ಅಕ್ಷಯ್ ಕುಮಾರ್ ಸಿನಿಮಾ 'ಪೃಥ್ವಿರಾಜ್' ಅಲ್ಪ ಚೇತರಿಕೆ: 2ನೇ ದಿನ ಗಳಿಸಿದ್ದೆಷ್ಟು?

ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾ ರಿಲೀಸ್‌ಗೂ ಮುನ್ನ ಬಹಳ ದೊಡ್ಡ ನಿರೀಕ್ಷೆಯನ್ನು ಮೂಡಿಸಿತ್ತು. ಈ ಸಿನಿಮಾ ಬಾಲಿವುಡ್‌ ಚಿತ್ರಗಳ ಸೂಪರ್ ಹಿಟ್ ಲಿಸ್ಟ್ ಸೇರುತ್ತದೆ ಎನ್ನಲಾಗಿತ್ತು.

ಆದರೆ ಅದ್ಧೂರಿ ಪ್ರಚಾರದ ನಂತರವೂ, ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಂತಿದೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೆ ಇದಕ್ಕೆ ಸಾಕ್ಷಿ ಆಗಿದೆ. ಜೂನ್ 3ರಂದು ರಿಲೀಸ್ ಆದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಎರಡನೇ ದಿನವೂ ಗಳಿಕೆಯಲ್ಲಿ ಹಿಂದೆ ಬಿದ್ದಿದೆ.

ಈ ಚಿತ್ರದ ಬಜೆಟ್ ರೂ.300 ಕೋಟಿ. ಹಾಗಾಗಿ ಈ ಚಿತ್ರ ಮೊದಲ ದಿನ 30ಕ್ಕೂ ಅಧಿಕ ಮೊತ್ತ ಕಲೆ ಹಾಕುತ್ತದೆ ಎಂದು ಅಂದಾಜಿಲಾಗಿತ್ತು. ಆದರೆ ಸಾಧ್ಯವಾಗಿಲ್ಲ. ಎರಡು ದಿನ ಆದರೂ ಈ ಟಾರ್ಗೆಟ್ ಮುಟ್ಟಲು ಒದ್ದಾಡುತ್ತಿದೆ ಅಕ್ಷಯ್ ಕುಮಾರ್ ಸಿನಿಮಾ.

ಮೊದಲ ದಿನ ರೂ.10 ಕೋಟಿಗೆ ಸೀಮಿತ!

ಮೊದಲ ದಿನ ರೂ.10 ಕೋಟಿಗೆ ಸೀಮಿತ!

ಚಂದ್ರ ಪ್ರಕಾಶ್ ದ್ವಿವೇದಿ ನಿರ್ದೇಶಕ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಜೂನ್ 3ಕ್ಕೆ ತೆರೆಗೆ ಬಂತು. ಮೊದಲ ದಿನದ ಗಳಿಕೆಯ ಮೇಲೆ ಇದ್ದ ನಿರೀಕ್ಷೆಯನ್ನು ಚಿತ್ರ ಸುಳ್ಳು ಮಾಡಿದೆ. ಬಿಗ್ ಓಪನಿಂಗ್ ಪಡೆದುಕೊಳ್ಳದ 'ಸಾಮ್ರಾಟ್ ಪೃಥ್ವಿರಾಜ್' ಮೊದಲ ದಿನ ರೂ.10.40 ಕೋಟಿ ರೂ. ಗಳಿಕೆಗೆ ಸೀಮಿತವಾಗಿದೆ. ಆದರೆ ವಾರಾಂತ್ಯದಲ್ಲಿ ಹೆಚ್ಚು ಗಳಿಕೆ ಕಾಣಬಹುದು ಎನ್ನುವ ನಿರೀಕ್ಷೆ ಇದೆ.

'ಸಾಮ್ರಾಟ್ ಪೃಥ್ವಿರಾಜ್' ದಿನ 2 ಗಳಿಕೆ ಎಷ್ಟು?

'ಸಾಮ್ರಾಟ್ ಪೃಥ್ವಿರಾಜ್' ದಿನ 2 ಗಳಿಕೆ ಎಷ್ಟು?

