»   » ಐಸಿಸಿ ಮಹಿಳಾ ವಿಶ್ವಕಪ್: ಬೇಸರದ ಹೃದಯಗಳನ್ನು ನಗಿಸಿದ ಅಕ್ಷಯ್

ಐಸಿಸಿ ಮಹಿಳಾ ವಿಶ್ವಕಪ್: ಬೇಸರದ ಹೃದಯಗಳನ್ನು ನಗಿಸಿದ ಅಕ್ಷಯ್

Posted By:
Subscribe to Filmibeat Kannada

ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತಾವು ಎಷ್ಟೇ ಬ್ಯುಸಿ ಆಗಿದ್ದರೂ ಸಹ ದೇಶದ ರಿಯಲ್ ಹೀರೋಗಳು ಸೈನಿಕರು ಮತ್ತು ಕ್ರೀಡಾಪಟುಗಳ ಸಾಧನೆ ಸೇವೆಗೆ ಗೌರವ ಸಲ್ಲಿಸುವುದನ್ನು ಎಂದೂ ಮರೆಯುವುದಿಲ್ಲ.

ದೇಶದ ಗಂಭೀರ ಸಮಸ್ಯೆ ಬಗ್ಗೆ ಅಕ್ಷಯ್ ಕುಮಾರ್ ಟ್ವೀಟ್! ಏನದು?

ಸದ್ಯ ಸಾಲು ಸಾಲು ಸಿನಿಮಾಗಳ ಯಶಸ್ಸಿನ ಖುಷಿಯಲ್ಲಿರುವ ಅಕ್ಷಯ್ ಕುಮಾರ್ ಭಾನುವಾರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರು ಪಂದ್ಯವಾಡಿ ಮುಗಿಸಿದ ನಂತರ ಅವರನ್ನು ಭೇಟಿ ಮಾಡಿದ್ದರು. ಪಂದ್ಯದಲ್ಲಿ ಭಾರತ ತಂಡ ಸೋತರು ಸಹ ಅವರ ರೋಚಕ ಆಟವನ್ನು ಮೆಚ್ಚಿದ ನಟ ಕ್ರೀಡಾಪಟುಗಳೊಂದಿಗೆ ಮಾತನಾಡಿ ಅವರ ಮುಖದ ಮೇಲೆ ಮಂದಹಾಸ ಬೀರುವಂತೆ ಮಾಡಿದರು. ಇದಕ್ಕಿಂತ ವಿಶೇಷ ಅಂದ್ರೆ ಅಕ್ಷಯ್ ಕುಮಾರ್ ಈ ಪಂದ್ಯನೋಡಲು ಬಂದುದ್ದೇ ಒಂದು ಕುತೂಹಲಕಾರಿ ಸಂಗತಿ. ಅದೇನು? ತಿಳಿಯಲು ಮುಂದೆ ಓದಿ...

ಓಡಿ ಬಂದು ಟ್ರೈನ್ ಕ್ಯಾಚ್ ಮಾಡಿದ ಆಕ್ಷನ್ ಕಿಂಗ್

ಅಕ್ಷಯ್ ಕುಮಾರ್ ಸಿನಿಮಾ ಪ್ರಿಯರು ಮಾತ್ರವಲ್ಲದೇ ಕ್ರಿಕೆಟ್ ಪ್ರಿಯರು ಸಹ. ಭಾನುವಾರ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಆನ್‌ ಟೈಮ್‌ಗೆ ಹಾಜರಾಗುವ ದೃಷ್ಟಿಯಿಂದ, ಅವರು ಜೀವನದಲ್ಲೇ ಮೊದಲ ಬಾರಿಗೆ ಟ್ರೈನ್‌ಗಾಗಿ ಹೆಚ್ಚು ಓಡಿದ್ದಾರೆ. ಪಂದ್ಯ ವೀಕ್ಷಣೆಯ ಕುತೂಹಲ ಮತ್ತು ಭಾರತ ವನಿತೆಯರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ರೀತಿ ಶ್ರಮ ಪಟ್ಟಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.

ಭಾರತ ತಂಡಕ್ಕೆ ಮನೋಸ್ಥೈರ್ಯ ತುಂಬಿದ ಅಕ್ಷಯ್

ಅಂದಹಾಗೆ ಅಕ್ಷಯ್ ಕುಮಾರ್ ರವರು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಫೈನಲ್ ಮ್ಯಾಚ್‌ನಲ್ಲಿ ಸೋತರು ಸಹ ಖುಷಿಯಾಗಿದ್ದರು. ಅದಕ್ಕೆ ಕಾರಣ ಭಾರತ ವನಿತೆಯರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆಡಿದ ರೋಚಕ ಆಟ ಆ ರೀತಿ ಇತ್ತು. ಪಂದ್ಯ ಮುಗಿದ ನಂತರ ಅವರನ್ನು ಕ್ರೀಡಾಂಗಣದಲ್ಲಿಯೇ ಭೇಟಿ ಮಾಡಿ ಪಂದ್ಯ ಸೋತು ಮೌನದಲ್ಲಿದ್ದ ವನಿತೆಯರ ಮುಖದಲ್ಲಿ ಮನೋಸ್ಥೈರ್ಯ ತುಂಬಿ ನಗಿಸಿದರು. ಅವರೊಂದಿಗೆ ಮಾತನಾಡಿದ ಕ್ಷಣದ ಫೋಟೋ ಸಹಿತ ಅಕ್ಷಯ್ 'ದುಃಖದಲ್ಲಿರುವ ಹೃದಯಗಳು ಕೂಡ ನಗಬಲ್ಲವು. ಈ ಮಹಿಳೆಯರು ಕ್ರೀಡೆಯಲ್ಲಿ ಒಂದು ರೀತಿಯ ಕ್ರಾಂತಿಯನ್ನು ಆರಂಭಿಸಿದ್ದಾರೆ. ಇದಕ್ಕಿಂತ ಹೆಮ್ಮೆ ಪಡಲು ಸಾಧ್ಯವಿಲ್ಲ' ಎಂದು ಟ್ವಿಟ್ ಮಾಡಿದ್ದಾರೆ.

ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ

ಅಕ್ಷಯ್ ಕುಮಾರ್ ಪಂದ್ಯ ವೀಕ್ಷಣೆ ನಂತರ ಲಂಡನ್ ನಲ್ಲಿಯೇ ತಮ್ಮ ಬಹು ನಿರೀಕ್ಷಿತ ಚಿತ್ರ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ..

ಸಿನಿಮಾ ಬಿಡುಗಡೆ ಯಾವಾಗ?

ಪ್ರಧಾನಿ ನರೇಂದ್ರ ಮೋದಿ ರವರ 'ಸ್ವಚ್ಛ ಭಾರತ್' ಅಭಿಯಾನಕ್ಕೆ ಸಪೋರ್ಟ್ ಮಾಡುವ ''ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರವು ಆಗಸ್ಟ್ 11 ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೊತೆಯಾಗಿ ಭೂಮಿ ಪೆಡ್ನೇಕರ್ ನಟಿಸಿದ್ದಾರೆ.

ಅಕ್ಷಯ್ ಚಿತ್ರದ ಟ್ರೈಲರ್‌ಗೆ ಸಿಬಿಎಫ್‌ಸಿ ಅಧ್ಯಕ್ಷ ಹೀಗಾ ಹೇಳೋದು..!

English summary
Akshay Kumar shares a light moment with Indian Women's Cricket team on field

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada