For Quick Alerts
  ALLOW NOTIFICATIONS  
  For Daily Alerts

  ವೀಲ್ ಚೇರ್ ನಲ್ಲಿರುವ ತಾಯಿಯನ್ನು ಸಿಂಗಪೂರ ಸುತ್ತಿಸಿದ ಅಕ್ಷಯ್

  |
  ಅಕ್ಷಯ್ ಕುಮಾರ್ ತಾಯಿಗೆ ಕೊಟ್ಟ ಉಡುಗೊರೆ ಏನ್ ಗೊತ್ತಾ? | FILMIBEAT KANNADA

  'ಮಿಷನ್ ಮಂಗಲ್' ಸ್ಟಾರ್ ಅಕ್ಷಯ್ ಕುಮಾರ್ ನಿಜವಾದ ಫ್ಯಾಮಿಲಿ ಮ್ಯಾನ್. ತಮ್ಮ ಸಿನಿಮಾಗಳಿಗೆ, ಕೆಲಸಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತರೆಯೋ ಅದೇ ರೀತಿ ಕುಟುಂಬಕ್ಕೆ ಕೂಡ ಪ್ರಾಮುಖ್ಯತೆ ಕೊಡುತ್ತಾರೆ.

  ಇದೀಗ ಅಕ್ಷಯ್ ಕುಮಾರ್ ಮಾಡಿರುವ ಕೆಲಸವೊಂದು ಅಭಿಮಾನಿಗಳ ಗಮನ ಸೆಳೆದಿದೆ. ತಾಯಿಯ ಆಸೆಯನ್ನು ಈಡೇರಿಸಿದ ಖುಷಿ ಅವರದ್ದಾಗಿದೆ. ಹುಟ್ಟುಹಬ್ಬಕ್ಕೆ ಅಮ್ಮನಿಗೆ ಅಕ್ಷಯ್ ಕೊಟ್ಟ ಪ್ರೀತಿಯ ಉಡುಗೊರೆ ಚೆಂದವವಾಗಿದೆ.

  ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್ ತಾಯಿ ಅರುಣ ಭಾಟಿಯಾ ಅವರಿಗೆ ಸಿಂಗಾಪುರ ಮೆಚ್ಚಿನ ಸ್ಥಳ. ಹೀಗಾಗಿ ಅವರ ಹುಟಟುಹಬ್ಬದ ದಿನ ತಾಯಿಯನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಫೇವರೇಟ್ ಜಾಗಗಳಿಗೆ ಕರೆದುಕೊಂಡು ಹೋಗಿದ್ದಾರೆ.

  ವೀರ್ ಚೇರ್ ಮೇಲೆ ಕೂತ ತಾಯಿಯನ್ನು ಅಕ್ಷಯ ಸಿಂಗಪೂರ ಸುತ್ತಿಸಿರುವ ವಿಡಿಯೋವನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಸಂಖ್ಯೆ ಫಾಲೋವರ್ಸ್ ಗಳು ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಷಯ್ ತಾಯಿಗೆ ತೋರುವ ಪ್ರೀತಿಯ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

  ಬಾಲಿವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ ಅಕ್ಷಯ್ ಕುಮಾರ್ಬಾಲಿವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ ಅಕ್ಷಯ್ ಕುಮಾರ್

  ಅಂದಹಾಗೆ, ಅಕ್ಷಯ್ ಕುಮಾರ್ ನಟನೆಯ 'ಗುಡ್ ನ್ಯೂಜ್' ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರದ ನಂತರ 'ಸೂರ್ಯವಂಶಿ', 'ಲಕ್ಷ್ಮಿ ಬಾಂಬ್', 'ಪೃಥ್ವಿರಾಜ್' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

  English summary
  Akshay Kumar shared a cute video with his mother Aruna Bhatia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X