ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್: ಇವರಿಬ್ಬರ ಸಂಭಾವನೆ ಎಷ್ಟು ಅಂತೀರಾ.?

By Harshitha

ಒಂದು ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡಿ ಮುಗಿಸುವ ಕಾಲವೊಂದಿತ್ತು. ಆದ್ರೀಗ, ಕೋಟಿಗೆಲ್ಲಾ ಲೆಕ್ಕವೇ ಇಲ್ಲ ಬಿಡಿ. ಒಂದು ಸಿನಿಮಾ ರಿಲೀಸ್ ಆಗಬೇಕು ಅಂದ್ರೆ ಕರ್ನಾಟಕದಲ್ಲಿ ಕನಿಷ್ಟ ಅಂದರೂ ಐದು ಕೋಟಿ ಬೇಕು. ಇನ್ನೂ ಬಾಲಿವುಡ್ ಮ್ಯಾಟರ್ ಕೇಳಬೇಕಾ.?

ಬಾಲಿವುಡ್ ನಲ್ಲಿ ಸ್ಟಾರ್ ನಟ-ನಟಿಯರ ಸಂಭಾವನೆಯೇ ಕೋಟಿಗಟ್ಟಲೆ.! ಇನ್ನೂ ಒಂದು ಸಿನಿಮಾ ತಯಾರಾಗಿ, ಅದು ಬಿಡುಗಡೆ ಅಗುವ ಹೊತ್ತಿಗೆ ಅದೆಷ್ಟು ಕೋಟಿ ಖರ್ಚಾಗಿರುತ್ತೋ, ಲೆಕ್ಕವೇ ಇಲ್ಲ.

ಅದೆಲ್ಲ ಬಿಡಿ... ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಅಂತ ನಿಮಗೆ ಗೊತ್ತಾ.? ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅಂತ ನೀವು ಊಹಿಸಬಹುದು. ಆದ್ರೆ, ಅವರಿಬ್ಬರೂ ಅಲ್ಲ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್.!

ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯನ್ನ ಪ್ರತಿ ವರ್ಷದಂತೆ ಈ ವರ್ಷವೂ ಫೋರ್ಬ್ಸ್ ಮ್ಯಾಗಝೀನ್ ಪ್ರಕಟಿಸಿದೆ. ಟಾಪ್ 100 ರ ಪಟ್ಟಿಯಲ್ಲಿ ಭಾರತದಿಂದ ಸ್ಥಾನ ಪಡೆದಿರುವವರು ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಮಾತ್ರ.! ಮುಂದೆ ಓದಿರಿ...

ಟಾಪ್ 100 ಪಟ್ಟಿ

ಟಾಪ್ 100 ಪಟ್ಟಿ

ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ನೂರು ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಮೇರಿಕಾದ ಫ್ಲಾಯ್ಡ್ ಮೇವೆದರ್ ಪಾಲಾಗಿದೆ. 41 ವರ್ಷ ವಯಸ್ಸಿನ ಇವರ ವಾರ್ಷಿಕ ಆದಾಯ 285 ಮಿಲಿಯನ್ ಡಾಲರ್.!

ಅಕ್ಷಯ್ ಕುಮಾರ್ ಪಡೆದ ಸ್ಥಾನ ಎಷ್ಟು.?

ಅಕ್ಷಯ್ ಕುಮಾರ್ ಪಡೆದ ಸ್ಥಾನ ಎಷ್ಟು.?

ಫೋರ್ಬ್ಸ್ ಪಟ್ಟಿಯಲ್ಲಿ 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್ 76ನೇ ಸ್ಥಾನ ಪಡೆದಿದ್ದಾರೆ. 50 ವರ್ಷ ವಯಸ್ಸಿನ ಅಕ್ಷಯ್ ಕುಮಾರ್ ರವರ ವಾರ್ಷಿಕ ಆದಾಯ ಎಷ್ಟು ಗೊತ್ತಾ.? 40.5 ಮಿಲಿಯನ್ ಡಾಲರ್ (270 ಕೋಟಿ ರೂಪಾಯಿ).!

82ನೇ ಸ್ಥಾನದಲ್ಲಿ ಸಲ್ಮಾನ್ ಖಾನ್

82ನೇ ಸ್ಥಾನದಲ್ಲಿ ಸಲ್ಮಾನ್ ಖಾನ್

ಫೋರ್ಬ್ಸ್ ಪಟ್ಟಿಯಲ್ಲಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದಾರೆ. 52 ವರ್ಷ ವಯಸ್ಸಿನ ಸಲ್ಮಾನ್ ಖಾನ್ ರವರ ವಾರ್ಷಿಕ ಆದಾಯ 37.7 ಮಿಲಿಯನ್ ಡಾಲರ್ (251 ಕೋಟಿ ರೂಪಾಯಿ).

ಪಟ್ಟಿಯಲ್ಲಿ ಶಾರುಖ್ ಹೆಸರಿಲ್ಲ.!

ಪಟ್ಟಿಯಲ್ಲಿ ಶಾರುಖ್ ಹೆಸರಿಲ್ಲ.!

ಕಳೆದ ವರ್ಷ ಬಿಡುಗಡೆ ಆಗಿದ್ದ ಫೋರ್ಬ್ಸ್ ಪಟ್ಟಿಯಲ್ಲಿ ಶಾರುಖ್ ಖಾನ್ 65ನೇ ಸ್ಥಾನ ಪಡೆದಿದ್ದರು. ಆದ್ರೆ, ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಶಾರುಖ್ ಹೆಸರನ್ನ ಕೈಬಿಡಲಾಗಿದೆ.

ಅಚ್ಚರಿ ಅಂದ್ರೆ ಇದೇ.!

ಅಚ್ಚರಿ ಅಂದ್ರೆ ಇದೇ.!

ಈ ಹಿಂದಿನ ಫೋರ್ಬ್ಸ್ ಪಟ್ಟಿಗಳಲ್ಲಿ ಭಾರತದಿಂದ ಅಮಿತಾಬ್ ಬಚ್ಚನ್, ಮಹೇಂದ್ರ ಸಿಂಗ್ ಧೋನಿ, ರಣ್ಬೀರ್ ಕಪೂರ್ ಅಂತಹ ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದರು. ಆದ್ರೆ, ಈ ವರ್ಷ ಇವರುಗಳ ಹಸರು ಫೋರ್ಬ್ಸ್ ನಲ್ಲಿ ಪತ್ತೆಯೇ ಇಲ್ಲ.!

More from Filmibeat

English summary
Bollywood Actor Akshay Kumar and Salman Khan have made it to World's highest paid Entertainers list by Forbes's 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X