»   » ಅಕ್ಷಯ್ ಅಭಿನಯದ 'ಪದ್ಮನ್' ಬಿಡುಗಡೆ ದಿನಾಂಕ ಬಹಿರಂಗ!

ಅಕ್ಷಯ್ ಅಭಿನಯದ 'ಪದ್ಮನ್' ಬಿಡುಗಡೆ ದಿನಾಂಕ ಬಹಿರಂಗ!

Posted By:
Subscribe to Filmibeat Kannada

ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸದ್ಯದಲ್ಲಿ ತಮ್ಮ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವರ್ಷಕ್ಕೆ 2-3 ಚಿತ್ರಗಳಲ್ಲಿ ತೊಡಗಿಕೊಳ್ಳುವ ಈ ನಟನ ಇನ್ನೊಂದು ಚಿತ್ರದ ಬಿಡುಗಡೆ ದಿನಾಂಕ ಈಗಲೇ ಬಹಿರಂಗವಾಗಿದೆ.

ಹೌದು, ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪದ್ಮನ್'ನ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿರುವ ಚಿತ್ರ ನಿರ್ಮಾಪಕಿ ಮತ್ತು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ, ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. 'ಪದ್ಮನ್' ಏಪ್ರಿಲ್ 13, 2018 ರಂದು ತೆರೆಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Akshay Kumar's 'Padman' movie gets a release date

'ಪದ್ಮನ್' ಚಿತ್ರದಲ್ಲಿ ಅಕ್ಷಯ್ ಕುಮಾರ್, ರಾಧಿಕಾ ಆಪ್ಟೆ, ಸೋನಂ ಕಪೂರ್ ಲೀಡ್ ರೋಲ್‌ ನಲ್ಲಿ ಅಭಿನಯಿಸಿದ್ದಾರೆ. ಅಮಿತಾಬ್‌ ಬಚ್ಚನ್ ರವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್ ಬಾಲ್ಕಿ 'ಪದ್ಮನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಟ್ವಿಂಕಲ್ ಖನ್ನಾ ಮತ್ತು ಗೌರಿ ಶಿಂದೆ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರವು ಮುಂದಿನ ವಾರ(ಆಗಸ್ಟ್ 11) ತೆರೆಕಾಣಲಿದೆ.

English summary
Bollywood Action King Akshay Kumar's 'Padman' movie gets a release date. This movie directs by R.Balki.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada