ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟ

Recommended Video

ಪತ್ನಿಗೆ ಈರುಳ್ಳಿ ಕಿವಿಯೋಲೆ ಕೊಟ್ಟ ನಟ ಅಕ್ಷಯ್ ಕುಮಾರ್ | FILMIBEAT KANNADA

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸದಾ ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇತ್ತೀಚಿಗೆ ಪತ್ನಿಗೆ ವಿಭಿನ್ನವಾದ ಗಿಫ್ಟ್ ನೀಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಂದ್ಹಾಗೆ ಅಕ್ಷಯ್ ಪತ್ನಿಗೆ ಕೊಟ್ಟ ಗಿಫ್ಟ್ ಅಂತಿಂತದಲ್ಲ. ಹೌದು, ಬಾಲಿವುಡ್ ಕಿಲಾಡಿ ಪತ್ನಿ ಟ್ವಿಂಕಲ್ ಕನ್ಹಾಗೆ ಈರುಳ್ಳಿ ಕಿವಿಯೋಲೆಯನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿಗೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ದಿನನಿತ್ಯ ಅಡುಗೆಗೆ ಬಳಸುವ ಈರುಳ್ಳಿ ಬೆಲೆ ಏಕಾಏಕಿ ಜಾಸ್ತಿ ಆಗಿರುವುದು ಚರ್ಚೆಯಾಗುತ್ತಿದೆ. ಅಲ್ಲದೆ ಈರುಳ್ಳಿ ಬಗ್ಗೆ ಸಾಕಷ್ಟು ಟ್ರೋಲ್ ಮತ್ತು ಜೋಕ್ ಗಳು ವೈರಲ್ ಆಗುತ್ತಿವೆ. ಇದರ ಬೆನ್ನಲ್ಲೆ ಅಕ್ಷಯ್ ಕುಮಾರ್ ಪತ್ನಿಗೆ ಈರುಳ್ಳಿ ಕಿವಿಯೋಲೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಅಂದ್ಹಾಗೆ ಅಕ್ಷಯ್ ಕುಮಾರ್ ಈ ಈರುಳ್ಳಿ ಕಿವಿಯೋಲೆಯನ್ನು ನಟಿ ಕರೀನಾ ಕಪೂರ್ ಗೆ ನೀಡಿದ್ದರು. ಅಕ್ಷಯ್ ಮತ್ತು ಕರೀನಾ ಕಪೂರ್ ಅಭಿನಯದ 'ಗುಡ್ ನ್ಯೂಸ್' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಖ್ಯಾತ ರಿಯಾಲಿಟಿ ಶೋ ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದರು.

Akshay Kumar Gifted Onion Earrings For His Wife Twinkle Khanna

ಈ ಶೋನಲ್ಲಿ ಅಕ್ಷಯ್ ಕುಮಾರ್ ಕರೀನಾ ಕಪೂರ್ ಗೆ ಕೊಟ್ಟಿದ್ರಂತೆ. ಆದರೆ ಕರೀನಾ ಈ ಕಿವಿಯೋಲೆ ನೋಡಿ ಅಷ್ಟು ಇಂಪ್ರೆಸ್ ಆಗಿಲ್ಲವಂತೆ. ಹಾಗಾಗಿ ಆ ಕಿವಿಯೋಲೆಯನ್ನು ಅಕ್ಷಯ್ ಪತ್ನಿಗೆ ತೆಗೆದುಕೊಂಡು ಕೊಟ್ಟಿದ್ದಾರೆ. ಟ್ವಿಂಕಲ್ ಕನ್ಹಾ ಈ ಈರುಳ್ಳಿ ಕಿವಿಯೋಲೆಯನ್ನು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಕಪಿಲ್ ಶರ್ಮ ಶೋ ಬಳಿಕ ನನ್ನ ಪತಿ ನನಗೆ ಇದನ್ನು ಗಿಫ್ಟಾನಿ ತಂದಿದ್ದಾರೆ. ಕರೀನಾ ಕಪೂರ್ ಗೆ ತೋರಿಸಿದರೆ ಅವರು ಅಷ್ಟು ಇಂಪ್ರೆಸ್ ಆಗಿಲ್ಲ. ನೀನಾದರು ಎಂಜಾಯ್ ಮಾಡುತ್ತೀಯಾ ಎಂದು ಅನಿಸಿತು ಹಾಗಾಗಿ ನಿನಗೆ ತಂದೆ ಎಂದರೂ. ಕೆಲವೊಮ್ಮೆ ಇದು ಚಿಕ್ಕ ವಸ್ತು ಎನಿಸಬಹುದು. ಇಂತಹ ಸಿಲ್ಲಿ ವಸ್ತು ನಿಮ್ಮ ಹೃದಯವನ್ನು ಸ್ಪರ್ಶಿಸಬಹುದು" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Bollywood actor Akshay Kumar gifted onion earrings for his wife Twinkle Khanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X