Don't Miss!
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
'ಕೆಜಿಎಫ್ 2' ದಾಖಲೆ ಎದುರು ತೊಡೆ ತಟ್ಟಿದ ಅಕ್ಷಯ್ ಕುಮಾರ್!
ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ ಟಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಎಂದು ಇಡೀ ಭಾರತೀಯ ಸಿನಿಮಾರಂಗವನ್ನು ವಿಂಗಡಣೆ ಮಾಡಲಾಗಿದೆ. ಆದರೆ ಈಗ ಎಲ್ಲಾ ಗೋಡೆಗಳನ್ನು ಒಡೆದು ಎಲ್ಲವೂ ಭಾರತೀಯ ಚಿತ್ರರಂಗವೇ ಎನ್ನುವ ಹಾಗೆ ಮಾಡುತ್ತಿವೆ ಪ್ಯಾನ್ ಇಂಡಿಯಾ ಸಿನಿಮಾಗಳು. ಪ್ಯಾನ್ ಇಂಡಿಯಾ ಸಿನಿಮಾಗಳ ತಾಕತ್ತು ಏನು ಎನ್ನುವುದು ಜಗತ್ತಿಗೆ ಗೊತ್ತಾಗಿದೆ.
ಆದರೆ ಜಗತ್ತು ತಿರುಗಿ ನೋಡುವ ಹಾಗೆ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳೇ. ಅದರಲ್ಲಿ 'ಕೆಜಿಎಫ್', 'ಬಾಹುಬಲಿ', 'RRR', ಪುಷ್ಪ' ಸಿನಿಮಾಗಳದ್ದೇ ಸಿಂಹಪಾಲು. ಈ ಚಿತ್ರಗಳು ಬಾಲಿವುಡ್ ಬಾಕ್ಸಾಫೀಸ್ ಧೂಳಿಪಟ ಮಾಡಿವೆ. ನಾರ್ತ್ ಪ್ರೇಕ್ಷಕರು ಸೌತ್ ಸಿನಿಮಾಗಳ ರುಚಿ ಕಂಡಿದ್ದಾರೆ. ಹಾಗಾಗಿ ಹಲವು ಬಾಲಿವುಡ್ ಸಿನಿಮಾಗಳು ನೆಲಕಚ್ಚುತ್ತಿವೆ.
'KGF
2'
ಅಮೆಜಾನ್ನಲ್ಲಿ
ಲಭ್ಯ:
ಸಿನಿಮಾ
ನೋಡುವುದಕ್ಕೆ
199
ರೂ.
ಕಟ್ಟಲೇ
ಬೇಕು

ಆದರೆ ಉತ್ತಮ ಸಿನಿಮಾಗಳನ್ನು ಮಾಡಿ ಎದ್ದು ನಿಲ್ಲುವ ಅನಿವಾರ್ಯತೆ ಬಾಲಿವುಡ್ಗೆ ಈಗ ಎದುರಾಗಿದೆ. ಹಾಗಾಗಿ ಬಾಲಿವುಡ್ ಸ್ಟಾರ್ ಬಳಗದಲ್ಲಿ ದೊಡ್ಡ ಮಟ್ಟದಲ್ಲಿ ಲೆಕ್ಕಾಚಾರಗಳು ಶುರುವಾಗಿಬಿಟ್ಟಿವೆ. ಸೌತ್ ಸಿನಿಮಾಗಳಿಗೆ ಠಕ್ಕರ್ ಕೊಡಲೆಂದು ನಟ ಅಕ್ಷಯ್ ಕುಮಾರ್ ಸಜ್ಜಾಗಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

4 ಸಾವಿರ ಸ್ಕ್ರೀನ್ಗಳಲ್ಲಿ ಪೃಥ್ವಿರಾಜ್ ರಿಲೀಸ್!
ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದೆ. ಜೂನ್ 3ಕ್ಕೆ ಬಾಲಿವುಡ್ನ 'ಪೃಥ್ವಿರಾಜ್' ರಿಲೀಸ್ ಆಗಲಿದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಬಾಲಿವುಡ್ ಸಜ್ಜಾಗಿದೆ. ಹಾಗಾಗಿ ಸಿನಿಮಾವನ್ನು ಭಾರತದಾದ್ಯಂತ 4000 ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಕನ್ನಡದ ಕೆಜಿಎಫ್ 2, 5 ಭಾಷೆಗಳಲ್ಲಿ 6000 ಸ್ಕ್ರೀನ್ಗಳಲ್ಲಿ ತೆರೆಗೆ ಬಂದಿತ್ತು. ಆದರೆ ಈ ಸಿನಿಮಾ ಕೇವಲ ಹಿಂದಿಯಲ್ಲಿ 4000 ಸ್ಕ್ರೀನ್ಗಳಲ್ಲಿ ತೆರೆಕಾಣುತ್ತಿದೆ.
'ಕೆಜಿಎಫ್
2':
ಭಾರತೀಯ
ಬಾಕ್ಸಾಫೀಸ್ನಲ್ಲಿ
1000
ಕೋಟಿ
ಗಳಿಸಿದ
2ನೇ
ಸಿನಿಮಾ!

