವಾಗಿರುವ ಪ್ರಕಾರ ಅಕ್ಷಯ್ ಕುಮಾರ್ ಹೆಸರು ಕೇವಲ ವಂದತಿ ಅಷ್ಟೇ ಎಂದಿದ್ದಾರೆ.

ಸುಧಾ ಕೊಂಗರಾ ನಿರ್ದೇಶನ

ಸುಧಾ ಕೊಂಗರಾ ನಿರ್ದೇಶನ

ಜಿಆರ್ ಗೋಪಿನಾಥ್ ಅವರ 'ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ' ಎಂಬ ಪುಸ್ತಕ ಆಧರಿಸಿ ಸಿನಿಮಾ ಮಾಡಲಾಗಿದೆ. ಸೂರರೈ ಪೊಟ್ರು ಚಿತ್ರಕ್ಕೆ ನಿರ್ದೇಶಕಿ ಸುಧಾ ಕೊಂಗರಾ ಅವರೇ ಕಥೆ ಹಾಗೂ ಚಿತ್ರಕಥೆ ಮಾಡಿದ್ದಾರೆ. ಈಗ ಮೂಲ ಚಿತ್ರಕ್ಕೂ ಅವರೇ ಸ್ಕ್ರಿಪ್ಟ್ ಮಾಡಲಿದ್ದು, ಡೈರೆಕ್ಷನ್ ಜವಾಬ್ದಾರಿ ಸಹ ಅವರದ್ದೇ. ಈ ಕುರಿತು ವೆಬ್‌ಸೈಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಸುಧಾ 'ನಿರ್ಮಾಪಕರು ಅಕ್ಷಯ್ ಕುಮಾರ್ ಅವರನ್ನು ನಾಯಕರನ್ನಾಗಿಸಲು ಒಲವು ತೋರಿದ್ದಾರೆ. ಯಾವುದೇ ಅಧಿಕೃತವಾಗಿಲ್ಲಿ. ಇದು ಪ್ರಾಥಮಿಕ ಹಂತದಲ್ಲಿದೆ' ಎಂದು ಮಾಹಿತಿ ನೀಡಿದ್ದಾರೆ.

ಒಟಿಟಿ ರಿಲೀಸ್ ಇಷ್ಟವೇ ಇರಲಿಲ್ಲ

ಒಟಿಟಿ ರಿಲೀಸ್ ಇಷ್ಟವೇ ಇರಲಿಲ್ಲ

ಸೂರರೈ ಪೊಟ್ರು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ನಿರ್ದೇಶಕಿ ಸುಧಾ ಅವರಿಗೆ ಇಷ್ಟ ಇರಲಿಲ್ಲ. ಆದರೂ ಚಿತ್ರ ಪ್ರಚಾರ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಮಾಧಾನಪಟ್ಟುಕೊಂಡಿದ್ದರಂತೆ. 'ಎಲ್ಲವೂ ದೇವರ ಕೈಯಲ್ಲಿದೆ. ಪ್ರಾರಂಭದಲ್ಲಿ ಒಟಿಟಿಯಲ್ಲಿ ಏಕೆ ರಿಲೀಸ್ ಮಾಡಬೇಕು ಎಂದು ಯೋಚಿಸಿದೆ. ನನಗೆ ಇಷ್ಟವೂ ಇರಲಿಲ್ಲ. ಆಮೇಲೆ ಚಿತ್ರಕ್ಕೆ ಸಿಕ್ಕ ಪ್ರತಿಫಲ ನೋಡಿ ಮೌನವಾಗಿ ಸಂತಸ ಪಡಬೇಕಾಯಿತು.

ರಿಮೇಕ್ ಹಕ್ಕು ಮಾರಾಟಕ್ಕೆ ತಡೆ

ರಿಮೇಕ್ ಹಕ್ಕು ಮಾರಾಟಕ್ಕೆ ತಡೆ

ಸೂರ್ಯ ಒಡೆತನದ 2ಡಿ ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಒಡೆತನದ ಸಿಖ್ಯ ಎಂಟರ್ಟೈನ್‌ಮೆಂಟ್ ಸಂಸ್ಥೆಯು ಒಟ್ಟಾಗಿ 'ಸೂರರೈ ಪೊಟ್ರು' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಆದರೆ ನಮ್ಮ ಒಪ್ಪಿಗೆ ಪಡೆಯದೆ ಸೂರ್ಯ ಒಬ್ಬರೇ ನಿರ್ಣಯ ತೆಗೆದುಕೊಂಡು 'ಸೂರರೈ ಪೊಟ್ರು' ಸಿನಿಮಾದ ಹಕ್ಕನ್ನು ಹಿಂದಿಗೆ ಮಾರಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಸೂರ್ಯ ಮಾರಿರುವ ರೀಮೇಕ್ ಹಕ್ಕು ಮಾರಾಟವನ್ನು ಅನುರ್ಜಿತಗೊಳಿಸಬೇಕು ಎಂದು ಸಿಖ್ಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ಗೆ ತಡೆ ನೀಡಿತ್ತು.

2020ರಲ್ಲಿ ಅಮೇಜಾನ್‌ನಲ್ಲಿ ರಿಲೀಸ್

2020ರಲ್ಲಿ ಅಮೇಜಾನ್‌ನಲ್ಲಿ ರಿಲೀಸ್

ಅಂದ್ಹಾಗೆ, ಈ ಚಿತ್ರವನ್ನು ಗುನೀತ್ ಮೊಂಗಾ ಜೊತೆ ಸೇರಿ ಸ್ವತಃ ಸೂರ್ಯ ಅವರೇ ನಿರ್ಮಾಣ ಮಾಡಿದ್ದರು. ಸೂರ್ಯ ಜೊತೆಯಲ್ಲಿ ಪರೇಶ್ ರಾವಲ್, ಅಪರ್ಣ, ಮೋಹನ್ ಬಾಬು, ಊರ್ವಶಿ ಸೇರಿದಂತೆ ಹಲವು ಪ್ರಮುಖ ಪಾತ್ರದಲ್ಲಿ ನಟಿಸಿದರು. ಸುಮಾರು 45 ಕೋಟಿಗೂ ಹೆಚ್ಚು ಮೊತ್ತಕ್ಕೆ ಅಮೇಜಾನ್ ಪ್ರೈಮ್ ಈ ಚಿತ್ರ ಖರೀದಿಸಿದ್ದರು ಎಂದು ವರದಿಯಾಗಿತ್ತು.

More from Filmibeat

English summary
Initial stages of discussion has begun with Akshay Kumar for Soorarai Pottru Hindi remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X