ಅಪ್ಪ ಸೂಪರ್ ಸ್ಟಾರ್, 2,700 ಕೋಟಿ ಆಸ್ತಿಯ ಒಡೆಯ ; ಆದರೂ 4,500 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ ಮಗ

ಅಪ್ಪ ಸ್ಟಾರ್ ಆದರೆ ಮಕ್ಕಳು ಕೂಡ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಕ್ಕಳು ರಾಜಕಾರಣಿಯಾಗುವುದು ಈಗೀಗ ಕಾಮನ್ನು. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ.

ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲೊಬ್ಬರು .. ಇಲ್ಲೊಬ್ಬರು.. ತಮ್ಮ ತಂದೆ-ತಾಯಿಯ ನೆರಳಿನಾಚೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಚಿತ್ರರಂಗದ ಕಡೆ ಮುಖ ಹಾಕಿ ಮಲಗದೇ ಬೇರೆ ಬೇರೆ ಕ್ಷೇತ್ರಗಳತ್ತ ಗಮನ ಕೊಡುತ್ತಾರೆ. ಸಾಧನೆಯ ಶಿಖರಕ್ಕೇರುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಅಕ್ಷಯ್ ಕುಮಾರ್ ಅವರ ಮಗ ಆರವ್.

Akshay Kumar My Son Rejects Bollywood for 4 500 Job

ಹೌದು, ಆರವ್.. ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮುದ್ದಿನ ಮಗ. ತಂದೆಯಂತೆ ಸಮರ ಕಲೆಗಳಲ್ಲಿ ಅಪಾರವಾದ ಆಸಕ್ತಿ ಹೊಂದಿರುವ ಆರವ್ ಜಪಾನಿನ ಸಮರ ಕಲೆಯಾದ ಕುಡೋ (Kudo) ನಲ್ಲಿ 'ಫಸ್ಟ್ ಡಿಗ್ರಿ ಬ್ಲ್ಯಾಕ್ ಬೆಲ್ಟ್' ಪಡೆದಿದ್ದಾರೆ.

ಮುಂಬೈನ ಎಕೋಲ್ ಮಾಂಡಿಯಲ್ ವರ್ಲ್ಡ್ ಸ್ಕೂಲ್ ಪ್ರಾರ್ಥಮಿಕ ಶಿಕ್ಷಣ ಪಡೆದ ಆರವ್, ಆ ನಂತರ ತಮ್ಮ 15ರ ಹರೆಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಲಂಡನ್‌ಗೆ ತೆರಳಿದರು.

ಸದ್ಯ ಆರವ್‌ಗೆ ಈಗ 23ರ ಹರೆಯ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಹಲವು ಸೂಪರ್ ಸ್ಟಾರ್ ಗಳ ಮಕ್ಕಳು ಚಿತ್ರರಂಗದ ಬಾಗಿಲು ಬಡಿಯಲು ಶುರು ಮಾಡುತ್ತಾರೆ. ಕರಣ್ ಜೋಹರ್ ಕಛೇರಿಯ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಾರೆ.

ಆದರೆ ಆರವ್ ಮಾತ್ರ ಇದಕ್ಕೆ ತದ್ವಿರುದ್ದ. ತಂದೆಯ ಜಾಡು ಹಿಡಿದು ಚಿತ್ರರಂಗಕ್ಕೆ ಬರುವ ಯಾವ ಆಸಕ್ತಿಯೂ ಆರವ್‌ಗೆ ಇಲ್ಲ. ಈ ಮಾತನ್ನೂ ಖುದ್ದು ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ. ಆರವ್ ಹಿಂದಿ ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

akshay-kumar-my-son-rejects-bollywood-for-4-500-job

ತಮ್ಮ ಮಗನ ಮುಂದಿನ ಯೋಜನೆ ಯೋಚನೆಯನ್ನು ಕೂಡ ಹಂಚಿಕೊಂಡಿರುವ ಅಕ್ಷಯ್ ಕುಮಾರ್ ಮನೆಯಲ್ಲಿ ಹಣಕ್ಕೆ ಕೊರತೆ ಇಲ್ಲದಿದ್ದರೂ ಕೂಡ ನನ್ನ ಮಗ ತಿಂಗಳಿಗೆ 4,500 ರೂಪಾಯಿ ದುಡಿಯುತ್ತಿದ್ದಾನೆ ಎಂದು ಹೇಳುವ ಮೂಲಕ ಹಲವರನ್ನು ಅಚ್ಚರಿಗೆ ಕೂಡ ದೂಡಿದ್ದಾರೆ.

ಈ ಕುರಿತು ಶುಭಾಂಕರ್ ಮಿಶ್ರಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್ ಸಿನಿಮಾರಂಗದ ಮೇಲೆ ನನ್ನ ಮಗನಿಗೆ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ. ನನ್ನ ಮಗನಿಗೆ ಸರಳವಾದ ಬದುಕು ಇಷ್ಟ ಎಂದು ಹೇಳಿದ್ಧಾರೆ.

