ಮತ್ತೆ ಒಂದಾದ್ರು ಸೈಫ್- ಅಕ್ಷಯ್; ರೀಮೆಕ್ ಸಿನಿಮಾ ಜೊತೆಗೆ ಬಾಲಿವುಡ್‌ಗೆ ಕೆವಿಎನ್ ಎಂಟ್ರಿ

ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿಖಾನ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಥೀಸ್‌ಪೈನ್ ಫಿಲ್ಮ್ಸ್ ಸಂಸ್ಥೆ ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದೆ. ಚಿತ್ರಕ್ಕೆ 'ಹೈವಾನ್' ಎಂಬ ಟೈಟಲ್ ಫಿಕ್ಸ್ ಆಗಿದೆ.

ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೆ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿಖಾನ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದೆ. ಇದು ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ 'ಒಪ್ಪಂ' ಸಿನಿಮಾ ರೀಮೆಕ್ ಎನ್ನಲಾಗ್ತಿದೆ. ಮೂಲ ಚಿತ್ರವನ್ನು ಕೂಡ ಪ್ರಿಯದರ್ಶನ್ ಕಟ್ಟಿಕೊಟ್ಟಿದ್ದರು. ಅದೇ ಕಥೆಯನ್ನು ಈಗ ಹಿಂದಿ ಪ್ರೇಕ್ಷಕರ ಮುಂದೆ ಇಡುತ್ತಾರೆ ಎನ್ನಲಾಗ್ತಿದೆ.

Akshay Kumar Saif Ali Khan Reunite After 17 Years for Priyadarshan s Haiwaan Backed by KVN Productions

ಪ್ಯಾನ್ ಇಂಡಿಯಾ ಹಾಗೂ ಓಟಿಟಿ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಚಿತ್ರಗಳ ಹಾವಳಿ ಕಮ್ಮಿ ಆಗಿದೆ. ಒಮ್ಮೆಲೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ. ಓಟಿಟಿ ಬಂದ ಬಳಿಕ ಪರಭಾಷೆಯ ಒಳ್ಳೆ ಸಿನಿಮಾಗಳನ್ನು ಜನ ಹೆಚ್ಚು ನೋಡುತ್ತಿದ್ದಾರೆ. ಹಾಗಾಗಿ ರೀಮೆಕ್ ಸಿನಿಮಾ ನೋಡುವವರಿಲ್ಲ. ಆದರೆ 'ಒಪ್ಪಂ' ಸಿನಿಮಾ 9 ವರ್ಷಗಳ ಹಿಂದೆ ಬಂದಿತ್ತು. ಆಗ ಓಟಿಟಿ, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇರಲಿಲ್ಲ. ಹಿಂದಿ ಪ್ರೇಕ್ಷಕರು ಈ ಸಿನಿಮಾ ನೋಡಿರಲಿಲ್ಲ. ಹಾಗಾಗಿ ಅದೇ ಕಥೆ ರೀಮೆಕ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಅಂದಹಾಗ 'ಒಪ್ಪಂ' ಚಿತ್ರವನ್ನು ಕನ್ನಡದಲ್ಲಿ ಶಿವಣ್ಣ ರೀಮೆಕ್ ಮಾಡಿದ್ದರು. 'ಕವಚ' ಹೆಸರಿನಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇದೀಗ 'ಹೈವಾನ್' ಹೆಸರಿನಲ್ಲಿ ಬಾಲಿವುಡ್ ಅಂಗಳಕ್ಕೆ ಕಥೆ ಹೋಗುತ್ತಿದೆ. ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಸಂಸ್ಥೆ ಈಗಾಗಲೇ ಪರಭಾಷೆಯಲ್ಲಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ. ಶೀಘ್ರದಲ್ಲೇ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ಶುರುವಾಗಲಿದೆ.

Akshay Kumar Saif Ali Khan Reunite After 17 Years for Priyadarshan s Haiwaan Backed by KVN Productions

ತಮಿಳಿನಲ್ಲಿ 'ಕೈದಿ-2' ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಲಿದೆ. ತೆಲುಗಿನಲ್ಲಿ ಚಿರಂಜೀವಿ- ಬಾಬಿ ಕಾಂಬಿನೇಷನ್ ಸಿನಿಮಾ ಘೋಷಣೆ ಆಗಿದೆ. ಕನ್ನಡದಲ್ಲಿ 'ಕೆಡಿ', 'ಟಾಕ್ಸಿಕ್' ಮಾತ್ರವಲ್ಲ ದರ್ಶನ್ ಜೊತೆಗೂ ಒಂದು ಸಿನಿಮಾ ಘೋಷಣೆ ಆಗಿದೆ. ಇದೆಲ್ಲದರ ನಡುವೆ ಈಗ ಬಾಲಿವುಡ್ ಅಂಗಳಕ್ಕೆ ಸಂಸ್ಥೆ ಎಂಟ್ರಿ ಕೊಟ್ಟಿದೆ. ಕೊಚ್ಚಿಯಲ್ಲಿ 'ಹೈವಾನ್' ಸಿನಿಮಾ ಮುಹೂರ್ತ ನೆರವೇರಿದೆ.

ಪ್ರಿಯದರ್ಶನ್ ಹಾಗೂ ಸೈಫ್ ಅಲಿಖಾನ್ ಜೊತೆ ಕೆಲಸ ಮಾಡುತ್ತಿರುವ ಬಗ್ಗೆ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಒಪ್ಪಂ' ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಸಮುದ್ರಖನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅದೇ ಪಾತ್ರಗಳನ್ನು ಸೈಫ್, ಅಕ್ಷಯ್ ಮಾಡುವ ಸಾಧ್ಯತೆ ದಟ್ಟವಾಗಿದೆ. 2016ರಲ್ಲಿ ತೆರೆಗೆ ಬಂದಿದ್ದ ಆಕ್ಷನ್ ಥ್ರಿಲ್ಲರ್ 'ಒಪ್ಪಂ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೇ ಕಥೆ ಈಗ ಬಾಲಿವುಡ್‌ನಲ್ಲಿ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.

'ತಶಾನ್' ಚಿತ್ರದಲ್ಲಿ ಕೊನೆಯದಾಗಿ ಅಕ್ಷಯ್ ಹಾಗೂ ಸೈಫ್ ನಟಿಸಿದ್ದರು. 'ಮೈನ್ ಖಿಲಾಡಿ ತು ಅನಾರಿ' (1994), 'ಯೇ ದಿಲ್ಲಗಿ' (1994), 'ತು ಚೋರ್ ಮೈನ್ ಸಿಪಾಹಿ' (1996) ಹಾಗೂ ಕೀಮತ್ (1998) ಸಿನಿಮಾಗಳಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು.

More from Filmibeat

English summary
Akshay Kumar and Saif Ali Khan team up after 17 years for Priyadarshan’s action thriller Haiwaan, a remake of Mohanlal’s Oppam. Backed by Kannada’s KVN Productions, the film marks their Bollywood entry.
Read more about: kvn productions akshay kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X