2020: ಅತಿ ಹೆಚ್ಚು ಹಣ ಗಳಿಸಿದ ವಿಶ್ವದ 100 ಸೆಲೆಬ್ರಿಟಿಗಳಲ್ಲಿ ಒಬ್ಬ ಭಾರತೀಯ!
ಈ ವರ್ಷ ವಿಶ್ವದಾದ್ಯಂತ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡರು, ವ್ಯವಹಾರಗಳಲ್ಲಿ ಭಾರಿ ನಷ್ಟ ಅನುಭವಿಸಿದರು. ಒಟ್ಟಾರೆ ವಿಶ್ವ ಆರ್ಥಿಕತೆಯೇ 10 ವರ್ಷ ಹಿಂದಕ್ಕೆ ನೂಕಲ್ಪಟ್ಟಿತು ಕೊರೊನಾದಿಂದ.
ಆದರೂ ಸಹ ಹಣ ಗಳಿಸುವವರು ಗಳಿಸುತ್ತಲೇ ಸಾಗಿದರು. ಯಾವುದು ಏನೇ ಆಗಲಿ ಕೆಲವರ ಹಣ ಗಳಿಕೆ ಮೇಲಂತೂ ಅಂಕುಶ ಬೀಳಲಿಲ್ಲ. ಇದೀಗ ವರ್ಷಾಂತ್ಯದಲ್ಲಿ 'ಫೋರ್ಬ್ಸ್' ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ 100 ಮಂದಿ ವಿಶ್ವ ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಈ ವರ್ಷ ವಿಶ್ವದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಒಬ್ಬ ಬಾಲಿವುಡ್ ನಟರೂ ಇದ್ದಾರೆ. ಕಳೆದ ವರ್ಷವೂ ಈ ನಟ ಪಟ್ಟಿಯಲ್ಲಿದ್ದರು. ಈ ವರ್ಷವೂ ಇದ್ದಾರೆ ಅವರೇ ಅಕ್ಷಯ್ ಕುಮಾರ್.

ಅಕ್ಷಯ್ ಕುಮಾರ್ ಗೆ ಎಷ್ಟನೇ ಸ್ಥಾನ
ಹೌದು, ನಟ ಅಕ್ಷಯ್ ಕುಮಾರ್ ಈ ವರ್ಷ ವಿಶ್ವದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ 100 ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್‌ಕುಮಾರ್ ಗೆ 52 ನೇ ಸ್ಥಾನ ದೊರೆತಿದೆ. ಖ್ಯಾತ ನಾಮ ಹಾಲಿವುಡ್ ನಟರನ್ನೂ ಸಹ ಹಿಂದಿಕ್ಕಿದ್ದಾರೆ ಅಕ್ಷಯ್ ಕುಮಾರ್.

ಅಕ್ಷಯ್ ಈ ವರ್ಷ ಗಳಿಸಿರುವುದು ಎಷ್ಟು ಗೊತ್ತೆ?
ಫೋರ್ಬ್ಸ್ ಪ್ರಕಾರ ಅಕ್ಷಯ್ ಕುಮಾರ್ ಈ ವರ್ಷ 48.5 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಭಾರತೀಯ ರುಪಾಯಿಗಳಲ್ಲಿ ಈ ವರ್ಷ ಅಕ್ಷಯ್ ಕುಮಾರ್ ಗಳಿಸಿರುವುದು ಬರೋಬ್ಬರಿ 358 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ.

ವಿಲ್ ಸ್ಮಿತ್, ಜಾಕಿ ಚಾನ್ ಅನ್ನು ಮೀರಿಸಿದ್ದಾರೆ
ಬಾಲಿವುಡ್ ಸಿನಿಮಾಗದಲ್ಲಿ ನಟಿಸಿರುವ ವಿಲ್ ಸ್ಮಿತ್, ಖ್ಯಾತ ನಟ ಜಾಕಿ ಚಾನ್ ಇನ್ನೂ ಹಲವಾರು ಖ್ಯಾತನಾಮರನ್ನು ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ ಅಕ್ಷಯ್ ಕುಮಾರ್. ಕಳೆದ ವರ್ಷವೂ ಅಕ್ಷಯ್ ಕುಮಾರ್ ಈ ಪಟ್ಟಿಯಲ್ಲಿದ್ದರು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಪ್ರಮುಖರು ಅಕ್ಷಯ್ ಕುಮಾರ್.
Recommended Video

ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ
ಈ ವರ್ಷ ಅಕ್ಷಯ್ ನಟನೆಯ ಲಕ್ಷ್ಮಿ ಈಗಾಗಲೇ ಬಿಡುಗಡೆ ಆಗಿದೆ. ಇದರ ಬಳಿಕ 'ಅತರಂಗಿ ರೇ', ಬಚ್ಚನ್ ಪಾಂಡೆ, ಬೆಲ್ ಬಾಟಮ್, ರಾಮ್ ಸೇತು, ಮಹಿಳಾ ಮಂಡಲಿ, ಸೂರ್ಯ ವಂಶಿ, ರಕ್ಷಾ ಬಂಧನ್, ಪೃಥ್ವಿರಾಜ್, ಹೇರಾಪೇರಿ 3, ರೌಡಿ ರಾಥೋಡ್ 2 ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಕೆಲವು ಸಿನಿಮಾಗಳ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ.


Click it and Unblock the Notifications











