For Quick Alerts
  ALLOW NOTIFICATIONS  
  For Daily Alerts

  ರಾಮ, ಕೃಷ್ಣ, ಗಾಂಧಿಯಂತೆ ನೀವು: ಮೋದಿ ಹುಟ್ಟುಹಬ್ಬಕ್ಕೆ ತಾರೆಯರ ಶುಭಾಷಯ

  |

  ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 72ನೇ ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಭಾರತೀಯ ಚಿತ್ರರಂಗದ ನಟ-ನಟಿಯರು ಶುಭಾಷಯ ಕೋರಿದ್ದು, ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಶುಭಾಷಗಳನ್ನು ತಿಳಿಸಿದ್ದಾರೆ.

  ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್​ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಒಬ್ಬರು ಉತ್ತಮ ನಾಯಕ, ತಾನು ತಿಳಿದಿರುವ ದಾರಿಯನ್ನು , ತಾನು ಸಾಗಿ ಬಂದ ದಾರಿಯನ್ನು, ಇತರಿಗೂ ತಿಳಿಸುವ ಗುರು ಎಂದು ಬರೆದುಕೊಂಡಿರುವ ನಟ ಜಗ್ಗೇಶ್​, ನಿಮ್ಮ ಮೇಲಿನ ಪ್ರೀತಿಗಾಗಿ ಎಂದು ಪ್ರಧಾನಿಗಳ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಜಗ್ಗೇಶ್ ಮಾತ್ರವೇ ಅಲ್ಲದೆ ಬಾಲಿವುಡ್ ನ ಹಲವು ಸ್ಟಾರ್ ನಟರು, ನಿರ್ದೇಶಕರು ಹಲವರು ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮೋದಿಯವರಿಗೆ ಶುಭಾಷಯ ಕೋರಿದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

  ಸೋಶಿಯಲ್​ ಮೀಡಿಯಾದಲ್ಲಿ ಸ್ಪೆಷಲ್​ ಪೋಸ್ಟ್​

  ಬಹುಭಾಷಾ ನಟ ರಿಯಲ್​ ಹೀರೋ ನಟ ಸೋನುಸೂದ್​ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಸೋನು ಸೂದ್​ ಗೌರಯುತರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಷಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ಖುಷಿ ಕೊಟ್ಟು ಕಾಪಾಡಲಿ ಎಂದಿದ್ದಾರೆ.

  ಪ್ರಧಾನಿ ಮೋದಿಗೆ ಶಾರುಖ್​ ಖಾನ್​ ಶುಭಾಷಯ

  ಬಾಲಿವುಡ್​​ನ ಬಹು ಬೇಡಿಕೆಯ ನಟ ಶಾರುಖ್​ ಖಾನ್​ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ನಮ್ಮ ದೇಶದ ಅಭಿವೃದ್ಧಿಗಾಗಿ ಶ್ರಮಸುತ್ತಿರುವ ನಿಮ್ಮ ಶೃದ್ಧೆಯನ್ನು ದೇಶದ ಜನರು ಮೆಚ್ಚಿಕೊಂಡಿದ್ದಾರೆ. ನಿಮ್ಮ ಕನಸುಗಳೆಲ್ಲ ನನಸಾಗಲಿ. ನಿಮ್ಮ ಕನಸು ನನಸಾಗಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ. ಇಂದಾದರೂ ಒಂದು ದಿನ ರಜೆ ತೆಗೆದುಕೊಳ್ಳಿ. ನಿಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿ ಎಂದು ಶಾರುಕ್​ ಖಾನ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  ನಿಮ್ಮ ನಾಯಕತ್ವದ ಗುಣ ನಮಗೆ ಸ್ಫೂರ್ತಿ ಎಂದ ಬಾಲಿವುಡ್​ ನಟ

  ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ನಿಮ್ಮ ನಡೆ, ನಿಮ್ಮ ವ್ಯಕ್ತತ್ವ, ನಿಮ್ಮ ನಾಯಕತ್ವದ ಗುಣ ಸೇರಿದಂತೆ ನಿಮ್ಮ ಅನೇಕ ಗುಣಗಳು ನನಗೆ ಸ್ಫೂರ್ತಿ ನೀಡಿವೆ. ನಿಮಗೆ ದೇವರು ಆರೋಗ್ಯ, ಖುಷಿ, ನೀಡಲಿ. ನಿಮ್ಮ ಈ ವರ್ಷ ಅತ್ಯುತ್ತಮವಾಗಿರಲಿ ಎಂದು ಪ್ರಧಾನಿಗಳಿಗೆ ಅಕ್ಷಯ್​ ಕುಮಾರ್​ ಶುಭಾಷಯ ತಿಳಿಸಿದ್ದಾರೆ.

   ನಿಮ್ಮಂತಹ ನಾಯಕರನ್ನು ಪಡೆದ ನಾವೇ ಧನ್ಯರು

  ನಿಮ್ಮಂತಹ ನಾಯಕರನ್ನು ಪಡೆದ ನಾವೇ ಧನ್ಯರು

  ಇನ್ನು ಬಾಲಿವುಡ್​ ನಟಿ ಕಂಗನಾ ರಣಾವತ್​ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ಮೋದಿ ಅವರ ಬಗ್ಗೆ ಸುಧೀರ್ಘವಾಗಿ ಬರೆದು ಶುಭಾಷಯ ಕೋರಿದ್ದಾರೆ. ಚಹಾ ಮಾರುತ್ತಿದ್ದ ಯುವಕನೊಬ್ಬ ಇಂದು ವಿಶ್ವದ ಅತ್ಯುನ್ನತ ವ್ಯಕ್ತಿಯಾಗಿದ್ದಾರೆ. ಎಂತಹ ಅದ್ಭುತ ದಾರಿ. ರಾಮ, ಕೃಷ್ಣ, ಗಾಂಧಿಯಂತೆ ನೀವು. ಜನರು ಸದಾ ನಿಮ್ಮನ್ನು ಪ್ರೀತಿಸುತ್ತಾರೆ. ನಿಮ್ಮ ಬಲಿಷ್ಠತೆಯನ್ನು ಯಾವುದರಿಂದಲೂ ಅಳಿಸಲು ಸಾಧ್ಯವಿಲ್ಲ. ನಿಮ್ಮಂತಹ ನಾಯಕರನ್ನು ಪಡೆದ ನಾವೇ ಧನ್ಯರು ಎಂದು ಪ್ರಧಾನಿಗಳನ್ನು ಹೊಗಳಿ ಸುಧೀರ್ಷ ಶುಭಾಷಯ ತಿಳಿಸಿದ್ದಾರೆ.

  English summary
  Akshay Kumar, Kngana Ranaut, Sonu Sood and more celebrities warm wishes to PM Narendra Modi birthday.
  Saturday, September 17, 2022, 19:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X