For Quick Alerts
  ALLOW NOTIFICATIONS  
  For Daily Alerts

  ಬನ್ಸಾಲಿಗಾಗಿ ನಿರ್ಧಾರ ಬದಲಿಸಿಕೊಂಡ ಅಕ್ಷಯ್ 'ಪ್ಯಾಡ್ ಮ್ಯಾನ್'

  By Bharath Kumar
  |

  ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಕೊಂಡು 'ಪದ್ಮಾವತ್' ಸಿನಿಮಾ ಜನವರಿ 25 ರಂದು ವರ್ಲ್ಡ್ ವೈಡ್ ತೆರೆಕಾಣಲು ಸಜ್ಜಾಗಿದೆ. ಈ ಮಧ್ಯೆ 'ಪದ್ಮಾವತ್' ಚಿತ್ರಕ್ಕೆ ಅಕ್ಷಯ್ ಕುಮಾರ್ ಸಿನಿಮಾ ಕಾಂಪಿಟೇಟರ್ ಆಗಿ ಪರಿಣಮಿಸಿತು.

  ಎರಡು ಚಿತ್ರಗಳು ಒಟ್ಟಿಗೆ ತೆರೆ ಕಾಣುವುದರಿಂದ ಎರಡು ಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂಬ ಲೆಕ್ಕಾಚಾರವನ್ನ ಬಾಲಿವುಡ್ ಪಂಡಿತರು ಹಾಕಿದ್ದರು. ಆದ್ರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಎರಡು ಸಿನಿಮಾಗಳು ಅದೇ ದಿನ ಬರಲು ನಿರ್ಧರಿಸಿದ್ದರು. ಇದೀಗ, ದೀಢಿರ್ ಅಂತ ಅಕ್ಷಯ್ ನಿರ್ಣಯ ಬದಲಾಯಿಸಿಕೊಂಡಿದ್ದು, 'ಪದ್ಮಾವತ್' ಚಿತ್ರಕ್ಕಾಗಿ 'ಪ್ಯಾಡ್ ಮ್ಯಾನ್' ಮುಂದೂಡಲಾಗಿದೆ.

  ದೇಶದ ಎಲ್ಲಾ ಪ್ರೇಕ್ಷಕರಿಗೂ ಪದ್ಮಾವತ್ ದರ್ಶನ

  ಹೌದು, ಸಂಜಯ್ ಲೀಲಾ ಬನ್ಸಾಲಿ ಅವರು ನಟ ಅಕ್ಷಯ್ ಕುಮಾರ್ ಅವರನ್ನ ಭೇಟಿ ಮಾಡಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಅಕ್ಕಿ 'ಪ್ಯಾಡ್ ಮ್ಯಾನ್' ಚಿತ್ರವನ್ನ ಫೆಬ್ರವರಿ 9 ಕ್ಕೆ ಶಿಫ್ಟ್ ಮಾಡಿಕೊಂಡಿದ್ದಾರೆ.

  ಈ ಬಗ್ಗೆ ಬನ್ಸಾಲಿ ಹಾಗೂ ಅಕ್ಷಯ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಮಾತನಾಡಿದ ಬನ್ಸಾಲಿ, ಎಲ್ಲರಿಗೂ ಗೊತ್ತಿರುವ ಹಾಗೆ, ಪದ್ಮಾವತ್ ಚಿತ್ರ ಈಗಾಗಲೇ ಹೆಚ್ಚು ಅಡೆತಡೆಗಳನ್ನ ದಾಟಿ ಬಂದಿದೆ. ಹೀಗಾಗಿ, ಅಕ್ಷಯ್ ಕುಮಾರ್ ಅವರನ್ನ ಕೇಳಿಕೊಂಡೆ. ಅವರು 2 ನಿಮಿಷದಲ್ಲಿ ಒಪ್ಪಿಕೊಂಡು ಸಿನಿಮಾವನ್ನ ಮುಂದೂಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

  ಅಂದ್ಹಾಗೆ, ಅಕ್ಷಯ್ ಕುಮಾರ್ ಅಭಿನಯದ 'ಗಬ್ಬರ್ ಈಸ್ ಬ್ಯಾಕ್' ಹಾಗೂ 'ರೌಡಿ ರಾಥೋರ್' ಚಿತ್ರಗಳನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡಿದ್ದರು.

  English summary
  Sanjay Leela Bhansali looked relieved today as he thanked actor Akshay Kumar for postponing the release of his upcoming film PadMan, giving the director’s controversy-ridden Padmaavat a solo opening on January 25.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X