ಚಾಲೆಂಜ್ ಸ್ವೀಕರಿಸಿ ಬಹಿರಂಗವಾಗಿ 'ಸ್ಯಾನಿಟರಿ ಪ್ಯಾಡ್' ಹಿಡಿದ ಬಾಲಿವುಡ್
ವಿಭಿನ್ನ ಸಿನಿಮಾಗಳತ್ತ ಗಮನ ಹರಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್. ಕೇವಲ ಬಾಲಿವುಡ್ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೆ ಇಡೀ ಭಾರತದ ಸಿನಿಪ್ರಿಯರ ಗಮನವನ್ನ ತನ್ನತ್ತ ಸೆಳೆಯುವಂತಹ ಪಾತ್ರಗಳನ್ನ ಮತ್ತು ಚಿತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.
ಸಿನಿಮಾತಂಡ ಚಿತ್ರದ ಪ್ರಚಾರಕ್ಕಾಗಿ ಸ್ಯಾನಿಟರಿ ಪ್ಯಾಡ್ ಗಳನ್ನ ಹಿಡಿರು ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್ ನಲ್ಲಿ ಅಪ್ಲೌಡ್ ಮಾಡುವ ಚಾಲೆಂಜ್ ಅನ್ನು ಅಭಿಮಾನಿಗಳಿಗೆ ನೀಡಿತ್ತು. ಸಾಮಾನ್ಯ ಪ್ರೇಕ್ಷಕರಿಗಿಂತಲೂ ಈ ಚಾಲೆಂಜ್ ಅನ್ನು ಬಿಟೌನ್ ನ ಸ್ಟಾರ್ ಗಳು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ.

ತಮ್ಮದೇ ಸ್ಟೈಲ್ ನಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನ ಹಿಡಿದು ಚಿತ್ರಕ್ಕೆ ಪ್ರಚಾರ ಮಾಡಿದ್ದಾರೆ. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್, ಅಲಿಯಾ ಭಟ್ , ಟ್ವಿಂಕಲ್ ಖನ್ನಾ, ಸೋನಂ ಕಪೂರ್. ರಾಧಿಕಾ ಆಪ್ಟೆ, ಶಬಾನಾ ಆಜ್ಮಿ, ಅನಿಲ್ ಕಪೂರ್ ಹಾಗೂ ವಿರಾಟ್ ಕೂಹ್ಲಿ ಸ್ಯಾನಿಟರಿ ಪ್ಯಾಡ್ ಹಿಡಿದಿರುವ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಅಪ್ಲೌಡ್ ಮಾಡಿದ್ದಾರೆ.

ಇಂದಿಗೂ ಕೂಡ ನೈಸರ್ಗಿಕವಾಗಿ ಆಗುವ ಋತುಸ್ರಾವದ ಬಗ್ಗೆ ಬಹಿರಂಗವಾಗಿ ಮಾತನಾಡಲು ಜನರು ಹಿಂಜರಿಯುತ್ತಾರೆ. ಆದರೆ ಇಂತಹ ಮನಸ್ಥಿತಿಯಿಂದ ಹೊರಬರಬೇಕು ಎನ್ನುವ ಸಂದೇಶವನ್ನ ಸಾರುವ ಪ್ಯಾಡ್ ಮ್ಯಾನ್ ಸಿನಿಮಾದ ಪ್ರಚಾರದ ಅಭಿಯಾನಕ್ಕೆ ಎಲ್ಲೆಡೆ ವ್ಯಾಪಕವಾದ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications










