ಸಹ ನಟಿಯನ್ನು ಮನಸಾರೆ ಹೊಗಳಿದ ಅಕ್ಷಯ್ ಕುಮಾರ್

ಸಿನಿಮಾ ರಂಗದಲ್ಲಿ ಪರಸ್ಪರ ಹೊಗಳಿಕೆ ತುಸು ಕಡಿಮೆಯೇ. ಅದರಲ್ಲೂ ಸ್ಟಾರ್ ನಟರೊಬ್ಬರು ನಟಿಯನ್ನು ಹೊಗಳುವುದು ಅಪರೂಪವೇ. ಆದರೆ ನಟ ಅಕ್ಷಯ್ ಕುಮಾರ್ ತಮ್ಮ ಸಹನಟಿಯನ್ನು ಹೊಗಳಿದ್ದಾರೆ.

ನಟಿ ತಾಪ್ಸಿ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ ನಟ ಅಕ್ಷಯ್ ಕುಮಾರ್. ತಾಪ್ಸಿ ಪನ್ನು ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ 'ಬೇಬಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆ ಆಗಿ ಏಳು ವರ್ಷಗಳಾಗಿದ್ದು, ಆ ಸಿನಿಮಾದಲ್ಲಿ ತಾಪ್ಸಿ ಪನ್ನು ಚುಟುಕು ಪಾತ್ರದಲ್ಲಿ ನಟಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ತಾಪ್ಸಿ ಪನ್ನು, 'ಎಷ್ಟು ನಿಮಿಷದ ಪಾತ್ರ ಎಂಬುದು ನಗಣ್ಯ. ಪಾತ್ರ ಎಷ್ಟು ಪ್ರಭಾವ ಬೀರಿತು ಎಂಬುದಷ್ಟೇ ಮುಖ್ಯ. ಬೇಬಿ ಸಿನಿಮಾದ ಆ ಏಳು ನಿಮಿಷದ ಪಾತ್ರ ನನ್ನ ವೃತ್ತಿ ಜೀವನದ ದಿಕ್ಕು ಬದಲಾಯಿಸಿತು' ಎಂದಿದ್ದಾರೆ ನಟಿ ತಾಪ್ಸಿ ಪನ್ನು.

ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ: ಅಕ್ಷಯ್ ಕುಮಾರ್

ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ: ಅಕ್ಷಯ್ ಕುಮಾರ್

ತಾಪ್ಸಿ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, 'ನಿಮ್ಮ ಮಾತು ನಿಜ. ನಿಮ್ಮ ಪ್ರತಿಭೆಯ ಬಗ್ಗೆ ನನಗೆ ಅಪಾರ ಗೌರವವಿದೆ. ನಿಮ್ಮ ಪೂರ್ಣ ಪರಿಶ್ರಮವನ್ನು ನೀವು ಸಿನಿಮಾಕ್ಕೆ ಹಾಕುತ್ತೀರಿ. ನಿಮ್ಮ ಬಗ್ಗೆ ಬಹಳ ಹೆಮ್ಮೆಯಿದೆ. ನೀವು ಇನ್ನೂ ಎತ್ತರಕ್ಕೆ ಏರಲಿದ್ದೀರಿ' ಎಂದಿದ್ದಾರೆ ಅಕ್ಷಯ್ ಕುಮಾರ್.

ತಾಪ್ಸಿಯನ್ನು ಟೀಕಿಸಿದ್ದ ಕಂಗನಾ ರಣೌತ್

ತಾಪ್ಸಿಯನ್ನು ಟೀಕಿಸಿದ್ದ ಕಂಗನಾ ರಣೌತ್

ವಿಚಿತ್ರವೆಂದರೆ ಇದೇ ತಾಪ್ಸಿ ಪನ್ನು ಅವರನ್ನು ನಟಿ ಕಂಗನಾ ರಣೌತ್ ಹೀನಾಯವಾಗಿ ಟೀಕಿಸಿದ್ದರು ಟ್ವಿಟ್ಟರ್‌ನಲ್ಲಿ. ಬಿ ಗ್ರೇಡ್ ನಟಿ ಎಂದು ಸಹ ಕರೆದಿದ್ದರು. ನನ್ನನ್ನು ಕಾಪಿ ಮಾಡಿ ನಟಿ ಎನಿಸಿಕೊಂಡಿದ್ದಾಳೆ ಎಂದು ಸಹ ಟೀಕಿಸಿದ್ದರು. ಆದರೆ ಇಂದು ಅದೇ ತಾಪ್ಸಿ ಪನ್ನು ಅವರನ್ನು ನಟ ಅಕ್ಷಯ್ ಕುಮಾರ್ ಬಹುವಾಗಿ ಹೊಗಳಿದ್ದಾರೆ.

ತೆಲುಗು ಸಿನಿಮಾರಂಗದಿಂದ ಅಭಿನಯ ಆರಂಭ

ತೆಲುಗು ಸಿನಿಮಾರಂಗದಿಂದ ಅಭಿನಯ ಆರಂಭ

ತೆಲುಗು ಸಿನಿಮಾ ರಂಗದಿಂದ ನಟನಾ ವೃತ್ತಿ ಪ್ರಾರಂಭಿಸಿದ ತಾಪ್ಸಿ ಪನ್ನು ಪ್ರಸ್ತುತ ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಅವರ 'ಪಿಂಕ್', 'ತಪ್ಪಡ್', ನಾಮ್ ಶಬಾನಾ, 'ಮುಲ್ಕ್' ಇನ್ನೂ ಹಲವು ಸಿನಿಮಾಗಳು ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗವನ್ನೇ ತಂದುಕೊಟ್ಟಿವೆ.

Recommended Video

ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada
ತಾಪ್ಸಿ ಕೈಯಲ್ಲಿ ಹಲವು ಸಿನಿಮಾಗಳು

ತಾಪ್ಸಿ ಕೈಯಲ್ಲಿ ಹಲವು ಸಿನಿಮಾಗಳು

'ತಪ್ಪಡ್' ಸಿನಿಮಾ ಹಿಟ್ ಆದ ಬಳಿಕ ತಾಪ್ಸಿ ಪನ್ನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಹಸೀನ್ ಬಿಲ್‌ಬರಾ', ಕ್ರೀಡಾಪಟು ಕುರಿತ ಸಿನಿಮಾ ಆದ 'ರಶ್ಮಿ ರಾಕೆಟ್', 'ಜನ ಗಣ ಮನ', ಲೂಪ್ ಲಪೇಟಾ, ದೀಪಕ್ ಸುಂದರ್‌ರಾಜನ್ ನಿರ್ದೇಶಿಸುತ್ತಿರುವ ಹೆಸರಿಡ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ ತಾಪ್ಸಿ ಪನ್ನು.

More from Filmibeat

English summary
Actor Akshay Kumar praised Tapsee Pannu. He said proud of you and your onwards and upwards journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X