For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಮಯದಲ್ಲೂ ದಾಖಲೆ ನಿರ್ಮಿಸಿದ ನಟ ಅಕ್ಷಯ್ ಅಕ್ಷಯ್

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನು ಮಾಡುತ್ತಾರೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್, ಕಳೆದ ವರ್ಷ ಹೆಚ್ಚು ಸಿನಿಮಾಗಳು, ಕಲೆಕ್ಷನ್ ಅಂತ ದಾಖಲೆ ನಿರ್ಮಿಸಿದ್ದರು. ಆದರೆ ಈ ವರ್ಷ ಕೊರೊನಾ ಲಾಕ್ ಡೌನ್ ನಿಂದ 2020 ಮುಗಿಯುತ್ತಾ ಬಂತು. ಸಿನಿಮಾ ಕೆಲಸಗಳು ಸೇರಿದಂತೆ ಇಡೀ ವಿಶ್ವವೇ ಸ್ಥಬ್ದವಾಗಿದೆ. ಆದರೂ ಈ ಸಮಯದಲ್ಲಿಯೂ ಅಕ್ಷಯ್ ಕುಮಾರ್ ದಾಖಲೆ ನಿರ್ಮಿಸಿದ್ದಾರೆ.

  ಹೌದು, ಕೊರೊನಾ ಹಾವಳಿಯ ನಡುವೆಯೂ ನಟ ಅಕ್ಷಯ್ ಕುಮಾರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಕೊರೊನಾ ಲಾಡ್ ಡೌನ್ ಬಳಿಕ ಪ್ರಾರಂಭವಾದ ವಿಶ್ವದ ಮೊದಲ ಸಿನಿಮಾ 'ಬೆಲ್ ಬಾಟಂ'. ವಿಶೇಷ ಅಂದರೆ ಚಿತ್ರದ ಚಿತ್ರೀಕರಣ ಸಹ ಮುಗಿಸಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿಯೂ ಮೊದಲು ಶೂಟಿಂಗ್ ಪ್ರಾರಂಭಿಸಿ ಮೊದಲು ಶೂಟಿಂಗ್ ಮುಗಿಸಿದ ಕೀರ್ತಿ ಅಕ್ಷಯ್ ಕುಮಾರ್ ಮತ್ತು ತಂಡಕ್ಕೆ ಸಲ್ಲುತ್ತದೆ. ಮುಂದೆ ಓದಿ..

  ಅಕ್ಷಯ್ ಕುಮಾರ್ ಮೊದಲ ಸಂಬಳವೆಷ್ಟು? ನಟನಾಗದಿದ್ದರೆ ಏನಾಗಬೇಕು ಅಂದುಕೊಂಡಿದ್ದರು ಖಿಲಾಡಿ?

  ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ ಅಕ್ಷಯ್

  ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ ಅಕ್ಷಯ್

  ಕಷ್ಟದ ಸಮಯದಲ್ಲೂ ಶೂಟಿಂಗ್ ಯಶಸ್ವಿಯಾಗಿ ಮುಗಿಸಿ ಸಾಹಸ ಮೆರೆದ ತಂಡಕ್ಕೆ ಅಕ್ಷಯ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. 'ಏಕಾಂಗಿಯಾಗಿ ಮಾಡಿದರೆ ಕಡಿಮೆ ಕೆಲಸ ಆಗುತ್ತೆ. ಎಲ್ಲರೂ ಸೇರಿ ಒಟ್ಟಿಗೆ ಕೆಲಸ ಮಾಡಿದರೆ ಹೆಚ್ಚು ಕೆಲಸ ಮಾಡಬಹುದು. ಇದು ತಂಡದ ಕೆಲಸ. ಪ್ರತಿಯೊಬ್ಬ ಸದಸ್ಯರಿಗೂ ನಾನೂ ಅಭಾರಿಯಾಗಿದ್ದೇನೆ.' ಎಂದು ಬರೆದುಕೊಂಡಿದ್ದಾರೆ.

