ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ನಟ ಅಕ್ಷಯ್ ಕುಮಾರ್; ಕಾರಣವೇನು?

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಇತ್ತೀಚಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಆದಿತ್ಯನಾಥ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮುಂಬೈನ ಟ್ರಿಡೆಂಟ್ ಹೋಟೆಲ್ ನಲ್ಲಿ ಬುಧವಾರ ಇಬ್ಬರು ಭೇಟಿಯಾಗಿದ್ದು, ಫಿಲ್ಮ್ ಸಿಟಿ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ಷಯ್ ಕುಮಾರ್ ಮತ್ತು ಸಿಎಂ ಮಾತುಕತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೋಯ್ಡಾದಲ್ಲಿ ಹೈಟೆಕ್ ಫಿಲ್ಮ್ ಸಿಟಿ ನಿರ್ಮಾಣವಾಗುತ್ತಿದ್ದು, ಈ ವಿಚಾರವಾಗಿ ಅಕ್ಷಯ್ ಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಕ್ಷಯ್ ಕುಮಾರ್ ಮಾತ್ರವಲ್ಲದೆ ಬಾಲಿವುಡ್ ನ ಖ್ಯಾತ ಕಲಾವಿದರ ಜೊತೆ ಮಾತುಕತೆ ನಡೆಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರಂತೆ.

ಫಿಲ್ಮ್ ಸಿಟಿ ಯೋಜನೆಗೆ ಆಕಾರ ನೀಡುವಂತೆ ಬಾಲಿವುಡ್ ಖ್ಯಾತ ನಾಮರು ಮತ್ತು ಉದ್ಯಮಿಗಳನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಫಿಲ್ಮ್ ಸಿಟಿ ಯೋಜನೆ ಪ್ರಾರಂಭ ಮಾಡಿರುವ ಸಿಎಂ, ಈ ವಿಚಾರವಾಗಿ ಅನೇಕರ ಜೊತೆ ಸಭೆ ಶುರು ಮಾಡಿದ್ದಾರೆ.

Akshay Kumar Meets UP Chief Minister Yogi Adityanath In Mumbai

ಆದಿತ್ಯನಾಥ್ ಭೇಟಿಗೆ ತೆರಳಿದ ಅಕ್ಷಯ್ ಕುಮಾರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭದ್ರತಾ ಸಿಬ್ಬಂದಿಯೊಂದಿಗೆ ಹೋಟೆಲ್ ಒಳಗೆ ಪ್ರವೇಶ ಮಾಡುತ್ತಿರುವುದು ಮತ್ತು ಆದಿತ್ಯನಾಥ್ ಜೊತೆ ಮಾತುಕತೆ ನಡೆಸುತ್ತಿರುವ ಅಕ್ಷಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಕ್ಷಯ್ ಕುಮಾರ್ ಬಳಿಕ ಯಾವೆಲ್ಲ ಸ್ಟಾರ್ ನಟರನ್ನು ಭೇಟಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಬಾಲಿವುಡ್ ನಿಂದ ಒಟ್ಟು 41 ಖ್ಯಾತನಾಮರ ಜೊತೆ ಮಾತುಕತೆ ನಡೆಸಲು ಪಟ್ಟಿಸಿದ್ಧವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

Akshay Kumar Meets UP Chief Minister Yogi Adityanath In Mumbai

Recommended Video

ಇಂದಿನ ದಿನವನ್ನು ಎಂದಿಗೂ ಮರೆಯುವುದಿಲ್ಲ ಪುನೀತ್ ರಾಜಕುಮಾರ್ | Filmibeat Kannada

ಅಂದಹಾಗೆ ಅಕ್ಷಯ್ ಇತ್ತೀಚಿಗೆ ಲಕ್ಷ್ಮೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸದ್ಯ ಬೆಲ್ ಬಾಟಮ್ ಮತ್ತು ಸೂರ್ಯವಂಶಿ ಸಿನಿಮಾಗಳ ಶೂಟಿಂಗ್ ಮುಗಿಸಿರುವ ಅಕ್ಷಯ್, ಪೃಥ್ವಿರಾಜ್, ಬಚ್ಚನ್ ಪಾಂಡೆ, ಅತ್ರಂಗಿ ರೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood Actor Akshay Kumar Meets UP Chief Minister Yogi Adityanath In Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X