ಕತ್ರೀನಾ-ವಿಕ್ಕಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದು ಯಾಕೆ ಅಕ್ಷಯ್ ಕುಮಾರ್!

ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮೊನ್ನೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನಡೆಯಿತು.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ರಾಯಲ್ ವೆಡ್ಡಿಂಗ್‌ಗೆ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ತಾರೆಯರು ಸಾಕ್ಷಿಯಾಗಿದ್ದರು. ಹೊಸ ಜೀವನಕ್ಕೆ ನಾಂದಿ ಹಾಡಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಗೆ ಬಾಲಿವುಡ್ ಮಂದಿ ಶುಭ ಹಾರೈಸುತ್ತಿದ್ದಾರೆ. ಹೀಗಿರುವಾಗಲೇ, ನವ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಬಗ್ಗೆ ನಟ ಅಕ್ಷಯ್ ಕುಮಾರ್ ನಗೆ ಚಟಾಕಿ ಹಾರಿಸಿದ್ದಾರೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಡೆದಿದೆ. ಮದುವೆ ಸಡಗರದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಫೊಟೋಗಳು ವೈರಲ್ ಆಗಿತ್ತಿವೆ.

ಟಾಕ್‌ ಶೋ ನಲ್ಲಿ ಅಕ್ಷಯ್‌ ಕುಮಾರ್ ಹೇಗೆ ಹೇಳಿದ್ದು ಯಾಕೆ?

ಟಾಕ್‌ ಶೋ ನಲ್ಲಿ ಅಕ್ಷಯ್‌ ಕುಮಾರ್ ಹೇಗೆ ಹೇಳಿದ್ದು ಯಾಕೆ?

ಕತ್ರೀನಾ-ವಿಕ್ಕಿ ವಿವಾಹದ ವಿಡಿಯೋಗಳು ಇನ್ನೂ ಲಭ್ಯವಾಗಿಲ್ಲ. ಯಾಕೆಂದರೆ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹದ ವಿಡಿಯೋ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತ ನೀಡಿ ಅಮೆಜಾನ್ ಪ್ರೈಮ್ ಖರೀದಿ ಮಾಡಿದೆ. ಹೀಗಾಗಿ ಮದುವೆಯ ಒಂದಷ್ಟು ಫೊಟೋಗಳನ್ನು ಬಿಟ್ಟರೇ ಮತ್ಯಾವುದೇ ವಿಡಿಯೋಗಳು ಇನ್ನು ಹೊರಬಂದಿಲ್ಲಾ. ಹಾಗೇ ಕತ್ರಿನಾ ಕೈಫ್ ಮತ್ತು ವಿಕ್ಕ ಕೌಶಲ್ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಕತ್ರೀನಾ ಮತ್ತು ವಿಕ್ಕಿ ಕೌಶಲ್ ವಯಸ್ಸಿನ ಅಂತರದ ಬಗ್ಗೆ ಭಾರೀ ಚರ್ಚೆ ಜೊತೆಗೆ ಟ್ರೋಲ್ ಕೂಡ ಆಗುತ್ತಿದೆ.

ಅಕ್ಷಯ್ ಕುಮಾರ್ ಮಾಡಿದ ಕಾಮಿಡಿ ಹಿಂದೆ ಇದೆಯಾ ಕಾರಣ ?

ಅಕ್ಷಯ್ ಕುಮಾರ್ ಮಾಡಿದ ಕಾಮಿಡಿ ಹಿಂದೆ ಇದೆಯಾ ಕಾರಣ ?

