ಅಕ್ಕಿ ರೇಟು ಈಗ ಬಾಲಿವುಡ್ ನಲ್ಲೇ ಅತ್ಯಧಿಕ!

By Rajendra

ದಿನೇ ದಿನೇ ಕೇಜಿ ಅಕ್ಕಿ ರೇಟು ಲಂಗುಲಗಾಮಿಲ್ಲದಂತೆ ಏರುತ್ತಲೇ ಇದೆ. ಬಾಲಿವುಡ್ ನಲ್ಲಿ ಅಕ್ಕಿ ಎಂದು ಪ್ರೀತಿಯಿಂದ ಕರೆಸಿಕೊಂಡಿರುವ ನಟ ಅಕ್ಷಯ್ ಕುಮಾರ್ ರೇಟು ಅಷ್ಟೇ ಶರವೇಗದಲ್ಲಿ ಏರಿಕೆಯಾಗಿದೆ. ಈಗ ಅವರ ರೇಟು ಬಾಲಿವುಡ್ ನಲ್ಲೇ ಅತ್ಯಧಿಕ. ಖಾನ್ ತ್ರಯರನ್ನೂ ಹಿಂದಿಕ್ಕಿ ಅಕ್ಕಿ ಮುನ್ನುಗ್ಗಿದ್ದಾರೆ ಎಂದರೆ ನೀವೇ ಊಹಿಸಿ.

ರೌಡಿ ರಾಥೋಡ್, ಹೌಸ್ ಫುಲ್ 2, ಓ ಮೈ ಗಾಡ್, ಖಿಲಾಡಿ 786 ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದಂತಹವು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿತ್ರವೊಂದಕ್ಕೆ ಅಕ್ಕಿ ಪಡೆಯುವ ಸಂಭಾವನೆ ರು.50 ಕೋಟಿ ಮುಟ್ಟಿದೆ. 2013ನೇ ವರ್ಷವೂ ಅಕ್ಕಿ ಪಾಲಿಗೆ ತುಂಬಾ ಆಶಾದಾಯವಾಗಿದೆ.

ತಮಿಳಿನ ಯಶಸ್ವಿ ಚಿತ್ರ 'ತುಪಾಕಿ' ಹಿಂದಿ ರೀಮೇಕ್ ಚಿತ್ರಕ್ಕೆ ಅಕ್ಕಿ ಸಹಿಹಾಕಿದ್ದಾರೆ. ಈ ಚಿತ್ರವನ್ನು ರಿಲಯನ್ಸ್ ಸಂಸ್ಥೆ ನಿರ್ಮಿಸುತ್ತಿದ್ದು ಇದಕ್ಕಾಗಿ ರು.50 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಈ ಮೂಲಕ ಬಾಲಿವುಡ್ ನಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟನಾಗಿ ಅಕ್ಕಿ ಹೊರಹೊಮ್ಮಿದ್ದಾರೆ.

ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಅವರ ಸಂಬಳಕ್ಕೆ ಹೋಲಿಸಿದರೆ ಅಕ್ಕಿ ಸಂಭಾವನೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. 2012ರಲ್ಲಿ ತೆರೆಕಂಡ 'ರೌಡಿ ರಾಥೋಡ್' ಚಿತ್ರ ರು.100 ಕೋಟಿ ಕಲೆಕ್ಷನ್ ಮಾಡಿತ್ತು. ಏತನ್ಮಧ್ಯೆ ನಟನೆಯ ಜೊತೆಗೆ ಅಕ್ಕಿ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.

'ಬಾ ಜಿ ಇನ್ ಪ್ರಾಬ್ಲಂ' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಈ ಚಿತ್ರದ ಅತಿಥಿ ಪಾತ್ರದಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿನಯಿಸುತ್ತಿದ್ದಾರೆ. ಅಕ್ಕಿ ಸಹ ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಪ್ರತಿಷ್ಠಿತ ಚಿತ್ರ ಇದು ಎನ್ನುತ್ತಾರೆ ಅಕ್ಕಿ. ನೋಡೋಣ. (ಏಜೆನ್ಸೀಸ್)

More from Filmibeat

English summary
Actor Akshay Kumar is probably the highest paid in Bollywood. The actor has signed a new flick and for which he will be paid nearly Rs 50 crores rupees. Which is a remake of the south film ‘Thupakki’. Akshay Kumar has signed the film with Reliance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X