ಆರಂಭದಿಂದ ಅವನು ಕಲಿಯಲು ಇಷ್ಟಪಡುತ್ತಾನೆ ಎಂದು ಹೇಳಿರುವ ಅಕ್ಷಯ್ ಕುಮಾರ್ ಅವನು ಸದ್ಯಕ್ಕೆ ₹4500 ರೂಪಾಯಿಗೆ ಕೆಲಸ ಮಾಡುತ್ತಿದ್ಧಾನೆ ಎಂದು ಹೇಳಿದ್ದಾರೆ. ತಮ್ಮ ಮಗನ ಸಂಪಾದನೆಯ ಕುರಿತು ಹೆಮ್ಮೆಯನ್ನು ಕೂಡ ವ್ಯಕ್ತಪಡಿಸಿರುವ ಅಕ್ಷಯ್ ಕುಮಾರ್, ಅದರಲ್ಲೇನು ತಪ್ಪು, ಬದಲಿಗೆ ಅದು ಒಳ್ಳೆಯದೆ ಎಂದು ಹೇಳಿದ್ದಾರೆ. ಹಳ್ಳಿಗಳಿಗೆಲ್ಲಾ ಹೋಗುತ್ತಾನೆ, ಅಲ್ಲಿನ ಆಚಾರ-ವಿಚಾರ-ಸಂಸ್ಕ್ರತಿ ಕಲಿಯುತ್ತಾ ಅಲ್ಲಿನ ಫ್ಯಾಷನ್ ಕಲಿಯುತ್ತಿದ್ದಾನೆ ಎಂದು ಹೇಳಿದ್ದಾರೆ. ಬೇರೆ ಬೇರೆ ರೀತಿಯ ಪ್ರಿಂಟ್‌ಗಳು ಮತ್ತು ವಸ್ತುಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

ಶಾರ್ಟ್‌ಕಟ್‌ನಲ್ಲಿ ಅವನಿಗೆ ನಂಬಿಕೆ ಇಲ್ಲ ಎಂದು ಹೇಳಿರುವ ಅಕ್ಷಯ್ ಕುಮಾರ್, ತನ್ನ ಇಷ್ಟದ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳುತ್ತಾ ಒಂದೊಂದೆ ಹೆಜ್ಜೆ ಇಡುತ್ತಿದ್ದಾನೆ ಎಂದು ಹೇಳಿದ್ಧಾರೆ. ನಮ್ಮ ನಡುವೆ ಸಾಮ್ಯತೆ ಇದೆ ಎಂದು ಕೂಡ ಹೇಳಿರುವ ಅಕ್ಷಯ್ ಕುಮಾರ್ ನನ್ನಂತೆಯೇ ಅವನು ಕೂಡ ಶಿಸ್ತು ಬದ್ದವಾದ ಜೀವನದಲ್ಲಿ ನಂಬಿಕೆ ಹೊಂದಿದ್ದಾನೆ, ತನಗೆ ನೀಡಿದ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಾಡುತ್ತಾನೆ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಅವನಿಗೆ ಸಲಹೆ ಮತ್ತು ಮಾಗದರ್ಶನ ನೀಡುವುದಿಲ್ಲ ಎಂದು ಹೇಳಿರುವ ಅಕ್ಷಯ್ ಕುಮಾರ್, ಯಾವತ್ತು ಯಾರಿಗೂ ನೋವುಂಟು ಮಾಡಬೇಡ ಎನ್ನುವುದನ್ನು ಮಾತ್ರ ನಾನು ಅವನಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಅವನಿಗೆ ಅವನದ್ದೇ ಆದ ಆಯ್ಕೆಗಳಿವೆ, ಅವನ ಅನುಭವಗಳಿಂದ ಅವನು ಕಲಿಯಲಿ ಎಂದಿದ್ದಾರೆ.

ಅಂದ್ಹಾಗೇ financialexpress ವರದಿಯ ಪ್ರಕಾರ ಅಕ್ಷಯ್ ಕುಮಾರ್ 2700 ಕೋಟಿಯ ಒಡೆಯ. ಆದರೂ ಮಗ ಸದ್ಯ 4,500 ರೂಪಾಯಿಗೆ ಕೆಲಸ ಮಾಡುತ್ತಿದ್ದಾನೆ. ಈ ವಿಚಾರ ಸದ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದು ಅಪ್ಪನ ಸಾಮ್ರಾಜ್ಯಕ್ಕೆ ವಾರಸುದಾರನಾಗುವ ಬದಲು, ತನ್ನದೇ ಆದ ದಾರಿಯನ್ನು ಹುಡುಕಿಕೊಳ್ಳುತ್ತಿರುವ ಆರವ್‌ಗೆ ಒಳ್ಳೆಯದಾಗಲಿ ಎಂದು ಹಲವರು ಹಾರೈಸುತ್ತಿದ್ದಾರೆ.

English summary
Akshay Kumar opens up about his son's radical lifestyle choice: "He’s doing a ₹4,500 job." Discover why Aarav Kumar is turning his back on a billion-dollar legacy to find his own path far away from the glitz and glamour of cinema.`
Read more about: akshay kumar nepotism
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X