ಅಕ್ಷಯ್ ಕುಮಾರ್ 'ಪೃಥ್ವಿರಾಜ್' ಟೈಟಲ್ ಬದಲು: ಹೊಸ ಹೆಸರೇನು?

ಬಾಲಿವುಡ್‌ನ ಮುಂದಿನ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್'. ಈ ಸಿನಿಮಾ ಇದೇ ಜೂನ್ 3ಕ್ಕೆ ತೆರೆಗೆ ಬರಲು ತಯಾರಾಗಿದೆ ಆದರೆ ಇದ್ದಕ್ಕಿದ್ದ ಹಾಗೆ ಚಿತ್ರಕ್ಕೆ ಸಂಕಷ್ಟ ಒಂದು ಎದುರಾಗಿತ್ತು.

'ಪೃಥ್ವಿರಾಜ್' ಸಿನಿಮಾದ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಚಿತ್ರದ ಟೈಟಲ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. 12ನೇ ಶತಮಾನದ ರಾಜ ಪೃಥ್ವಿರಾಜ್ ಚೌಹಾಣ ಹೆಸರನ್ನು ಚಿತ್ರಕ್ಕೆ 'ಪೃಥ್ವಿರಾಜ್' ಎಂದು ಮಾತ್ರ ಇಡಲಾಗಿದೆ ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಇದೇ ಹಿನ್ನೆಲೆಯಲ್ಲಿ ಇದೀಗ ಸಿನಿಮಾದ ಟೈಟಲ್ ಅನ್ನು ಬದಲಾಯಿಸಿದೆ ಚಿತ್ರತಂಡ. 'ಪೃಥ್ವಿರಾಜ್' ಟೈಟಲ್ ಇದೀಗ ಬದಲಾಗಿದೆ. ಸಿನಿಮಾ ತಂಡ ಸಾಕಷ್ಟು ಚರ್ಚೆ ನಡೆಸಿ, ಸಿನಿಮಾಗೆ ಹೊಸ ಟೈಟಲ್ ಇಟ್ಟಿದೆ. ಇನ್ನು ಸಿನಿಮಾದ ಹೆಸರು ಕೇವಲ 'ಪೃಥ್ವಿರಾಜ್' ಆಗಿರುವುದಿಲ್ಲ. ಬದಲಿಗೆ 'ಸಾಮ್ರಾಟ್ ಪೃಥ್ವಿರಾಜ್' ಆಗಿರಲಿದೆ.

ಪೃಥ್ವಿರಾಜ್ ಟೈಟಲ್‌ಗೆ ಆಕ್ಷೇಪ!

ಪೃಥ್ವಿರಾಜ್ ಟೈಟಲ್‌ಗೆ ಆಕ್ಷೇಪ!

ಪೃಥ್ವಿರಾಜ್ ಟೈಟಲ್ ವಿರುದ್ಧ ಕರಣಿ ಸೇನೆ ಧ್ವನಿ ಎತ್ತಿತ್ತು. ಈ ರೀತಿಯಾಗಿ ಸಿನಿಮಾದ ಟೈಟಲ್ ಇಟ್ಟು ನಮ್ಮ ನಾಯಕನಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸಿನಿಮಾ ತಂಡಕ್ಕೆ ಕರಣಿ ಸೇನೆ ಪತ್ರ ಬರೆದಿತ್ತು. ಸಿನಿಮಾದ ಟೈಟಲ್ ಬದಲಿಸುವಂತೆ ಪತ್ರದಲ್ಲಿ ಬೇಡಿಕೆ ಇಡಲಾಗಿತ್ತು. ಪೃಥ್ವಿರಾಜ್ ಎಂದರೆ ಏಕವಚನದಲ್ಲಿ ಕರೆದ ಹಾಗೆ, ಹಾಗಾಗಿ ಈ ಟೈಟಲ್ ಮುಂದೆ 'ಸಾಮ್ರಾಟ್' ಎನ್ನುವ ಪದ ಸೇರಿಸುವಂತೆ ಕರಣಿ ಸೇನೆ ಒತ್ತಾಯಿಸಿತ್ತು.

ಪೃಥ್ವಿರಾಜ್ ಟೈಟಲ್ ಬದಲಾವಣೆ!

