For Quick Alerts
  ALLOW NOTIFICATIONS  
  For Daily Alerts

  '2.0' ಚಿತ್ರದ ಬಗ್ಗೆ ಅಕ್ಷಯ್ ಕುಮಾರ್ ಕೊಟ್ರು ಬ್ರೇಕಿಂಗ್ ನ್ಯೂಸ್.!

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ '2.0' ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ.

  ಈ ಹಿಂದೆ ಪೋಸ್ಟರ್, ಮೇಕಿಂಗ್ ವಿಡಿಯೋ ಹಾಗೂ ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಬಿಡುಗಡೆಗೆ ಸಿದ್ದವಾಗಿರುವ '2.0' ಚಿತ್ರದ ಬಗ್ಗೆ ಬಾಲಿವುಡ್ ಕಿಲಾಡಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

  ಎಲ್ಲರೂ ಅಂದುಕೊಂಡಿರುವಂತೆ ಈ ಚಿತ್ರದಲ್ಲಿ ರಜನಿಕಾಂತ್ ಹೀರೋ ಹಾಗೂ ಅಕ್ಷಯ್ ಕುಮಾರ್ ವಿಲನ್ ಎನ್ನಲಾಗಿದೆ. ಆದ್ರೆ, ಬಿಡುಗಡೆಗೆ ಮುಂಚೆಯೇ ಅಕ್ಕಿ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ. ಏನದು ಎಂದು ತಿಳಿದುಕೊಳ್ಳಲು ಮುಂದೆ ಓದಿ......

  ಅಕ್ಷಯ್ ವಿಲನ್ ಅಲ್ಲ.!

  ಅಕ್ಷಯ್ ವಿಲನ್ ಅಲ್ಲ.!

  '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ನೋಡಿ ಅಕ್ಷಯ್ ವಿಲನ್ ಎಂದು ಬಾವಿಸಲಾಗಿತ್ತು. ಆದ್ರೆ, ಎಲ್ಲರೂ ಅಂದುಕೊಂಡಿರುವಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ '2.0' ಚಿತ್ರದಲ್ಲಿ ವಿಲನ್ ಅಲ್ಲ.

  ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

  ರಜನಿಕಾಂತ್ ಹೀರೋನೂ ಅಲ್ಲ.!

  ರಜನಿಕಾಂತ್ ಹೀರೋನೂ ಅಲ್ಲ.!

  ಇನ್ನು '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೇಗೆ ವಿಲನ್ ಅಲ್ವೋ ಅದೇ ರೀತಿ, ಸೂಪರ್ ಸ್ಟಾರ್ ರಜನಿಕಾಂತ್ ಹೀರೋ ಅಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ ಎನ್ನಲಾಗಿದೆ.

  ರಜನಿ ಪಾತ್ರವನ್ನ ಅಮೀರ್ ಮಾಡಬೇಕಿತ್ತು: ರಿಜೆಕ್ಟ್ ಮಾಡಲು ರಜನಿನೇ ಕಾರಣ.!

  ಅಕ್ಷಯ್ ಪಾತ್ರವೇನು?

  ಅಕ್ಷಯ್ ಪಾತ್ರವೇನು?

  ಸ್ವತಃ ಅಕ್ಷಯ್ ಕುಮಾರ್ ಅವರೇ ಹೇಳಿಕೊಂಡಿರುವ ಪ್ರಕಾರ ಡಾ.ರಿಚರ್ಡ್ಸ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದು, ಸರಿಯಾದ ಕಾರಣಗಳಿಗಾಗಿ ಹೋರಾಡುವ ನಾಯಕನ ಪಾತ್ರವಂತೆ. ಭೂಮಿಯ ಮೇಲೆ ಸಂಘ‍ರ್ಷ ಉಂಟು ಮಾಡುವಂತಹ ಶಕ್ತಿಗಳ ವಿರುದ್ಧ ಹೋರಾಟ ಮಾಡುವ ಪಾತ್ರವಂತೆ.

  ಅಕ್ಷಯ್ ವೃತ್ತಿಜೀವನದಲ್ಲಿ ವಿಶೇಷ

  ಅಕ್ಷಯ್ ವೃತ್ತಿಜೀವನದಲ್ಲಿ ವಿಶೇಷ

  ಅಂದ್ಹಾಗೆ, ಇಂತಹ ಪಾತ್ರವನ್ನ ಅಕ್ಷಷಯ್ ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ಮಾಡಿಲ್ಲವಂತೆ. ಇದು ನೆಗಿಟೀವ್ ಶೇಡ್ ಹೊಂದಿರುವ ಪಾತ್ರವಲ್ಲವಂತೆ. ಆದ್ರೆ, ಪೋಸ್ಟರ್ ಮಾತ್ರ ಆ ರೀತಿ ಮಾಡಲಾಗಿದೆ ಎಂಬ ಸುದ್ದಿಯನ್ನ ಅಕ್ಷಯ್ ಬಿಚ್ಚಿಟ್ಟಿದ್ದಾರೆ.

  ಯುವ ಜನಾಂಗಕ್ಕೆ ಸೂಪರ್ ಸ್ಟಾರ್ ನೀಡಿದ ಸಲಹೆ ಏನು?

  ಹಾಗಿದ್ರೆ, ಚಿತ್ರಕ್ಕೆ ವಿಲನ್ ಯಾರು?

  ಹಾಗಿದ್ರೆ, ಚಿತ್ರಕ್ಕೆ ವಿಲನ್ ಯಾರು?

  ಅಕ್ಷಯ್ ಕುಮಾರ್ ಬಿಚ್ಚಿಟ್ಟಿರುವ ಬ್ರೇಕಿಂಗ್ ನ್ಯೂಸ್ ನ್ನ ಗಮನಿಸುವುದಾದರೇ ಚಿತ್ರದಲ್ಲಿ ರಜನಿಕಾಂತ್ ದ್ವೀಪಾತ್ರವನ್ನ ನಿರ್ವಹಿಸಿದ್ದು, ಚಿಟ್ಟಿ ಅವತಾರದಲ್ಲಿ ರಜನಿ ಮತ್ತೆ ಅಬ್ಬರಿಸಿಲಿದ್ದಾರೆ ಎಂಬುದು ಪಕ್ಕಾ ಎನ್ನಲಾಗುತ್ತಿದೆ.

  ಯಾವಾಗ ಬಿಡುಗಡೆ

  ಯಾವಾಗ ಬಿಡುಗಡೆ

  ಶಂಕರ್ ನಿರ್ದೇಶನ ಮಾಡಿರುವ ಈ ಚಿತ್ರದ ಸುಮಾರು 450 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, 2018ರ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ.

  English summary
  Akshay Kumar Is Not The Villain In 2.0. Read Inside Details About The Story Here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X