ಅಕ್ಷಯ್ ಕುಮಾರ್ ಮಗ ಅವರ ಅಮ್ಮನ ಹೆಸರನ್ನು ಮೊಬೈಲ್ ನಲ್ಲಿ ಹೀಗ್ಯಾಕೆ ಸೇವ್ ಮಾಡಿದ್ದಾರೆ?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುತ್ರ ಆರವ್ ಕುಮಾರ್ ಲಂಡನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಇತ್ತೀಚಿಗಷ್ಟೆ ಆರವ್ ಅಮ್ಮ ಟ್ವಿಂಕಲ್ ಕನ್ಹಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದ ಆರವ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಅಂದ್ಹಾಗೆ ಆರವ್ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ ಅಂತ ಅಂದ್ಕೋಬೇಡಿ. ಆರವ್ ತನ್ನ ತಾಯಿ ಟ್ವಿಂಕಲ್ ಕನ್ಹಾ ಹೆಸರನ್ನು ಮೊಬೈಲ್ ನಲ್ಲಿ ವಿಭಿನ್ನವಾಗಿ ಸೇವ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಟ್ವಿಂಕಲ್ ಸಾಮಾಜಿಕ ಜಾಲತಾಣದಲ್ಲಿ ಮಗನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಂದ್ಹಾಗೆ ಆರವ್ ಅಮ್ಮನ ಹೆಸರನ್ನು 'ಪೊಲೀಸ್' ಎಂದು ಸೇವ್ ಮಾಡಿಕೊಂಡಿದ್ದಾರೆ. ಅಮ್ಮ ತುಂಬ ಸ್ಟ್ರಿಕ್ಟ್ ಇರುವ ಕಾರಣಕ್ಕೆ ಹೀಗೆ ಸೇವ್ ಮಾಡಿಕೊಂಡಿದ್ದಾರೆ. ಮಗ ಇಟ್ಟಿರುವ ಹೊಸ ಹೆಸರು ಕೇಳಿ ಟ್ವಿಂಕಲ್ "ನನ್ನ ಮಗ ಅವನ ಫೋನ್ ನಲ್ಲಿ ನನ್ನ ಹೆಸರನ್ನು ಪೊಲೀಸ್ ಎಂದು ಸೇವ್ ಮಾಡಿಕೊಂಡಿದ್ದಾನೆ. ಇದು ಹೆಚ್ಚು ಸಾಕ್ತವಾಗಿ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಜೊತೆಗೆ ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ. ಪೊಲೀಸ್ ವಾಹನದ ಮುಂದೆ ಆಂಗ್ರಿ ಲುಕ್ ನಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಲಂಡನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಆರವ್ ಅಪ್ಪನಂತೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರಾ? ಅಥವಾ ಬೇರೆ ಉದ್ಯೋಗದ ಕಡೆ ಗಮನ ಹರಿಸುತ್ತಾರೋ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಕನ್ಹಾ 19ನೇ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿದ್ದಾರೆ. ಪತ್ನಿ ಜೊತೆಗಿನ ಭಯಾನಕವಾದ ಫೋಟೋ ಶೇರ್ ಮಾಡಿ ವಿಭಿನ್ನವಾಗಿ ವಿಶ್ ಮಾಡಿದ್ದರು ಅಕ್ಷಯ್.


Click it and Unblock the Notifications











