ಅಕ್ಷಯ್ ಕುಮಾರ್ ರೌಡಿ ಅವತಾರ ನೋಡಿ ದಂಗಾದ ಅಭಿಮಾನಿಗಳು

ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೇಗವಾಗಿ ಸಿನಿಮಾ ಚಿತ್ರೀಕರಣ ಮುಗಿಸುತ್ತಿರುವ ನಟ ಅಕ್ಷಯ್ ಕುಮಾರ್ ಇದೀಗ ರೌಡಿ ಅವತಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ತಲೆಗೆ ಕೆಂಪು ಬಣ್ಣದ ಬಟ್ಟೆ ಕಟ್ಟಿ, ಕೊರಳಿಗೆ ದಪ್ಪನೆಯ ಚೈನ್ ಗಳನ್ನು ಹಾಕಿ ಹಾಗೂ ಕೈಯಲ್ಲಿ ದೊಡ್ಡದಾದ ಬ್ರೇಸ್ಲೇಟ್, ಕಪ್ಪು ಬಣ್ಣದ ಶರ್ಟ್ ತೊಟ್ಟು ಯಾರನ್ನೊ ಹೊಡೆಯಲು ಸ್ಕೆಚ್ ಹಾಕಿ ಕುಳಿತಿರುವ ಅಕ್ಷಯ್ ಕುಮಾರ್ ಗೆಟಪ್ ಅಭಿಮಾನಿಗಳ ನಿದ್ದೆ ಗೆಡಿಸಿದೆ.

ಅಂದಹಾಗೆ ಇದು ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಸಿನಿಮಾದ ಲುಕ್. ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಚಿತ್ರದ ಮೊದಲ ಲುಕ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಅಂದಹಾಗೆ ಬಚ್ಚನ್ ಪಾಂಡೆ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾವಾಲ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ. ವಿಶೇಷ ಎಂದರೆ ಇಬ್ಬರ ಕಾಂಬಿನೇಷನ್ 10ನೇ ಸಿನಿಮಾವಿದು.

Akshay Kumars Bachchan Pandey first look release, he looks raw and rugged

ಈ ಬಗ್ಗೆ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ, ಹೊಸ ವರ್ಷ, ಆದರೆ ಹಳೆಯ ಸಂಘ. ಸಾಜಿದ್ ನಾಡಿಯಾವಾಲ ಅವರೊಂದಿಗೆ 10ನೇ ಸಿನಿಮಾವಿದು, ಬಚ್ಚನ್ ಪಾಂಡೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಯಿತು. ನಿಮ್ಮ ಹಾರೈೆಕೆ ಇರಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ ನಾಯಕಿಯರಾಗಿ ಇಬ್ಬರು ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೂನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಿದ್ದಾರೆ. ಇಬ್ಬರೂ ನಟಿಯರು ಸಹ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಚಿತ್ರಕ್ಕೆ ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಜೊತೆ ಹೌಸ್ ಫುಲ್ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಅಕ್ಷಯ್ ಕುಮಾರ್ ಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅರ್ಷದ್ ವಾರ್ಸಿ, ಪ್ರತೀಕ್ ಬಬ್ಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಟನಾಗಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತಾನಂತೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಸಿನಿಮಾತಂಡ ಚಿತ್ರೀಕರಣ ಪ್ರಾರಂಭವಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಈಗಾಗಲೇ, ಬೆಲ್ ಬಾಟಂ, ಸೂರ್ಯವಂಶಿ, ಅತ್ರಂಗಿ ರೇ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಪೃಥ್ವಿರಾಜ್, ರಾಮ್ ಸೇತು ಸೇರಿದಂತೆ ಅನೇಕ ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇವೆ. ಅಲ್ಲದೆ ಈ ವರ್ಷದಿಂದ ಸಹಿ ಮಾಡುವ ಹೊಸ ಸಿನಿಮಾಗಳಿಗೆ ಅಕ್ಷಯ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಕ್ಷಯ್ ಕೊನೆಯದಾಗಿ ಲಕ್ಷೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

More from Filmibeat

English summary
Bollywood Actor Akshay Kumar starrer Bachchan Pandey first look released, he looks raw and rugged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X