For Quick Alerts
  ALLOW NOTIFICATIONS  
  For Daily Alerts

  'ಧೂಮ್ 4'ನಲ್ಲಿ ವಿಲನ್ ಆಗ್ತಾರಾ ಅಕ್ಷಯ್ ಕುಮಾರ್?

  |
  Will Akshay Kumar be the villain in Dhoom 4 ? | FILMIBEAT KANNADA

  'ಧೂಮ್' ಸೀರಿಸ್ ನ ಮೂರು ಸಿನಿಮಾಗಳು ಈಗಾಗಲೇ ಬಾಕ್ಸ್ ಆಫೀಸ್ ಹೊಳ್ಳೆ ಹೊಡೆದಿವೆ. ಇದೀಗ 'ಧೂಮ್ 4' ಸಿನಿಮಾದ ನಿರ್ಮಾಣದ ತಯಾರಿಗಳು ನಡೆಯುತ್ತಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.

  ಈ ಸುದ್ದಿಯ ಬಗ್ಗೆ ಯಶ್ ರಾಜ್ ಫಿಲ್ಮ್ ಸ್ಪಷ್ಟನೆ ನೀಡಿದೆ. 'ಧೂಮ್ 4' ಸಿನಿಮಾ ಮಾಡುವ ಬಗ್ಗೆಯೇ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ, ಕಥೆ ಕೂಡ ಸಿದ್ಧವಾಗಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಅಕ್ಷಯ್ ಕುಮಾರ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಗಾಳಿ ಸುದ್ದಿ ಎಂದು ತಿಳಿಸಿದೆ.

  ಅಬ್ಬಬ್ಬಾ ಅಕ್ಷಯ್ : ಕಾಂಚನಾ ಗೆಟಪ್ ನಲ್ಲಿ 'ಮಿಷನ್ ಮಂಗಲ್' ಹೀರೋಅಬ್ಬಬ್ಬಾ ಅಕ್ಷಯ್ : ಕಾಂಚನಾ ಗೆಟಪ್ ನಲ್ಲಿ 'ಮಿಷನ್ ಮಂಗಲ್' ಹೀರೋ

  'ಧೂಮ್' ಮೊದಲ ಭಾಗದಲ್ಲಿ ಜಾನ್ ಅಬ್ರಾಹಾಂ, ಎರಡರಲ್ಲಿ ಹೃತ್ತಿಕ್ ರೋಷನ್, ಮೂರರಲ್ಲಿ ಅಮೀರ್ ಖಾನ್ ನಟಿಸಿದ್ದು, ನಾಲ್ಕನೇ ಭಾಗದಲ್ಲಿ ಅಕ್ಷಯ್ ಕುಮಾರ್ ಇರುತ್ತಾರೆ ಎನ್ನುವ ಸುದ್ದಿ ಬಂದಿತ್ತು. '2.O' ಸಿನಿಮಾದಲ್ಲಿ ರಜನಿಕಾಂತ್ ಎದುರು ವಿಲನ್ ಆದ, ಅಕ್ಷಯ್ ಕುಮಾರ್ ಇಲ್ಲಿ ಮತ್ತೆ ಖಳನಾಯಕನಾಗಿ ಅಭಿನಯುತ್ತಾರೆ ಎಂದು ಹೇಳಲಾಗಿತ್ತು.

  ಎಲ್ಲರಿಗೂ ತಿಳಿದಿರುವ ಹಾಗೆ, ಧೂಮ್ ಸೀರಿಸ್ ನಲ್ಲಿ ವಿಲನ್ ಗಳಿಗೆ ಹೆಚ್ಚು ಪ್ರಾಶಸ್ತ್ಯ ಇರುತ್ತದೆ. ಹೀರೋಗಳೇ ವಿಲನ್ ಆಗಿರುತ್ತಾರೆ. ಒಂದು ಧೂಮ್ ಸೀರಿಸ್ ನಲ್ಲಿ ಕಾಣಿಸಿಕೊಂಡ ನಟ ಮತ್ತೊಂದು ಸೀಸನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

  ಮೆಟ್ರೋದಲ್ಲಿ ಪ್ರಯಾಣಿಸಿದ ಅಕ್ಷಯ್ ಕುಮಾರ್: ಯಾರೂ ಕಂಡುಹಿಡಿದಿಲ್ಲಮೆಟ್ರೋದಲ್ಲಿ ಪ್ರಯಾಣಿಸಿದ ಅಕ್ಷಯ್ ಕುಮಾರ್: ಯಾರೂ ಕಂಡುಹಿಡಿದಿಲ್ಲ

  ಅಂದಹಾಗೆ, ಅಕ್ಷಯ್ ಕುಮಾರ್ 'ಹೌಸ್ ಫುಲ್ 4' ಸಿನಿಮಾ ನಿನ್ನೆ (ಅಕ್ಟೋಬರ್ 25) ರಂದು ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ಕಾಮಿಡಿ ಇರುವ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದರ ಜೊತೆಗೆ ತಮಿಳಿನ ಕಾಂಚನಾ (ಮುನಿ 2) ಸಿನಿಮಾದ ರಿಮೇಕ್ ನಲ್ಲಿಯೂ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.

  English summary
  Actor Akshay Kumar not in Dhoom 4 movie yet says Yash Raj Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X