ಜನವರಿಯಲ್ಲಿ ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಆರಂಭ
ಹೌಸ್‌ಫುಲ್-4 ಸಿನಿಮಾದ ಬಳಿಕ ಅಕ್ಷಯ್ ಕುಮಾರ್ ಮತ್ತು ಕೃತಿ ಸನನ್ ಮತ್ತೊಮ್ಮೆ ಒಂದಾಗಿದ್ದು, ಸಾಜೀದ್ ನದಿಯಾದ್‌ವಾಲ್ ಅವರ ಆಕ್ಷನ್ ಕಾಮಿಡಿ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ.
ಈಗಾಗಲೇ 'ಬಚ್ಚನ್ ಪಾಂಡೆ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಫರ್ಹಾದ್ ಸಂಜಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಅಕ್ಷಯ್ ಕುಮಾರ್ ಮತ್ತು ಕೃತಿ ಸನನ್ ಮುಂದಿನ ವರ್ಷದ ಆರಂಭದಲ್ಲಿ 'ಬಚ್ಚನ್ ಪಾಂಡೆ' ಚಿತ್ರೀಕರಣ ಶುರುವಾಗಲಿದೆ.
ಈ ಕುರಿತು ಮುಂಬೈ ಮಿರರ್ ವರದಿ ಮಾಡಿದ್ದು, ''ಜನವರಿ ತಿಂಗಳಿನಿಂದ ಬಚ್ಚನ್ ಪಾಂಡೆ ಶೂಟಿಂಗ್ ಆರಂಭಿಸಿ ಮಾರ್ಚ್ ವರೆಗೂ ನಿರಂತರವಾಗಿ ಕೆಲಸ ಮಾಡಲಿದೆಯಂತೆ.

ಅಕ್ಷಯ್ ಕುಮಾರ್, ಕೃತಿ ಸನನ್, ನಿರ್ದೇಶಕ ಫರ್ಹಾದ್ ಸಂಜಿ ಸೇರಿದಂತೆ ಇಡೀ ಚಿತ್ರತಂಡ 60 ದಿನಗಳ ಶೂಟಿಂಗ್‌ಗಾಗಿ ರಾಜಸ್ಥಾನದ ಜೈಸಲ್ಮೇರ್ ಗೆ ಹೋಗಲಿದ್ದಾರೆ. ಈ ಸಂಬಂಧ ಕಳೆದ ತಿಂಗಳಲ್ಲಿ ಎಲ್ಲ ಅನುಮತಿಗಳನ್ನು ಪಡೆದುಕೊಂಡಿದ್ದು, ಲೋಕೇಶನ್ ಲಾಕ್ ಮಾಡಿಕೊಂಡಿದೆ.
ಚಿತ್ರೀಕರಣದಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮುಂಜಾಗೃತೆ ಕ್ರಮಕೈಗೊಂಡಿದೆ ಎಂದು ತಿಳಿದು ಬಂದಿದೆ.
ಅಂದ್ಹಾಗೆ, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ದರೋಡೆಕೋರನ ಪಾತ್ರದಲ್ಲಿ ನಟಿಸುತ್ತಿದ್ದು, ಕೃತಿ ಸನನ್ ನಿರ್ದೇಶಕಿಯಾಗಬೇಕೆಂಬ ಆಸೆಯಲ್ಲಿರುವ ಪತ್ರಕರ್ತನ ಪಾತ್ರ ಮಾಡಲಿದ್ದಾರೆ. ಸ್ಕಾಟ್‌ಲ್ಯಾಂಡ್‌ನಲ್ಲಿ 'ಬೆಲ್ ಬಾಟಂ' ಸಿನಿಮಾ ಮುಗಿಸಿರುವ ಅಕ್ಷಯ್ ಕುಮಾರ್, 'ಪೃಥ್ವಿರಾಜ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಇದಾದ ಬಳಿಕ 'ಬಚ್ಚನ್ ಪಾಂಡೆ' ಆರಂಭಿಲಿಸಿದ್ದಾರೆ.


Click it and Unblock the Notifications











