ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಅಕ್ಷಯ್ ಕುಮಾರ್; ಒಂದು ಸಿನಿಮಾಗೆ ಪಡೆಯುವ ಹಣವೆಷ್ಟು?

ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಕ್ಷಯ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸಿನಿಮಾ ಮುಗಿಸಿ ಅಭಿಮಾನಿಗಳ ಮುಂದೆ ಬರುವ ಅಕ್ಷಯ್ ಕುಮಾರ್ ಭಾರತ ಸಿನಿಮಾದರಂಗದ ಬಹುಬೇಡಿಕೆಯ ನಟರಾಗಿದ್ದಾರೆ.

ಹೆಚ್ಚು ಬೇಡಿಕೆಯ ನಟರಾಗಿರುವ ಅಕ್ಷಯ್, ಸಂಭಾವನೆ ಕೂಡ ಅಷ್ಟೆ ಇದೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್. ಹೌದು, 100 ಕೋಟಿಗೂ ಅಧಿಕ ಸಂಭಾವನೆ ಜೇಬಿಗಿಳಿಸುವ ಅಕ್ಷಯ್ ಈ ಬಾರಿ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಕೊರೊನಾ ಕಾಲದಲ್ಲಿ ಅನೇಕರು ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ. ಆದರೆ ಅಕ್ಷಯ್ ಕುಮಾರ್ ಸಂಭಾವನೆ ಮತ್ತಷ್ಟು ಏರಿಕೆಯಾಗಿದೆ. ಹಾಗಾದರೆ ಅಕ್ಷಯ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ

117 ಕೋಟಿ ಪಡೆಯುತ್ತಿದ್ದ ಅಕ್ಷಯ್ ಕುಮಾರ್

117 ಕೋಟಿ ಪಡೆಯುತ್ತಿದ್ದ ಅಕ್ಷಯ್ ಕುಮಾರ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್ ಈ ವರ್ಷ ಕೊರೊನಾದಿಂದ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ಸಾಲು ಸಾಲು ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇದೆ. ಈ ವರ್ಷ ಅಕ್ಷಯ್ ತನ್ನ ಸಂಭಾವನೆಯನ್ನು 108 ಕೋಟಿಯಿಂದ ಇತ್ತೀಚಿಗಷ್ಟೆ 117 ಕೋಟಿ ರೂ.ಗೆ ಏರಿಸಿಕೊಂಡಿದ್ದರು. ಇದೀಗ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

135 ಕೋಟಿ ರೂಪಾಯಿಗೆ ಸಂಭಾವನೆ ಏರಿಕೆ

135 ಕೋಟಿ ರೂಪಾಯಿಗೆ ಸಂಭಾವನೆ ಏರಿಕೆ

ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಇದ್ದರೆ ಕಡಿಮೆ ಬಜೆಟ್ ನಲ್ಲಿ, ಕಡಿಮೆ ಖರ್ಚಿನಲ್ಲಿ ಉತ್ತಮ ಸಿನಿಮಾ ಮಾಡಿ, ದುಪ್ಪಟ್ಟು ಹಣ ಗಳಿಸಬಹುದು ಎನ್ನುವುದು ನಿರ್ಮಾಪಕರ ಲೆಕ್ಕಾಚಾರ. ಹಾಗಾಗಿ ಅಕ್ಷಯ್ ಕುಮಾರ್ ಗೆ ಬೇಡಿಕೆಯೂ ಹೆಚ್ಚು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಅಕ್ಷಯ್ ತನ್ನ ಸಂಭಾವನೆಯನ್ನು ಏರಿಸಿಕೊಳ್ಳುತ್ತಿದ್ದಾರೆ, ಇದೀಗ ಅಕ್ಷಯ್ ಒಂದು ಸಿನಿಮಾಗೆ 135 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.

2022ರಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಸಂಭಾವನೆ ಹೆಚ್ಚಳ

2022ರಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಸಂಭಾವನೆ ಹೆಚ್ಚಳ

2021ರಲ್ಲಿ ರಿಲೀಸ್ ಆಗಲು ಸಿದ್ಧವಾಗಿರುವ ಸಿನಿಮಾಗಳಿಗೆ 100 ಕೋಟಿ ರೂ. ಗಳಿಂದ 117 ಕೋಟಿ ವರೆಗೂ ಸಂಭಾವನೆ ಪಡೆದಿದ್ದ ಅಕ್ಷಯ್ ಕುಮಾರ್, 2022ರಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ 135 ರೂ. ಪಡೆಯುತ್ತಿದ್ದಾರೆ. ಈಗಾಗಲೇ ಅಕ್ಷಯ್ ಸಾಕಷ್ಟು ಸಿನಿಮಾಗಳ ಕಥೆ ಕೇಳಿ, ಸಹಿ ಮಾಡುತ್ತಿದ್ದಾರಂತೆ. ಅಕ್ಷಯ್ ಕುಮಾರ್ ಸದ್ಯ ಸೂರ್ಯವಂಶಿ ಮತ್ತು ಬೆಲ್ ಬಾಟಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಅಕ್ಷಯ್ ಕುಮಾರ್ ಬಳಿ ಇರುವ ಸಿನಿಮಾಗಳು

ಅಕ್ಷಯ್ ಕುಮಾರ್ ಬಳಿ ಇರುವ ಸಿನಿಮಾಗಳು

ಅಕ್ಷಯ್ ಕುಮಾರ್ ಬಳಿ ಪೃಥ್ವಿರಾಜ್, ಅತ್ರಂಗಿ ರೇ, ರಾಮ್ ಸೇತು, ಮಿಷನ್ ಲಯನ್, ಬಚ್ಚನ್ ಪಾಂಡೆ, ರಕ್ಷಾಬಂಧನ್ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳನ್ನು 2021ರಲ್ಲಿ ಪೂರ್ಣಗೊಳಿಸಲಿದ್ದಾರೆ. ಮುಂದಿನ ವರ್ಷ ಸಹಿ ಮಾಡುವ ಸಿನಿಮಾಗಳಿಗೆ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ. ಅಕ್ಷಯ್ ಕುಮಾರ್ ಈ ವರ್ಷ ಲಕ್ಷೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.

More from Filmibeat

English summary
Bollywood Actor Akshay Kumar increased his remuneration from Rs 117 crore to Rs 135 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X