ನಾಲ್ಕು ದಿನದಲ್ಲಿ ಅಕ್ಷಯ್ ಕುಮಾರ್ 'ಗೋಲ್ಡ್' ಗಳಿಸಿದ್ದೆಷ್ಟು.?

By Bharath Kumar

ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಾಲಿವುಡ್ ನಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡುತ್ತಿದೆ. ಮೊದಲ ದಿನ 25.25 ಕೋಟಿ ಗಳಿಸಿದ್ದ ಗೋಲ್ಡ್ ನಾಲ್ಕು ದಿನಕ್ಕೆ ಹಾಫ್ ಸೆಂಚುರಿ ಬಾರಿಸಿದೆ.

ಎರಡನೇ ದಿನ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದ ಗೋಲ್ಡ್ ಕೇವಲ 8 ಕೋಟಿ ಗಳಿಸಿತ್ತು. ಈಗ ನಾಲ್ಕನೇ ದಿನಕ್ಕೆ ಒಟ್ಟು 55 ಕೋಟಿ ಹಣ ಗಳಿಸಿದೆ ಎಂದು ಬಾಲಿವುಡ್ ವಿಶ್ಲೇಷಕರು ತಿಳಿಸಿದ್ದಾರೆ.

ಗೋಲ್ಡ್ ಐತಿಹಾಸಿಕ ಸಿನಿಮಾವಾಗಿದ್ದು, ಹಾಕಿ ಕ್ರೀಡೆಯ ಜೊತೆ ದೇಶಭಕ್ತಿಯ ಕಥಾಹಂದರ ಹೊಂದಿದೆ. ಭಾರತದ ಮೊದಲ ಒಲಂಪಿಕ್ ಚಿನ್ನದ ಪದಕ ಗೆದ್ದ ಕಥೆಯನ್ನ ತೆರೆಮೇಲ ರೋಚಕವಾಗಿ ತರಲಾಗಿದೆ.

Akshay Kumar Gold 4th day collection

ಅಕ್ಷಯ್ ಕುಮಾರ್ ಜೊತೆಯಲ್ಲಿ ಮೌನಿ ರಾಯ್, ಕುನಾಲ್ ಕಪೂರ್, ಅಮಿತ್ ಸದಾ, ವಿನೀತ್ ಸಿಂಗ್ ಮತ್ತು ಸನ್ನಿ ಕುಶಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರೀಮಾ ಕಗ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಿತೇಶ್ ಸಿದ್ವಾನಿ ಮತ್ತು ಫರಾನ್ ಅಖ್ತರ್ ಬಂಡವಾಳ ಹಾಕಿದ್ದಾರೆ.

ಈ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಗೋಲ್ಡ್ ಮೂರನೇ ಸ್ಥಾನ ಹಾಗೂ ಸತ್ಯಮೇವಜಯತೇ ಐದನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ 'ಸಂಜು' (34.75), 'ರೇಸ್-3' (29.17), 'ಗೋಲ್ಡ್' (25.25), 'ಭಾಗಿ-2' (25.10), 'ಸತ್ಯಮೇವಜಯತೇ' (20.52) ಚಿತ್ರಗಳಿವೆ.

More from Filmibeat

English summary
Gold starring Akshay Kumar and Mouni Roy is doing pretty great at the Box Office. Despite its low collection on day 2, the film managed to collect Rs. 12 crore making it a total of Rs. 55 crore, Box Office India reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X