ಕರಣಿ ಸೇನೆ ಈ ರೀತಿಯಾಗಿ ಬೇಡಿಕೆ ಇಡುತ್ತಲೆ. ಸಿನಿಮಾತಂಡ ಅವರ ಬೇಡಿಕೆಗೆ ಒಪ್ಪಿದೆ. ಹಾಗಾಗಿ ಚಿತ್ರದ ಟೈಟಲನ್ನು 'ಸಾಮ್ರಾಟ್ ಪೃಥ್ವಿರಾಜ್' ಎಂದು ಬದಲಾಯಿಸಲಾಗಿದೆ. ನಿಮ್ಮ ಸಲಹೆಯನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಕರಣಿ ಸೇನೆಗೆ ಪ್ರತಿಕ್ರಿಯೆ ನೀಡಿದೆ. ಹಾಗಾಗಿ ಇನ್ನು ಮುಂದೆ ಪೃಥ್ವಿರಾಜ್ ಸಿನಿಮಾದ ಟೈಟಲ್ 'ಸಾಮ್ರಾಟ್ ಪೃಥ್ವಿರಾಜ್' ಆಗಿರಲಿದೆ.

ರಾಜಸ್ಥಾನದಲ್ಲಿ 'ಪೃಥ್ವಿರಾಜ್' ಸಿನಿಮಾ ಬ್ಯಾನ್!

ಸಿನಿಮಾದ ಟೈಟಲ್ ಬದಲಾಯಿಸದೆ ಇದ್ದರೆ, ರಾಜಸ್ಥಾನದಲ್ಲಿ 'ಪೃಥ್ವಿರಾಜ್' ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಕರಣಿ ಸೇನೆ ಹೇಳಿತ್ತು. ಅಲ್ಲದೆ ರಾಜಸ್ಥಾನದಲ್ಲಿ ಈ ಚಿತ್ರದ ವಿರುದ್ಧ ಪ್ರತಿಭಟನೆಗೂ ಕೂಡ ಕರಣಿ ಸೇನೆ ಮುಂದಾಗಿತ್ತು. ಆದರೆ ಅಂತಹ ಘಟನೆಗಳಿಗೆ ಅವಕಾಶ ಕೊಡದ ಸಿನಿಮಾ ತಂಡ ಪೃಥ್ವಿರಾಜ್ ಟೈಟಲ್ ಮುಂದೆ ಸಾಮ್ರಾಟ್ ಎನ್ನುವ ಪದವನ್ನು ಸೇರಿಸಿ 'ಸಾಮ್ರಾಟ್ ಪೃಥ್ವಿರಾಜ್' ಎಂದು ಟೈಟಲ್ ತಿದ್ದುಪಡಿ ಮಾಡಿದೆ.

'ಪೃಥ್ವಿರಾಜ್‌'ಗೆ ಗೆಲುವಿನ ಅನಿವಾರ್ಯತೆ!

'ಪೃಥ್ವಿರಾಜ್‌'ಗೆ ಗೆಲುವಿನ ಅನಿವಾರ್ಯತೆ!

ಸಾಮ್ರಾಟ್ ಪೃಥ್ವಿರಾಜ್ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಅಲ್ಲದೆ ಇದು ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾದ ಮೂಲಕ ಗೆಲುವು ಕಾಣುವ ಅನಿವಾರ್ಯತೆ ಅಕ್ಷಯ್ ಕುಮಾರ್‌ಗೆ ಎದುರಾಗಿದೆ. ಯಾಕೆಂದರೆ ಸೌತ್ ಸಿನಿಮಾಗಳು ಬಾಲಿವುಡ್‌ಗೆ ಡಬ್ ಆಗಲು ಆರಂಭಿಸಿದ ಬಳಿಕ ಬಾಲಿವುಡ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೆಲ ಕಚ್ಚುತ್ತಿವೆ. ಹಾಗಾಗಿ ಈ ಸಿನಿಮಾ ಗೆದ್ದರೆ, ಬಾಲಿವುಡ್‌ ಭರವಸೆಯೇ ಸಿಕ್ಕಂತಾಗುತ್ತದೆ. ಹಾಗಾಗಿ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳು ಮತ್ತು ಬಾಕ್ಸಾಫೀಸ್ ಗಳಿಕೆ ಅಮೇಲೆ ಕುತೂಹಲ ಮೂಡಿದೆ.

More from Filmibeat

English summary
Akshay Kumar's Prithviraj Title Changed As Samrat Prithviraj after protest from Karni Sena. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X