ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೇಗವಾಗಿ ಸಿನಿಮಾ ಚಿತ್ರೀಕರಣ ಮುಗಿಸುತ್ತಾ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತ ಮುನ್ನುಗ್ಗುತ್ತಿರುವ ಅಕ್ಷಯ್ ಅಕ್ಷಯ್ ಸದ್ಯ ಬಹು ನಿರೀಕ್ಷೆಯ ಬಚ್ಚನ್ ಪಾಂಡೆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

ಇತ್ತೀಚಿಗೆ ಬಚ್ಚನ್ ಪಾಂಡೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರೀಕರಣ ಶುರು ಮಾಡಿದ ಬಗ್ಗೆ ಅಕ್ಷಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಜೊತೆಗೆ ಮೊದಲ ಚಿತ್ರೀಕರಣ ಫೋಟೋವನ್ನು ಶೇರ್ ಮಾಡಿದ್ದರು. ರೌಡಿ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು.

ತಲೆಗೆ ಕೆಂಪು ಬಣ್ಣದ ಬಟ್ಟೆ ಕಟ್ಟಿ, ಕೊರಳಿಗೆ ದಪ್ಪನೆಯ ಚೈನ್ ಗಳನ್ನು ಹಾಕಿ ಹಾಗೂ ಕೈಯಲ್ಲಿ ದೊಡ್ಡದಾದ ಬ್ರೇಸ್ಲೇಟ್, ಕಪ್ಪು ಬಣ್ಣದ ಶರ್ಟ್ ತೊಟ್ಟು ಯಾರನ್ನೊ ಹೊಡೆಯಲು ಸ್ಕೆಚ್ ಹಾಕಿ ಕುಳಿತಿರುವ ಅಕ್ಷಯ್ ಕುಮಾರ್ ಗೆಟಪ್ ಅಭಿಮಾನಿಗಳ ನಿದ್ದೆ ಗೆಡಿಸಿತ್ತು.

Akshay Kumars Bachchan Pandey set to release january 2022

ಬಚ್ಚನ್ ಪಾಂಡೆ ಸಿನಿಮಾ ಮುಂದಿನ ವರ್ಷ ಜನವರಿ 26 ಗಣರಾಜ್ಯ ದಿನ ತೆರೆಗೆ ಬರುತ್ತಿದೆ. ಅಂದಹಾಗೆ ಬಚ್ಚನ್ ಪಾಂಡೆ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾವಾಲ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ. ವಿಶೇಷ ಎಂದರೆ ಇಬ್ಬರ ಕಾಂಬಿನೇಷನ್ 10ನೇ ಸಿನಿಮಾವಿದು. ಅಂದಹಾಗೆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ ನಾಯಕಿಯರಾಗಿ ಇಬ್ಬರು ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೂನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಜೊತೆ ಹೌಸ್ ಫುಲ್ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಅಕ್ಷಯ್ ಕುಮಾರ್ ಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅರ್ಷದ್ ವಾರ್ಸಿ, ಪ್ರತೀಕ್ ಬಬ್ಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Recommended Video

ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

ಅಕ್ಷಯ್ ಕುಮಾರ್ ಈಗಾಗಲೇ, ಬೆಲ್ ಬಾಟಂ, ಸೂರ್ಯವಂಶಿ, ಅತ್ರಂಗಿ ರೇ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಪೃಥ್ವಿರಾಜ್, ರಾಮ್ ಸೇತು ಸೇರಿದಂತೆ ಅನೇಕ ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇವೆ. ಅಲ್ಲದೆ ಈ ವರ್ಷದಿಂದ ಸಹಿ ಮಾಡುವ ಹೊಸ ಸಿನಿಮಾಗಳಿಗೆ ಅಕ್ಷಯ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಕ್ಷಯ್ ಕೊನೆಯದಾಗಿ ಲಕ್ಷೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

More from Filmibeat

English summary
Akshay Kumar starrer Bachchan Pandey set to release january 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X