twitter
    For Quick Alerts
    ALLOW NOTIFICATIONS  
    For Daily Alerts

    26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ; ಹುತಾತ್ಮ ಯೋಧರಿಗೆ ಅಕ್ಷಯ್ ಕುಮಾರ್ ಗೌರವ ನಮನ

    |

    ನವೆಂಬರ್ 26 ಭಾರತೀಯರು ಮರೆಯಲಾಗದ ದಿನವಿದು. ಇವತ್ತಿಗೆ ಸರಿಯಾಗಿ 12ವರ್ಷಗಳ ಹಿಂದೆ ಮುಂಬೈನ ಹಲವಾರು ಪ್ರದೇಶಗಳ ಮೇಲೆ ಭಯೋತ್ಪಾದಕರು ಏಕಕಾಲಕ್ಕೆ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಗುರುವಾರ ಗೌರವ ನಮನ ಸಲ್ಲಿಸಲಾಗುತ್ತಿದೆ.

    2008ರ ನವೆಂಬರ್ 26ರಂದು ನಡೆದ ಘಟನೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಯೋಧರು, ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿ ಹಲವು ಪ್ರಮುಖಕರು ನುಡಿನಮನ ಸಲ್ಲಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

    ಅಕ್ಷಯ್ ಕುಮಾರ್ ಗೆ ಕಾನೂನು ಕ್ರಮದ ಬೆದರಿಕೆ ಹಾಕಿದ ಯೂಟ್ಯೂಬರ್ಅಕ್ಷಯ್ ಕುಮಾರ್ ಗೆ ಕಾನೂನು ಕ್ರಮದ ಬೆದರಿಕೆ ಹಾಕಿದ ಯೂಟ್ಯೂಬರ್

    ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ '26/11 ದಿನವನ್ನು ಮುಂಬೈಯಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಹೋರಾಡಿ ಹುತಾತ್ಮರಾದ ಯೋಧರಿಗೆ ನನ್ನ ಗೌರವ. ಧೈರ್ಯಶಾಲಿ ಯೋಧರ ತ್ಯಾಗಕ್ಕೆ ನಾವು ಶಾಶ್ವತವಾಗಿ ಚಿರಋಣಿಯಾಗಿರುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

    Akshay Kumar Pays Tribute to 26/11 Martyrs and Victims on 12th anniversary of attack

    Recommended Video

    ಆಮೇಜಾನ್ ನಲ್ಲಿ ಬಿಡುಗಡೆ ಆಯ್ತು 'ದಿಯಾ' ನಿರ್ಮಾಪಕರ ಮತ್ತೊಂದು ಚಿತ್ರ | Mane Number 13 |Exclusive Amazon Prime

    12 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಬಂದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ಮುಂಬೈಮೇಲೆ ದಾಳಿ ಮಾಡಿದ್ದರು. ಸುಮಾರು 60 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಲಾಗಿತ್ತು. 18 ಭದ್ರತಾ ಸಿಬ್ಬಂದಿ ಸೇರಿ 166 ಜನರು ಮೃತಪಟ್ಟಿದ್ದರು.

    ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಒಬೆರಾಯ್ ಟ್ರಿಡೆಂಟ್ ತಾರಾ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿ ಮನ್ ಹೌಸ್ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್ ನನ್ನು 2012ರಲ್ಲಿ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

    English summary
    Bollywood Actor Akshay Kumar pays tribute to 26/11 Martyrs.
    Thursday, November 26, 2020, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X