ಅಕ್ಷಯ್ ಕುಮಾರ್ ವಿರುದ್ಧ ಅಕ್ಷಯ್ ಕುಮಾರ್ ಪೈಪೋಟಿ

ನಟ ಅಕ್ಷಯ್ ಕುಮಾರ್ ಎಂದರೆ ಪಕ್ಕಾ ಪೈಸಾ ವಸೂಲ್ ಎಂದೇ ಅರ್ಥ. ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸಿದರೂ ಸಹ ಕನಿಷ್ಟ 4 ಸಿನಿಮಾಗಳಾದರೂ 100 ಕೋಟಿ ಕ್ಲಬ್‌ಗೆ ಸೇರುತ್ತವೆ. ಅದು ಅಕ್ಷಯ್ ತಾಕತ್ತು.

ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿ ವರ್ಷದ ಮೇಲಾಗಿದೆ. ಸನಿಹ ಭವಿಷ್ಯದಲ್ಲಿ ಚಿತ್ರಮಂದಿರಗಳು ಮರಳಿ ಬಾಗಿಲು ತೆಗೆಯುವುದು ಅನುಮಾನ. ಇಂಥಹಾ ಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ಅಕ್ಷಯ್ ಕುಮಾರ್ ಸಿನಿಮಾಗಳು ಗಳಿಕೆಯಲ್ಲಿ ತುಸುವೂ ಹಿಂದೆ ಬಿದ್ದಿಲ್ಲ.

ಬೇರೆ ಬಾಲಿವುಡ್ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಲು ಸುತಾರಾಂ ಬೇಡ ಎನ್ನುತ್ತಿರುವಾಗ ಅಕ್ಷಯ್ ಕುಮಾರ್ ಈಗಾಗಲೇ ಒಂದು ಸಿನಿಮಾವನ್ನು ನೇರ ಒಟಿಟಿಗೆ ನೀಡಿ ದೊಡ್ಡ ಮೊತ್ತದ ಹಣವನ್ನು ನಿರ್ಮಾಪಕ ಗುಡ್ಡೆ ಹಾಕಿಕೊಳ್ಳುವಂತೆ ಮಾಡಿದರು. ಇದೀಗ ಮತ್ತೊಂದು ಸಿನಿಮಾವನ್ನು ಒಟಿಟಿಗೆ ನೀಡಲು ಸಜ್ಜಾಗಿದ್ದಾರೆ.

ಅಕ್ಷಯ್‌ ಕುಮಾರ್ ಸಿನಿಮಾಗಳನ್ನು ಒಟಿಟಿಗೆ ನೀಡದೇ ಬೇರೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈಗಾಗಲೇ ಅಕ್ಷಯ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದರೆ ಒಂದು ಸಿನಿಮಾ ಚಿತ್ರೀಕರಣದ ಕೊನೆಯ ಹಂತದಲ್ಲಿದೆ.

ಅಕ್ಷಯ್ ಸಿನಿಮಾಕ್ಕೆ ಅಕ್ಷಯ್ ಸಿನಿಮಾಗಳೇ ಪೈಪೋಟಿ

ಅಕ್ಷಯ್ ಸಿನಿಮಾಕ್ಕೆ ಅಕ್ಷಯ್ ಸಿನಿಮಾಗಳೇ ಪೈಪೋಟಿ

ಅಕ್ಷಯ್ ನಟನೆಯ 'ಸೂರ್ಯವಂಶಿ' ಸಿನಿಮಾ ಎರೆಡು ಬಾರಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. 'ಬೆಲ್ ಬಾಟಂ' ಹಾಗೂ 'ಅತರಂಗೀ ರೇ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿವೆ. ಒಂದೊಮ್ಮೆ ಚಿತ್ರಮಂದಿರಗಳಲ್ಲಿಯೇ ಈ ಸಿನಿಮಾಗಳನ್ನು ಬಿಡುಗಡೆ ಮಾಡುವುದಾದರೆ ಅಕ್ಷಯ್ ಸಿನಿಮಾಕ್ಕೆ ಅಕ್ಷಯ್ ಸಿನಿಮಾಗಳೇ ಪೈಪೋಟಿಗೆ ಬೀಳುತ್ತವೆ. ಹಾಗಾಗಿ ಬೆಲ್ ಬಾಟಂ ಸಿನಿಮಾವನ್ನು ಒಟಿಟಿಗೆ ಮಾರಿಬಿಡುವುದು ಸೂಕ್ತವೆಂದು ನಿರ್ಮಾಪಕರು ಯೋಚಿಸಿದ್ದಾರೆ.

