For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್‌ ಕುಮಾರ್‌ ತಾಯಿ ನಿಧನ: ತೀರದ ದುಃಖದಲ್ಲಿದ್ದೇನೆ ಎಂದ ನಟ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

  ಟ್ವೀಟ್‌ರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಕ್ಷಯ್ ಕುಮಾರ್, ''ಆಕೆ ನನ್ನ ಬೇರಾಗಿದ್ದಳು. ನಾನು ಇಂದು ತಡೆದುಕೊಳ್ಳಲಾಗದಷ್ಟು ದುಃಖದಲ್ಲಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಭಾ ಭಾಟಿಯಾ ಇಂದು ಮುಂಜಾನೆ ಶಾಂತವಾಗಿ ಈ ಲೋಕವನ್ನು ಬಿಟ್ಟು ಹೋಗಿದ್ದಾಳೆ. ಆಕೆ ಬೇರೆ ಲೋಕದಲ್ಲಿ ನನ್ನ ತಂದೆಯನ್ನು ಸೇರಿಕೊಂಡಿದ್ದಾಳೆ. ಕಠಿಣ ಸಮಯದಲ್ಲಿ ನನ್ನ ಕುಟುಂಬದ ಪರವಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ, ಓಂ ಶಾಂತಿ'' ಎಂದಿದ್ದಾರೆ.

  ಮಂಗಳವಾರ ಟ್ವೀಟ್ ಮಾಡಿದ್ದ ಅಕ್ಷಯ್ ಕುಮಾರ್, ''ನನ್ನ ತಾಯಿಯ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ನೋಡಿ ಮನಸ್ಸು ತುಂಬಿ ಬಂದಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ಬಹಳ ಕಠಿಣ ಸಮಯ. ನಿಮ್ಮ ಪ್ರತಿಯೊಬ್ಬರ ಪ್ರಾರ್ಥನೆ ನಮಗೆ ಸಹಕಾರಿ ಆಗಲಿದೆ'' ಎಂದಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ, ಅಕ್ಷಯ್ ತಾಯಿ ಇಂದು ಬೆಳಿಗ್ಗೆ ಅಸುನೀಗಿದ್ದಾರೆ.

  ಸೆಪ್ಟೆಂಬರ್‌ 5 ರಂದೇ ಅಕ್ಷಯ್ ಕುಮಾರ್ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮುಂಬೈನ ಹೀರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಆರೋಗ್ಯ ಕ್ಷೀಣಿಸಿದ ವಿಷಯ ತಿಳಿದ ಕೂಡಲೇ ಬ್ರಿಟನ್‌ನಲ್ಲಿನ ಚಿತ್ರೀಕರಣ ಅರ್ಧಕ್ಕೆ ಕೈಬಿಟ್ಟು ಸೆಪ್ಟೆಂಬರ್ 6ರಂದು ಭಾರತಕ್ಕೆ ವಾಪಸ್ಸಾಗಿದ್ದರು ಅಕ್ಷಯ್. ಬ್ರಿಟನ್‌ನಲ್ಲಿ 'ಸಿಂಡ್ರೆಲಾ' ಸಿನಿಮಾದ ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರ್ ತೊಡಿಗಿಸಿಕೊಂಡಿದ್ದರು.

  ಅಕ್ಷಯ್ ಕುಮಾರ್ ತಂದೆ ಹರಿ ಓಮ್ ಭಾಟಿಯಾ ಸೈನ್ಯಾಧಿಕಾರಿ ಆಗಿದ್ದರು, ತಾಯಿ ಅರುಣಾ ಭಾಟಿಯಾ ಗೃಹಿಣಿ ಆಗಿದ್ದರು. ನಂತರ ನಿರ್ಮಾಪಕಿಯಾಗಿಯೂ ಬದಲಾದರು. ಹರಿ ಓಂ ಪ್ರೊಡಕ್ಷನ್ ಹೌಸ್‌ನ ಪಾಲುದಾರೆ ಆಗಿದ್ದ ಅವರು, ಪ್ರೊಡಕ್ಷನ್ ಹೌಸ್ ಮೂಲಕ 'ಸಿಂಗ್ ಈಸ್ ಕಿಂಗ್', 'ಓಹ್ ಮೈ ಗಾಡ್', 'ಹಾಲಿಡೇ', 'ಏರ್‌ಲಿಫ್ಟ್', 'ರುಸ್ತುಂ', 'ನಾಮ್ ಶಬಾನಾ', 'ಟಾಯ್‌ಲೆಟ್', 'ಚುಂಬಕ್' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  Akshay Kumars Mother Aruna Bhatia Passed Away

  ನಟ ಅಕ್ಷಯ್ ಕುಮಾರ್ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ನಟಿಸಿರುವ 'ಸೂರ್ಯವಂಶಿ' ಹಾಗೂ 'ಅತರಂಗಿ ರೇ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದೀಗ 'ಸಿಂಡ್ರೆಯಾ' ಹಾಗೂ 'ರಾಮ್ ಸೇತು' ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ. 'ಬಚ್ಚನ್ ಪಾಂಡೆ', 'ಹೇರಾ ಪೇರಿ 3', 'ರೌಡಿ ರಾಥೋಡ್ 2', 'ರಕ್ಷಾ ಬಂಧನ್', 'ಓಹ್ ಮೈ ಗಾಡ್ 2', 'ಪೃಥ್ವಿರಾಜ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  English summary
  Actor Akshay Kumar's mother Aruna Bhatia passed away on September 08 morning. Akshay shared news on his twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X