ಈಗ ಕತ್ರೀನಾ ಮದುವೆಯ ವಿಚಾರವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಹಾ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಟ ಅಕ್ಷಯ್ ಕುಮಾರ್ ನಟಿಸಿರುವ ಅಂತರಂಗೀ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆಗೊಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿ ಸಾರಾ ಅಲಿ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಪ್ರಮೋಷನ್ ಭಾಗವಾಗಿ ಅಕ್ಷಯ್ ಕುಮಾರ್ ಹಾಗೂ ಸಾರಾ ಕಿರುತೆರೆಯ ಜನಪ್ರಿಯ ಕಾಮೆಡಿ ಶೋ ದಿ ಕಪಿಲ್ ಶರ್ಮಾ ಶೋ ಗೆ ಆಗಮಿಸಿದ್ದರು.ಈ ಶೋ ನಲ್ಲಿ ಅಕ್ಷಯ್ ಕುಮಾರ್ ಏನು ಮಾತನಾಡಿದ್ದಾರೆ ಮುಂದೆ ಓದಿ.

ಹೇಗಿತ್ತು ಮದುವೆ ಎಂದು ಕೇಳಿದ ಅಕ್ಷಯ್ ಕುಮಾರ್ !

ಹೇಗಿತ್ತು ಮದುವೆ ಎಂದು ಕೇಳಿದ ಅಕ್ಷಯ್ ಕುಮಾರ್ !

ಶೋನಲ್ಲಿ ಕಿಕು ಶಾರದಾ ಹಾಸ್ಯ ಚಟಾಕಿ ಹಾರಿಸುತ್ತಾ, ನಾನು ಈಗಷ್ಟೇ ರಾಜಸ್ಥಾನದಿಂದ ಬಂದೆ. ಅಲ್ಲಿ ನಾನು ಒಂದು ಬಹಳ ಅದ್ದೂರಿ, ಹೈ ಫೈ ಎನಿಸುವ ಮದುವೆಯಲ್ಲಿ ಪಾಲ್ಗೊಂಡಿದ್ದೆ. ನನ್ನ ಇಡೀ ಜೀವನದಲ್ಲಿ ನಾನು ಅಂತಹ ಮದುವೆಯನ್ನು ನೋಡಿಲ್ಲ ಎಂದರೆ ನೀವು ನಂಬುವುದಿಲ್ಲ ಎಂದು ಹೇಳುತ್ತಾರೆ. ಆಗ ನಟ ಅಕ್ಷಯ್ ಕುಮಾರ್ ಆ ಮಾತನ್ನು ಕೇಳಿ ಆಶ್ಚರ್ಯ ಪಡುತ್ತಾ ಏಕೆ ? ಎನ್ನುವ ಪ್ರಶ್ನೆಯನ್ನು ಮಾಡುತ್ತಾರೆ.

ಏನು ಹೇಳುತ್ತಿದ್ದಾರೆ ಬಾಲಿವುಡ್ ಮಂದಿ?

ಏನು ಹೇಳುತ್ತಿದ್ದಾರೆ ಬಾಲಿವುಡ್ ಮಂದಿ?

ಕಿಕು ಶಾರದಾ ಆಗ, ನನಗೆ ಅವರು ಮದುವೇನಾ ನೋಡೋಕೆ ಬಿಡ್ಲಿಲ್ಲ, ಆದರೆ ಮದುವೆ ಮಾತ್ರ ಚೆನ್ನಾಗಿ ನಡೆಯಿತು ಎಂದು ತಮಾಷೆ ಮಾಡಿದಾಗ, ಅದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರ್ ಬಹುಶಃ ನೀವು ಮದುವೆಯಲ್ಲಿ ಕಿಟ್ ಕ್ಯಾಟ್ ತಿಂದಿರಬಹುದು ಅಲ್ಲವೇ? ಎಂದು ಪರೋಕ್ಷವಾಗಿ ಕತ್ರಿನಾ ಅವರ ಶಾರ್ಟ್ ಹೆಸರನ್ನು ತಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಅಕ್ಷಯ್ ಹಾಸ್ಯ ಚಟಾಕಿ ಹಾರಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

More from Filmibeat

English summary
Akshay Kumar reacts to Katrina and Vicky wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X