ಇನ್ನು ಎರಡನೇ ದಿನಕ್ಕೆ 'ಪೃಥ್ವಿರಾಜ್' ಸಿನಿಮಾ ಕೊಂಚ ಚೇತರಿಸಿಕೊಂಡಿದೆ. ಇದನ್ನು ಚೇತರಿಕೆ ಎಂದು ಹೇಳಲು ಕಷ್ಟವೇ. ಯಾಕೆಂದರೆ ಮೊದಲ ದಿನಕ್ಕಿಂತಲೂ ಕೇವಲ ಎರಡು ಕೋಟಿ ಮಾತ್ರ ಹೆಚ್ಚುವರಿ ಗಳಿಕೆ ಕಂಡಿದೆ. ಮೊದಲ ದಿನ ರೂ.10.40 ಕೋಟಿ ಗಳಿಸಿದ್ದು, ಎರಡನೇ ದಿನ ರೂ.12.57 ಕೋಟಿ ಗಳಿಕೆ ಕಂಡಿದೆ. ಒಟ್ಟಾರೆ ಎರಡು ದಿನಕ್ಕೆ ರೂ.23.45 ಕೋಟಿ ಗಳಿಕೆ ಕಂಡಿದೆ. ವೀಕೆಂಡ್‌ನಲ್ಲಿ ಶನಿವಾರ ಕೂಡ ಅಂತಹ ದೊಡ್ಡ ಮೊತ್ತ ಏನು ಕಂಡು ಬಂದಿಲ್ಲ.

Recommended Video

Prithviraj | 'KGF 2' ಹಿಂದಿ ರೆಕಾರ್ಡ್ ಬ್ರೇಕ್ ಮಾಡುತ್ತಾ 'ಪೃಥ್ವಿರಾಜ್'? | Akshay Kumar | Yash
ರೂ.100 ಕೋಟಿ ಕ್ಲಬ್ ಸೇರಿದ ವಿಕ್ರಂ!

ರೂ.100 ಕೋಟಿ ಕ್ಲಬ್ ಸೇರಿದ ವಿಕ್ರಂ!

'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದ ಜೊತೆಗೆ ಬಿಡುಗಡೆ ಆಗಿರುವ ಕಮಲ್ ಹಾಸನ್ ನಟನೆಯ ಸೂಪರ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿಕ್ರಂ' ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. ತಮಿಳುನಾಡು ಒಂದರಲ್ಲೇ ರೂ.20 ಕೋಟಿ ಗಳಿಸಿರುವ 'ವಿಕ್ರಂ', ಭಾರತದ ಇತರ ರಾಜ್ಯಗಳು ಹಾಗೂ ವಿದೇಶಗಳಲ್ಲಿ ರೂ.45 ಕೋಟಿ ಗಳಿಸಿದೆ. ಇನ್ನು ಎರಡನೇ ದಿನಕ್ಕೆ ಈ ಚಿತ್ರ ರೂ.100 ಕೋಟಿ ಕ್ಲಬ್ ಸೇರಿದೆ.

ಸಿನಿಮಾ ಹಿಟ್ or ಫ್ಲಾಪ್!

ಸಿನಿಮಾ ಹಿಟ್ or ಫ್ಲಾಪ್!

ವಾರಾಂತ್ಯದಲ್ಲಿ ಗಳಿಕೆ ಕಾಣದೆ ಹೋದರೆ ಫ್ಲಾಪ್ ಗ್ಯಾರೆಂಟಿ ಎನ್ನುತ್ತಿದ್ದಾರೆ ವಿಶ್ಲೇಷಕರು. ಮೊದಲ ದಿನಕ್ಕಿಂತಲೂ ಎರಡನೇ ದಿನ 2 ಕೋಟಿ ಅಧಿಕ ಕಲೆ ಹಾಕಿರುವ ಪೃಥ್ವಿ ರಾಜ್, ವಾರಾಂತ್ಯ ಮುಗಿಯುವುದರೊಳಗೆ ರೂ.50 ಕೋಟಿ ಮುಟ್ಟಲೇ ಬೇಕು. ಆದರೆ ಇದು ಚಿತ್ರಕ್ಕೆ ಕೊಂಚ ಕಷ್ಟವೇನಿಸಿದೆ. ಸದ್ಯ ಸಿನಿಮಾ ರೂ.23 ಕೋಟಿ ಗಳಿದ್ದು, ಇನ್ನು ರೂ.27 ಕೋಟಿ ಗಳಿಕೆ ಮಾಡಬೇಕಾಗಿದೆ. ಭಾನುವಾರ ಒಂದೇ ದಿನದಲ್ಲಿ ಇಷ್ಟು ಮೊತ್ತ ಗಳಿಸವುದು ಕಷ್ಟವೇ. ಇನ್ನು ಮುಂದಿನ ವಾರ ಚಿತ್ರ ಹೀಗೆ ಉಳಿಯದೇ ಇದ್ದರೆ ಇದು ಕೂಡ ಫ್ಲಾಪ್ ಎಂದೇ ಅರ್ಥ.

More from Filmibeat

English summary
Akshay Kumar's Samrat Prithviraj Is Become Another Bollywood Flop, Day 2 Collection Is Here, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X