  ಕೊರೊನಾ ಬಳಿಕ ವಿದೇಶದಲ್ಲಿ ಚಿತ್ರೀಕರಣ

  ಕೊರೊನಾ ಬಳಿಕ ವಿದೇಶದಲ್ಲಿ ಚಿತ್ರೀಕರಣ

  'ಬೆಲ್ ಬಾಟಂ' ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ 'ಬೆಲ್ ಬಾಟಂ' ತಂಡ ವಿದೇಶಕ್ಕೆ ಹಾರಿದ್ದಾರೆ. ಆಗಸ್ಟ್ 20ರಿಂದ ಚಿತ್ರೀಕರಣ ಪ್ರಾರಂಭ ಮಾಡಿದ ಸಿನಿಮಾತಂಡ ಸೆಪ್ಟಂಬರ್ 30ಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಸ್ಕಾಟ್ಲೆಂಡ್ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದಾರೆ. 'ಬೆಲ್ ಬಾಟಂ' ಸಿನಿಮಾ ರಂಜಿತ್ ಎಂ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿದೆ.

  ಹತ್ರಾಸ್ ಅತ್ಯಾಚಾರ: ಅಕ್ಷಯ್ ಕುಮಾರ್‌ ಟ್ವೀಟ್ ಪ್ರಶ್ನಿಸಿದ ನಟಿ ರಮ್ಯಾ

  ವಾಣಿ ಕಪೂರ್ ಹೇಳಿದ್ದೇನು?

  ವಾಣಿ ಕಪೂರ್ ಹೇಳಿದ್ದೇನು?

  ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೊತೆ ನಾಯಕಿಯರಾಗಿ ವಾಣಿ ಕಪೂರ್, ಹುಮಾ ಖುರೇಷಿ, ಲಾರಾ ದತ್ತ ಮುತಾದವರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಮುಗಿಸಿದ ಖುಷಿಯನ್ನು ವಾಣಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ಚಿತ್ರೀಕರಣವೂ ನಿಜವಾಗಿಯೂ ಉತ್ತಮ ಮತ್ತು ತುಂಬಾ ಫನ್ ಆಗಿತ್ತು. ಕೊರೊನಾ ಸಮಯದಲ್ಲಿಯೂ ಚಿತ್ರೀಕರಣ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆದರೂ ಸುಗಮವಾಗಿ ಮತ್ತು ಸುರಕ್ಷಿತವಾಗಿ ಶೂಟಿಂಗ್ ಮಾಡಿ ಮುಗಿಸಲು ಇಡೀ ತಂಡ ಶ್ರಮಿಸಿದೆ ಎಂದು ಹೇಳಿದ್ದಾರೆ.

  ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ನಿಖಿಲ್, ರೇವತಿ! | Filmibeat Kannada
  ಮುಂದಿನ ವರ್ಷ ಸಿನಿಮಾ ರಿಲೀಸ್

  ಮುಂದಿನ ವರ್ಷ ಸಿನಿಮಾ ರಿಲೀಸ್

  'ಬೆಲ್ ಬಾಟಂ' ಹೆಸರೇ ಹೇಳುವ ಹಾಗೆ ಇದು ರೆಟ್ರೋ ಶೈಲಿಯ ಸಿನಿಮಾ. ಸ್ಪೈ ಥ್ರಿಲ್ಲರ್ ಸಿನಿಮಾವೆಂದು ಹೇಳಲಾಗುತ್ತಿದೆ. ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ ಎಂದು ಸಿನಿಮಾತಂಡ ಹೇಳಿಕೊಂಡಿದೆ. ಅಂದ್ಹಾಗೆ ಈ ಸಿನಿಮಾ ಮುಂದಿನ ವರ್ಷ 2021 ಏಪ್ರಿಲ್ 2ಕ್ಕೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.

  English summary
  Bollywood Actor Akshay Kumar starrer Bell Bottom becomes the world first start and finish film during corona pandemic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X