»   » ಈ ನಟ ಯಾರೆಂದು ಗುರುತಿಸಿ ನೋಡೋಣ.?

ಈ ನಟ ಯಾರೆಂದು ಗುರುತಿಸಿ ನೋಡೋಣ.?

Posted By:
Subscribe to Filmibeat Kannada

ದೊಡ್ಡ ಮೀಸೆ, ಪಂಜಾಬಿ ಸ್ಟೈಲ್ ನಲ್ಲಿ ಗಡ್ಡ. ತಲೆಯ ಮೇಲೆ ಪಂಜಾಬಿ ಸಂಪ್ರದಾಯದ ವಸ್ತ್ರ. ಇದೆಲ್ಲ ನೋಡಿದ್ರೆ ಸಾಕು ಇವರು ಪಕ್ಕಾ ಪಂಜಾಬಿ ಹೀರೋ ಅನಿಸುತ್ತೇ. ಅಷ್ಟಕ್ಕೂ, ಈ ನಟ ಯಾರಿರಬಹುದು ಎಂಬ ಕುತೂಹಲ ಕಾಡುತ್ತೆ. ಇದು ಬೇರೆ ಯಾರು ಅಲ್ಲ. ಬಿ-ಟೌನ್ ಖಿಲಾಡಿ ಅಕ್ಷಯ್ ಕುಮಾರ್.

ಸದ್ಯ, 'ಪ್ಯಾಡ್ ಮ್ಯಾನ್' ಚಿತ್ರದ ಯಶಸ್ಸಿನ ನಂತರ ನಟ ಅಕ್ಷಯ್ ಕುಮಾರ್ 'ಗೋಲ್ಡ್', 'ಮೊಘಲ್' ಹಾಗೂ 'ಕೇಸರಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ, 'ಕೇಸರಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆಟಪ್ ಬಹಿರಂಗವಾಗಿದ್ದು, ಮತ್ತೆ ಪಂಜಾಬಿ ಹೀರೋ ಆಗಿ ಮಿಂಚುತ್ತಿದ್ದಾರೆ.

ಇತ್ತೀಚಿಗಷ್ಟೆ ಕೇಸರಿ ಚಿತ್ರದ ಬಗ್ಗೆ ಮಾತನಾಡಿದ ಅಕ್ಷಯ್ ಕುಮಾರ್ ''ಕಳೆದ ಒಂದೂವರೆ ತಿಂಗಳಿನಿಂದ 'ಕೇಸರಿ' ಚಿತ್ರೀಕರಣ ಮಾಡುತ್ತಿದ್ದೇನೆ ಮತ್ತು ಪ್ರತಿ ಬಾರಿ ನಾನು ತಲೆಯ ಮೇಲೆ ಟರ್ಬನ್ ಧರಿಸುತ್ತಿದ್ದೇನೆ, ಹಾಗಾಗಿ ನನಗೆ ಹೆಮ್ಮೆ ಇದೆ'' ಎಂದಿದ್ದಾರೆ.

Akshay Kumar look revealed in kesari movie

ಇದಕ್ಕೂ ಮುಂಚೆ 'ಸಿಂಗ್ ಈಸ್ ಕಿಂಗ್' ಹಾಗೂ 'ಸಿಂಗ್ ಈಸ್ ಬ್ಲಿಂಗ್' ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಪಂಜಾಬಿ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು.

ಪ್ರತಿಯೊಂದು ಚಿತ್ರದಲ್ಲಿ ಸಾಮಾಜಿಕ ಸಮಸ್ಯೆಗಳು ಹಾಗೂ ಸಾಮಾಜಿಕ ವಿಚಾರಗಳನ್ನಿಟ್ಟು ಸಿನಿಮಾ ಮಾಡುವ ಅಕ್ಷಯ್ ಕುಮಾರ್ ಕೇಸರಿ ಚಿತ್ರದಲ್ಲಿ ಯಾವ ರೀತಿ ರಂಜಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅನುರಾಗ್ ಸಿಂಗ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪರಿಣಿತ ಚೋಪ್ರಾ ನಾಯಕಿಯಾಗಿದ್ದಾರೆ.

English summary
Akshay Kumar, who is busy with the shoot of his upcoming film Kesari, says wearing a turban for the role fills him with pride.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X