ಪೃಥ್ವಿರಾಜ್ ಮೊದಲ ದಿನ 30 ಕೋಟಿ ಗಳಿಕೆಯ ನಿರೀಕ್ಷೆ!
ಪೃಥ್ವಿರಾಜ್ ಸಿನಿಮಾವನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಗುತ್ತಿದೆ. ಇದರಂತೆ ಸಿನಿಮಾದ ಗಳಿಕೆಯ ಲೆಕ್ಕಾಚಾರವೂ ಶುರುವಾಗಿದೆ. ಮೊದಲ ದಿನ ಅಕ್ಷಯ್ ಕುಮಾರ್ ಸಿನಿಮಾ 30 ಕೋಟಿಯ ಟಾರ್ಗೆಟ್ ಇಟ್ಟುಕೊಂಡಿದೆಂತೆ. ಹಾಗೊಂದು ವೇಳೆ ಮೊದಲ ದಿನ ಈ ಸಿನಿಮಾ 30 ಕೋಟಿ ಗಡಿ ದಾಟಿದರೆ 100 ಕೋಟಿಯನ್ನು ವೇಗವಾಗಿ ಗಳಿಸಲಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ ಈ ಮೊತ್ತ ದುಪ್ಪಟ್ಟಾದರೂ ಆಶ್ಚರ್ಯ ಇಲ್ಲ.

'ಭೂಲ್ ಭುಲಯ್ಯ' 2 ಗತಿ ಏನು?
ಹಿಂದಿಯಲ್ಲಿ ಸದ್ಯಕ್ಕೆ ರಿಲೀಸ್ಗೆ ರೆಡಿ ಇರುವ ಸ್ಟಾರ್ ಸಿನಿಮಾ ಅಂದರೆ 'ಭೂಲ್ ಭುಲಯ್ಯ 2'. ಈ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಪ್ರಚಾರ ಕಾರ್ಯಗಳನ್ನು ಶುರು ಮಾಡಿದೆ. ಸಿನಿಮಾ ಇದೆ 20ಕ್ಕೆ ತೆರೆಗೆ ಬರಲಿವೆ. ಆದರೆ ಅಂದುಕೊಂಡಂತೆ ಸಿನಿಮಾ ಕನಿಷ್ಟ ಗಳಿಕೆಯನ್ನು ಮಾಡದೇ ಹೋದರೆ, ಬಾಲಿವುಡ್ನ ಸಾಲು, ಸಾಲು ಸೋಲಿಗೆ ಈ ಚಿತ್ರವೂ ಸೇರಿ ಬಿಡುತ್ತದೆ.
ಯಶ್
ಮುಂದಿನಕ್ಕೆ
ಸಿನಿಮಾ
ಮಾಡೋದು
ನರ್ತನ್:
ಅಧಿಕೃತ
ಮಾಹಿತಿ
ಯಾವಾಗ?

RRR, ಕೆಜಿಎಫ್ 2 ಬಳಿಕ ಬಾಲಿವುಡ್ ತತ್ತರ!
RRR ಮತ್ತು ಕೆಜಿಎಫ್ 2 ಸಿನಿಮಾದ ಬಂದ ಮೇಲೆ ಬಾಲಿವುಡ್ಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಕನ್ನಡದ 'ಕೆಜಿಎಫ್ 2' ಸಿನಿಮಾ ಬಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಹಾಗೆ ನೋಡಿದರೆ ಕೆಜಿಎಫ್ 2 ಹಿಂದಿಯ ಒರಿಜಿನಲ್ ಸಿನಿಮಾ ಅಲ್ಲ. ಇದು ಕನ್ನಡದಿಂದ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿರು ಸಿನಿಮಾ. ಹಾಗಾಗಿ ಈಗ ಬಾಲಿವುಡ್ ಮಂದಿಗೆ ದೊಡ್ಡ ಸವಾಲು ಎದುರಾಗಿದೆ.