For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ 'ದಿಲ್ ಬೇಚಾರ' ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್ 'ಲಕ್ಷ್ಮೀ' ಸಿನಿಮಾ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷ್ಮೀ ಸಿನಿಮಾ ರಿಲೀಸ್ ಆಗಿದೆ. ನವೆಂಬರ್ 9ರಂದು ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಾದಗಳ ನಡುವೆಯೂ ಸಿನಿಮಾ ರಿಲೀಸ್ ಆಗಿ ಅತೀ ಹೆಚ್ಚು ಮಂದಿ ವೀಕ್ಷಿಸಿ ದಾಖಲೆ ನಿರ್ಮಿಸಿದೆ.

  ಹೌದು, ವೀಕ್ಷಣೆಯಲ್ಲಿ ಈ ಸಿನಿಮಾ ದಾಖಲೆ ನಿರ್ಮಿಸಿದೆ ಎಂದು ಡಿಸ್ನಿ ಪ್ಲಸ್ ಅನೌನ್ಸ್ ಮಾಡಿದೆ. ಆನ್ ಲೈನ್ ಪ್ಲಾಟ್ ಫಾರ್ಮ್ ಪ್ರಕಾರ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡು ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿದೆಯಂತೆ. ವಿಶೇಷ ಎಂದರೆ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೇಚಾರ ಚಿತ್ರದ ದಾಖಲೆಯನ್ನು ಲಕ್ಷ್ಮೀ ಸಿನಿಮಾ ಮುರಿದಿದೆ.

  ಈ ಕಾರಣಕ್ಕಾಗಿ ಅಕ್ಷಯ್ ಕುಮಾರ್ ಜೊತೆ ನಟಿಸುವುದಿಲ್ಲ ಎಂದಿದ್ದ ಶಾರುಖ್ ಖಾನ್

  ಈ ಬಗ್ಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಲಕ್ಷ್ಮೀ ಸಿನಿಮಾ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಪೋಸ್ಟ್ ಮಾಡಿದೆ. ಸುಶಾಂತ್ ಸಿಂಗ್ ದಿಲ್ ಬೇಚಾರ ಸಿನಿಮಾ ರಿಲೀಸ್ ಆದ ಸಮಯದಲ್ಲೂ ಡಿಸ್ನಿ ಪ್ಲಸ್ ಇದೇ ರೀತಿಯ ಪೋಸ್ಟ್ ಮಾಡಿ, ದಿಲ್ ಬೇಚಾರ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ದಾಖಲೆ ನಿರ್ಮಿಸಿದೆ ಎಂದಿದ್ದರು.

  ಲಕ್ಷ್ಮೀ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಘವ್ ಲಾರೆನ್ಸ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅದ್ಭುತ ವ್ಯಕ್ತವಾದ ಖುಷಿಯನ್ನು ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

  ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಬಗ್ಗೆ ಮಾತನಾಡಿದ ಕೈಮರ ಚಿತ್ರತಂಡ | Filmibeat Kannada

  'ಲಕ್ಷ್ಮೀ ಸ್ವೀಕರಿಸಿದ ಪ್ರತಿಕ್ರಿಯೆಯಿಂದ ನಾನು ತುಂಬಾ ಖುಷಿಯಾಗಿದ್ದೇನೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಯಲ್ಲಿ ದೇಶಾದ್ಯಂತ ಪ್ರೇಕ್ಷಕರು ಮತ್ತು ಅಭಿಮಾನಿಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಗೆ ಲಾಗ್ ಇನ್ ಆಗಿದ್ದಾರೆ. ದಾಖಲೆಗಳನ್ನು ಬ್ರೇಕ್ ಮಾಡುವುದನ್ನು ಯಾರು ಇಷ್ಟ ಪಡುವುದಿಲ್ಲ. ಅದು ಬಾಕ್ಸ್ ಆಫೀಸ್ ಆಗಿರಲಿ ಅಥವಾ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಆಗಿಲಿ.' ಎಂದಿದ್ದಾರೆ.

  English summary
  Akshay Kumar starrer Laxmi movie breaks viewership record on Disney plus Hotstar. Laxmi movie beats Sushant Singh's Dill Bechara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X