'ಬೆಲ್‌ ಬಾಟಂ' ಸಿನಿಮಾ ಒಟಿಟಿಗೆ

'ಬೆಲ್‌ ಬಾಟಂ' ಸಿನಿಮಾ ಒಟಿಟಿಗೆ

ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಂ' ಸಿನಿಮಾವನ್ನು ಒಟಿಟಿಗೆ ಮಾರಲು ಮಾತುಕತೆ ನಡೆಯುತ್ತಿದೆ. ಭಾರಿ ಮೊತ್ತದ ಆಫರ್ ಸಿನಿಮಾಕ್ಕೆ ಬಂದಿದ್ದು, ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ.

ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ

ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ

ಅಮೆಜಾನ್ ಪ್ರೈಂ ಈಗಾಗಲೇ 125 ಕೋಟಿ ತೆರಲು ತಯಾರಾಗಿದೆ. ಆದರೆ ಸಿನಿಮಾದ ನಿರ್ಮಾಪಕರಿಗೆ ಅದು ಕಡಿಮೆ ಎನಿಸಿ ಇನ್ನೂ ದೊಡ್ಡ ಮೊತ್ತಕ್ಕೆ ಡಿಸ್ನಿ ಹಾಟ್‌ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅಕ್ಷಯ್ ಕುಮಾರ್ ನಟಿಸಿದ್ದ 'ಲಕ್ಷ್ಮಿ' ಸಿನಿಮಾ ಸಹ ದಾಖಲೆ ಮೊತ್ತಕ್ಕೆ ಡಿಸ್ನಿ ಹಾಟ್‌ಸ್ಟಾರ್‌ಗೆ ವ್ಯಾಪಾರವಾಗಿತ್ತು. ವೀಕ್ಷಣೆಯಲ್ಲೂ ದಾಖಲೆ ಬರೆದಿತ್ತು.

Recommended Video

ಬೆಂಗಳೂರಿನ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ವಿತರಿಸಲು ಮುಂದಾದ ಸುನೀಲ್ ಶೆಟ್ಟಿ | Filmibeat Kannada
ಹಲವು ಸಿನಿಮಾಗಳು ಅಕ್ಷಯ್ ಕುಮಾರ್ ಕೈಯಲ್ಲಿವೆ

ಹಲವು ಸಿನಿಮಾಗಳು ಅಕ್ಷಯ್ ಕುಮಾರ್ ಕೈಯಲ್ಲಿವೆ

ಅಕ್ಷಯ್ ಕುಮಾರ್ ನಟಿಸುತ್ತಿರುವ 'ರಾಮ್ ಸೇತು' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಕಾರಣ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ನಿಂತಿದೆ. 'ರಾಮ್ ಸೇತು' ಹೊರತುಪಡಿಸಿ 'ಹೇರಾಪೇರಿ 3', 'ಮಹಿಳಾ ಮಂಡಳಿ', 'ಪೃಥ್ವಿರಾಜ್ ಕಪೂರ್', 'ಬಚ್ಚನ್ ಪಾಂಡೆ', 'ರಕ್ಷಾ ಬಂಧನ್', 'ರೌಡಿ ರಾಥೋಡ್ 2' ಸಿನಿಮಾಗಳು ಅಕ್ಷಯ್‌ ಕೈಯಲ್ಲಿವೆ.

More from Filmibeat

English summary
Bollywood actor Akshay Kumar's three movies are ready to release. Bell Bottom likely to go release on OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X