For Quick Alerts
  ALLOW NOTIFICATIONS  
  For Daily Alerts

  ಯೋಧರ ಭೇಟಿಯಾಗಿ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ಬಿಎಸ್‌ಎಫ್ ಯೋಧರನ್ನು ಭೇಟಿಯಾಗಿ ಅವರೊಟ್ಟಿಗೆ ಕಾಲ ಕಳೆದಿದ್ದಾರೆ.

  ಕಾಶ್ಮೀರದ ಬಂಡಿಪೋರ ಏರಿಯಾಕ್ಕೆ ಭೇಟಿ ನೀಡಿದ್ದ ಅಕ್ಷಯ್ ಕುಮಾರ್ ಅಲ್ಲಿ ಗಡಿ ಕಾಯುತ್ತಿರುವ ಬಿಎಸ್‌ಎಫ್ ಯೋಧರ ಜೊತೆ ದಿನ ಕಳೆದರು. ಅವರೊಟ್ಟಿಗೆ ನೃತ್ಯ ಮಾಡಿ, ಆಟವಾಡಿ ಸಮಯ ಕಳೆದ ಅಕ್ಷಯ್ ಕುಮಾರ್. ಗಡಿ ನಿಯಂತ್ರಣ ರೇಖೆ ಬಳಿ ಇರುವ ತುಲಾಯಿ ಹಳ್ಳಿಯಲ್ಲಿ ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆಯನ್ನು ಸಹ ನೀಡಿದರು.

  ಜೊತೆಗೆ ಅಕ್ಷಯ್ ಕುಮಾರ್ ಹಾಗೂ ಬಿಎಸ್‌ಎಫ್ ಹಿರಿಯ ಅಧಿಕಾರಿಗಳು ಹುತಾತ್ಮ ಬಿಎಸ್‌ಎಫ್ ಯೋಧರಿಗೆ ಗೌರವ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ಬಿಎಸ್‌ಎಫ್‌ ಯೋಧರು ನೆರೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ''ನೀವು ಇಲ್ಲಿ ಇಂಥಹಾ ಚಳಿಯಲ್ಲಿ, ಪ್ರತಿಕೂಲ ಹವಾಮಾನದಲ್ಲಿ ಕೆಲಸ ಮಾಡುತ್ತಿರುವುದು ಅತೀವ ಆಶ್ಚರ್ಯ ಮತ್ತು ನಿಮ್ಮ ಬಗ್ಗೆ ಅತೀವ ಗೌರವ ಮೂಡಿಸುತ್ತಿದೆ'' ಎಂದಿದ್ದಾರೆ.

  ಅಕ್ಷಯ್ ಕುಮಾರ್, ಯೋಧರೊಟ್ಟಿಗೆ ಡಾನ್ಸ್ ಮಾಡುತ್ತಿರುವ ಆಟವಾಡುತ್ತಿರುವ, ಪರಸ್ಪರ ಶಕ್ತಿ ಪ್ರದರ್ಶನದ ಆಟಗಳಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಕ್ಷಯ್ ಕುಮಾರ್ ಸಹ ಕೆಲವು ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada

  ''ನೆನಪುಳಿಯುವಂತೆ ಈ ದಿನವನ್ನು ಬಿಎಸ್‌ಎಫ್ ಯೋಧರೊಟ್ಟಿಗೆ ಕಳೆದಿದ್ದೇನೆ. ದಿನ-ರಾತ್ರಿ ನಮ್ಮ ಗಡಿ ಕಾಯುವ ಈ ಯೋಧರು ವೀರ ಹೃದಯದವರು. ಇಲ್ಲಿಗೆ ಬರುವುದು, ನಿಜ ಜೀವನದ ಹೀರೋಗಳನ್ನು ಭೇಟಿಯಾಗುವುದು ಸದಾ ವಿನಮ್ರ ಭಾವ ಮೂಡಿಸುತ್ತದೆ. ನನ್ನ ಹೃದಯವು ಗೌರವಾದರಗಳಿಂದ ತುಂಬಿ ಹೋಗಿದೆ'' ಎಂದಿದ್ದಾರೆ ಅಕ್ಷಯ್.

  English summary
  Actor Akshay Kumar went to Kashmir's Bandipora and met BSF soldiers spent time with them. He gave 1 crore rs donaiton to build a school near LOC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X